ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಪರಿಶ್ರಮ ಮತ್ತು ತಾಳ್ಮೆಯಿಂದ ಮಾತ್ರ ಯಶಸ್ಸು: ಪೆರೆಸಂದ್ರ ಎಂ.ವೆಂಕಟೇಶ್

ಇಂದಿನ ಆಧುನಿಕ ಜಗತ್ತು ಪ್ರತಿಭೆಗೆ ಮನ್ನಣೆ ನೀಡುವುದರಿಂದ ಪರಿಶ್ರಮ ಅಗತ್ಯವಾಗಿ ಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳು ನಿರಂತರವಾಗಿ ಓದಿನ ಕಡೆ ಗಮನ ಹರಿಸ ಬೇಕು. ಈ ಸಂಸ್ಥೆಯು ನೀಡುವ ತರಬೇತಿಯನ್ನು ಶ್ರದ್ಧೆಯಿಂದ ಪಡೆದು ಬದುಕಿನಲ್ಲಿ ಯಶಸ್ವಿಯಾಗ ಬೇಕೆಂದು ತಿಳಿಸಿದರು

ಪರಿಶ್ರಮ ಮತ್ತು ತಾಳ್ಮೆಯಿಂದ ಮಾತ್ರ ಯಶಸ್ಸು

ಪರಿಶ್ರಮ ಮತ್ತು ತಾಳ್ಮೆಯಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಪೆರೇಸಂದ್ರ ಎಂ. ವೆಂಕಟೇಶ್ (ಎಂ.ವಿ) ತಿಳಿಸಿದರು.

Ashok Nayak Ashok Nayak Jul 28, 2025 1:14 AM

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಮಹಾಕಾಳಿ ರಸ್ತೆಯಲ್ಲಿರುವ ಎಲ್ಇಎಫ್ ಬ್ಯಾಂಕಿಂಗ್ ಕೋಚಿಂಗ್ ಸೆಂಟರ್ ನಡೆಸುತ್ತಿರುವ ಮೂರನೇ ಬ್ಯಾಚ್‌ನ ಸಮಾರಂಭದ ಉದ್ಘಾಟನೆಯನ್ನು ಕೋಚಿಂಗ್ ಸೆಂಟರ್‌ನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ಎಂ.ವಿ.ಸರ್ ಎಂದೇ ಖ್ಯಾತ ಭೌತಶಾಸ್ತ್ರ ಪ್ರಾಧ್ಯಾಪಕ ಪೆರೆಸಂದ್ರ ಎಂ.ವೆಂಕಟೇಶ್ ಮಾತನಾಡಿದ ಇಂದಿನ ಆಧುನಿಕ ಜಗತ್ತು ಪ್ರತಿಭೆಗೆ ಮನ್ನಣೆ ನೀಡುವು ದರಿಂದ ಪರಿಶ್ರಮ ಅಗತ್ಯವಾಗಿ ಬೇಕು.ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳು ನಿರಂತರವಾಗಿ ಓದಿನ ಕಡೆ ಗಮನ ಹರಿಸಬೇಕು. ಈ ಸಂಸ್ಥೆ ನೀಡುವ ತರಬೇತಿಯನ್ನು ಶ್ರದ್ಧೆಯಿಂದ ಪಡೆದು ಬದುಕಿನಲ್ಲಿ ಯಶಸ್ವಿಯಾಗಬೇಕೆಂದು ತಿಳಿಸಿದರು.

ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ

ಅಧ್ಯಕ್ಷತೆ ವಹಿಸಿದ್ದ ಸತ್ಯನಾರಾಯಣ್ ಮಾತನಾಡಿ, ಈ ತರಬೇತಿ ಸಂಸ್ಥೆಯು ಈಗ ಮೂರನೇ ಬ್ಯಾಚ್‌ನ್ನು ಆರಂಭಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಶಿಕುಮಾರ್, ಶಿವಕುಮಾರ್, ವೆಂಕಟಶಿವ, ರಾಘ ವೇಂದ್ರ, ರಾಜೇಂದ್ರ, ರಾಜು, ಶ್ರೀಲೇಖಾ, ಪೋಷಕರು ಮತ್ತು ಸ್ಪರ್ಧಾಕಾಂಕ್ಷಿಗಳು ಭಾಗವಹಿಸಿ ದ್ದರು.