ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Javeria Abbasi: ವಿಚ್ಛೇದನವಾಗಿ 14ವರ್ಷದ ಬಳಿಕ ಮತ್ತೆ 51ನೇ ವಯಸ್ಸಿಗೆ ಮರುವಿವಾಹವಾದ ಖ್ಯಾತ ನಟಿ!

ಪಾಕಿಸ್ತಾನದ ಟೆಲಿವಿಷನ್ ಸಿರೀಸ್ ಮೂಲಕ ಖ್ಯಾತಿ ಪಡೆದ ನಟಿ ಜವೆರಿಯಾ ಅಬ್ಬಾಸಿ ಅವರು ತಮ್ಮ ಅದ್ಭುತ ಅಭಿನಯದಿಂದ ಅಪಾರ ಅಭಿಮಾನಿಗಳ ಮನಗೆದ್ದ ನಟಿಯಾಗಿದ್ದಾರೆ. 'ದಿಲ್ ದಿಯಾ ದೆಹೆಲೆಜ್', 'ನರಾಜ್', 'ತೆರೆಲಿಯೆ' ಸೇರಿದಂತೆ ಸಾಕಷ್ಟು ಫೇಮಸ್ ಧಾರವಾಹಿಯಲ್ಲಿ ನಟಿಸಿ ಬಳಿಕ ಸಿನಿಮಾದಲ್ಲಿ ಕೂಡ ಅಭಿನಯಿಸಿ ಖ್ಯಾತಿ ಪಡೆದಿದ್ದಾರೆ. ಇದೀಗ ಇವರು ತಮ್ಮ 51ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದು ಅವರ ಅಭಿಮಾನಿಗಳಿಗೆ ಈ ವಿಚಾರ ಅಚ್ಚರಿ ಎನಿಸಿದೆ.

51ನೇ ವಯಸ್ಸಿಗೆ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ!

Profile Pushpa Kumari Aug 6, 2025 5:30 PM

ನವದೆಹಲಿ: ಪಾಕಿಸ್ತಾನದ ಟೆಲಿವಿಷನ್ ಸಿರೀಸ್ ಮೂಲಕ ಖ್ಯಾತಿ ಪಡೆದ ನಟಿ ಜವೆರಿಯಾ ಅಬ್ಬಾಸಿ (Javeria Abbasi) ಅವರು ತಮ್ಮ ಅದ್ಭುತ ಅಭಿನಯದಿಂದ ಅಪಾರ ಅಭಿಮಾನಿಗಳ ಮನಗೆದ್ದ ನಟಿ ಯಾಗಿದ್ದಾರೆ. 'ದಿಲ್ ದಿಯಾ ದೆಹೆಲೆಜ್', 'ನರಾಜ್', 'ತೆರೆಲಿಯೆ' ಸೇರಿದಂತೆ ಸಾಕಷ್ಟು ಫೇಮಸ್ ಧಾರವಾಹಿಯಲ್ಲಿ ನಟಿಸಿ ಬಳಿಕ ಸಿನಿಮಾದಲ್ಲಿ ಕೂಡ ಅಭಿನಯಿಸಿ ಖ್ಯಾತಿ ಪಡೆದಿದ್ದಾರೆ. ಇದೀಗ ಇವರು ತಮ್ಮ 51ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದು ಅವರ ಅಭಿಮಾನಿಗಳಿಗೆ ಈ ವಿಚಾರ ಅಚ್ಚರಿ ಎನಿಸಿದೆ. ಖ್ಯಾತ ಪಾಕಿಸ್ತಾನಿ ನಟಿ ಜವೇರಿಯಾ ಅಬ್ಬಾಸಿ ಅವರು ಅದೀಲ್ ಹೈದರ್ ಅವರನ್ನು ಪ್ರೀತಿಸಿ ವಿವಾಹವಾಗಿ ಒಂದು ವರ್ಷ ಕಳೆಯುತ್ತಿದ್ದು, ಅವರ ಕೆಲವು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸಿನಿಮಾ ಮತ್ತು ಟಿವಿ ಸಿರೀಸ್ ಮೂಲಕ ಜನಪ್ರಿಯರಾದ ನಟಿ ಜವೆರಿಯಾ ಅಬ್ಬಾಸಿ ಅವರು ತಮ್ಮ ಪುನರ್ ವಿವಾಹದಿಂದ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಪಾಕಿಸ್ತಾನಿ ನಟಿ ಜವೇರಿಯಾ ಅಬ್ಬಾಸಿ ಅವರು ಈ ಹಿಂದೆ 1997ರಲ್ಲಿಯೇ ತನ್ನ ಸೋದರ ಸಂಬಂಧಿ , ನಟ, ನಿರ್ಮಾಪಕ ರಾದ ಶಮೂನ್ ಅಬ್ಬಾಸಿ ಅವರನ್ನು ವಿವಾಹವಾಗಿದ್ದರು. ಈ ಮೂಲಕ ಅವರಿಬ್ಬರು 13 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದಾರೆ. ಅವರಿಗೆ ಅಂಜೀಲಾ ಎಂಬ ಮಗಳು ಕೂಡ ಇದ್ದಾರೆ. ಬಳಿಕ ಅವರಿಬ್ಬರ ನಡುವೆ ವೈಮನಸ್ಸು ಮೂಡಿ 2010ರಲ್ಲಿ ವಿಚ್ಛೇದನ ಪಡೆದು ಕೊಂಡರು.

ಶಮೂನ್ ಅಬ್ಬಾಸಿ ಅವರು ನಟಿ ಶೆರ್ರಿಷಾ ಅವರೊಂದಿಗೆ ಮರು ವಿವಾಹವಾಗಿದ್ದಾರೆ. ಈ ಮೂಲಕ ನಟಿ ಜವೆರಿಯಾ ಅವರು ತಮ್ಮ ಪುತ್ರಿಯ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಂಡಿದ್ದಾರೆ. ಈಗ ಅವರ ಪುತ್ರಿ ಕೂಡ ಇವರಂತೆ ನಟನೆಯಲ್ಲಿ ಸಾಧನೆ ಮಾಡುತ್ತಿದ್ದಾರೆ. ನಟಿ ಜವೇರಿಯಾ ಅವರು ತಮ್ಮ ಮಗಳಿಗಾಗಿ ವೃತ್ತಿ ಬದುಕಲ್ಲಿಯೇ ಸಿಕ್ಕಾಪಟ್ಟೆ ಬ್ಯುಸಿಯಾದ ಕಾರಣ ಮರು ವಿವಾಹದ ಯೋಚನೆ ಮಾಡಿರಲಿಲ್ಲ. ಆದರೆ ಕೆಲವು ವರ್ಷದ ಬಳಿಕ ಉದ್ಯಮಿ ಅದೀಲ್ ಹೈದರ್ ಅವರ ಪರಿಚಯವಾಗಿ ಅವರಿಬ್ಬರು ಒಳ್ಳೆ ಸ್ನೇಹಿತರಾಗಿ 2024ರಲ್ಲಿ ಇಬ್ಬರು ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿವಾಹದ ಕೆಲವು ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:Kantara Movie: ಕಾಂತಾರ ಜಗತ್ತಿಗೆ ಜೂ.NTR ಎಂಟ್ರಿ? ಮುಂದಿನ ಸೀಕ್ವೆಲ್‌ನಲ್ಲಿ ಪ್ರಮುಖ ಪಾತ್ರ?

ಅದೀಲ್ ಅವರನ್ನು ಒಂದು ಪಾರ್ಟಿಯಲ್ಲಿ ಮೊದಲ ಬಾರಿ ಭೇಟಿಯಾದೆ. ಆಗ ಅವರು ಈ ಹಿಂದೆ ಮದುವೆಯಾಗಿದ್ದಾರೆಂದು ನನಗೆ ತಿಳಿದಿರಲಿಲ್ಲ. ಉದ್ಯಮಿ ಅದೀಲ್ ಅವರಿಗೂ ಇದು ಎರಡನೇ ಮದುವೆಯಾಗಿದ್ದ ಕಾರಣ ಈ ವಯಸ್ಸಿನಲ್ಲಿ ಮದುವೆ ಯಾಗುವುದು ಸಾಮಾಜಿಕ ಕಳಂಕ ಎಂಬುದು ಅನೇಕರ ಭಾವವಾಗಿತ್ತು. ಹೀಗಾಗಿ ಅದೀಲ್ ಅವರನ್ನು ಮದುವೆ ಯಾಗುವಂತೆ ಮನ ವೊಲಿಸುವುದು ಕೂಡ ನನಗೆ ಬಹಳ ಕಷ್ಟದ ಕೆಲಸವಾಗಿತ್ತು. ಕೊನೆಗೂ ಮದುವೆಗೆ ಒಪ್ಪಿಕೊಂಡರು ಈ ಮೂಲಕ ಅವರ ಸೊಸೆಯಂದಿರು ಸಹ ಮದುವೆಗೆ ಹಾಜರಾಗಿದ್ದರು ಎಂದು ನಟಿ ಜವೇರಿಯಾ ಅವರು ಸಂದರ್ಶನದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ.

ನನ್ನ ಮಗಳ ಮದುವೆಯ ಸಮಯದಲ್ಲಿಯೂ ಜನರು ನನ್ನನ್ನು ಟೀಕಿಸಿದರು. ಇನ್ನು ಕೆಲವರು ನನ್ನ ಮರುಮದುವೆ ನಿರ್ಧಾರ ವನ್ನು ಪ್ರಶ್ನಿಸಿದರು, ಈ ವಯಸ್ಸು ಮದುವೆಗೆ ಸೂಕ್ತವೇ? ಎಂದು ಪ್ರಶ್ನಿಸಿದರು. ಮರುವಿವಾಹದ ಬಗ್ಗೆ ನನ್ನ ಮಗಳು, ಕುಟುಂಬದವರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನಾನು ಚಿಂತೆ ಮಾಡುತ್ತಿದ್ದೆ, ಆದರೆ ಅದೃಷ್ಟವಶಾತ್ ಎಲ್ಲರೂ ಇದಕ್ಕೆ ಸಮ್ಮತಿ ನೀಡಿದರು ಎಂದು ಅವರು ಹೇಳಿದ್ದಾರೆ. ನಟಿ ಜವೇರಿಯಾ ಅವರು ವಿಚ್ಛೇದನ ಪಡೆದು ಹದಿನಾಲ್ಕು ವರ್ಷಗಳ ನಂತರ ಉದ್ಯಮಿ ಅದೀಲ್ ಹೈದರ್ ಅವರನ್ನು ವಿವಾಹವಾಗಿದ್ದಾರೆ.