ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajinikanth: ತಲೈವಾ...ನಿಮ್ಮ ಫೇಸ್‌ ನೋಡ್ಬೇಕು! ಫ್ಯಾನ್ಸ್‌ ಕೋರಿಕೆಗೆ ರಜನೀಕಾಂತ್‌ ರಿಯಾಕ್ಷನ್‌ ಹೇಗಿತ್ತು?

ನಟ ರಜನೀಕಾಂತ್ ಅವರ ವಿಮಾನ ಪ್ರಯಾಣದ ವಿಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೈದ್ರಾಬಾದ್‌ನಲ್ಲಿ ರಜನೀಕಾಂತ್ ಅವರು ವಿಮಾನ ಪ್ರಯಾಣ ಮಾಡುವಾಗ ಅವರ ಅಭಿಮಾನಿಗಳು ಅವರನ್ನು ಗುರುತಿಸಿದ್ದು, ಸದ್ಯ ಈ ವಿಡಿಯೊ ನೆಟ್ಟಿಗರ ಗಮನ ಸೆಳೆಯುತ್ತಿದೆ.

ವಿಮಾನದೊಳಗೆ ಫ್ಯಾನ್ಸ್‌ ಕೋರಿಕೆಗೆ ಎಸ್‌ ಎಂದ ತಲೈವಾ!

Profile Pushpa Kumari Aug 7, 2025 3:30 PM

ನವದೆಹಲಿ: ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಒಬ್ಬರಾದ ಸೂಪರ್ ಸ್ಟಾರ್ ರಜನೀಕಾಂತ್ (Rajinikanth) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಚಿತ್ರದಲ್ಲಿ ನಟ ರಜನೀಕಾಂತ್ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಇತ್ತೀಚೆಗಷ್ಟೆ ಈ ಸಿನಿಮಾದ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಮಾಸ್ ಲುಕ್‌ನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಅವರ ಲುಕ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಹೀಗಾಗಿ ಕೂಲಿ ಸಿನಿಮಾ ಮೇಲೆ ಕೂಡ ನಿರೀಕ್ಷೆ ಹೆಚ್ಚಾಗುತ್ತಿದೆ. ಇದೀಗ ಅದರ ಬೆನ್ನಲ್ಲೆ ನಟ ರಜನೀಕಾಂತ್ ಅವರ ವಿಮಾನ ಪ್ರಯಾಣದ ವಿಡಿಯೊ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಹೈದ್ರಾಬಾದ್‌ನಲ್ಲಿ ರಜನೀಕಾಂತ್ ಅವರು ವಿಮಾನ ಪ್ರಯಾಣ ಮಾಡುವಾಗ ಅವರ ಅಭಿಮಾನಿಗಳು ಅವರನ್ನು ಗುರುತಿಸಿದ್ದು ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಸೂಪರ್ ಸ್ಟಾರ್ ರಜನೀಕಾಂತ್ ಅವರು ತಮ್ಮ ಪುತ್ರಿ ಐಶ್ವರ್ಯ ಅವರ ಜೊತೆಗೆ ಹೈದ್ರಾಬಾದ್‌ನಲ್ಲಿ ವಿಮಾನ ಪ್ರಯಾಣ ಮಾಡಿದ್ದಾರೆ. ರಜನೀಕಾಂತ್ ಅವರು ಎಕಾನಮಿ ಕ್ಲಾಸ್‌ನಲ್ಲಿ ವಿಮಾನ ಪ್ರಯಾಣವನ್ನು ಕೈಗೊಂಡಿದ್ದು ಸಾಮಾನ್ಯ ಜನರಂತೆ ವಿಮಾನದಲ್ಲಿ ಕೂತು ಪ್ರಯಾಣಿಸುತ್ತಿದ್ದರು. ಈ ವಿಮಾನ ದಲ್ಲಿರುವುದು ನಟ ರಜನೀಕಾಂತ್ ಎಂದು ಸಹ ಪ್ರಯಾಣಿಕರೊಬ್ಬರು ಗುರುತಿಸಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ನಟ ರಜನೀಕಾಂತ್ ಅವರು ಫ್ಲೈಟ್ ನಲ್ಲಿ ಕುಳಿತಿರುವುದನ್ನು ಕೆಲವು ಸಹ ಪ್ರಯಾಣಿಕರು, ಅವರ ಅಭಿಮಾನಿಗಳು ನೋಡಿದ್ದಾರೆ. ತಲೈವಾ ಸರ್ ನಿಮ್ಮ ಮುಖ ನೋಡಬೇಕು ಎಂದು ಅಭಿಮಾನಿ ಒಬ್ಬರು ಮನವಿ ಮಾಡಿದ್ದಾರೆ. ಇದನ್ನು ಕೇಳಿ ರಜನೀಕಾಂತ್ ಅವರು ನಿಂತುಕೊಂಡು ತಮ್ಮ ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ವಿಮಾನದ ಒಳಗಿದ್ದ ಅನೇಕ ಅಭಿಮಾನಿಗಳು ಸಂತೋಷದಿಂದ ಕಿರುಚುತ್ತಾ ರಜನಿಕಾಂತ್ ಅವರನ್ನು ಹತ್ತಿರದಿಂದ ಕಂಡು ಬಹಳ ಖುಷಿ ಪಟ್ಟಿದ್ದನ್ನು ವಿಡಿಯೋದಲ್ಲಿ ಕಾಣಬಹುದು.

ಮಗಳ ಜೊತೆ ನಟ ರಜನೀಕಾಂತ್ ಸಿನಿಮಾ ನಿಮಿತ್ತ ಕೆಲಸಕ್ಕೆ ಪ್ರಯಾಣ ಮಾಡಿದ್ರಾ ಅಥವಾ ವೈಯಕ್ತಿಕ ಕೆಲಸಕ್ಕಾಗಿ ಪ್ರಯಾಣಿಸಿದ್ದರಾ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಹಾಗಿದ್ದರು ನಟ ರಜನೀಕಾಂತ್ ಅವರುಸಿಂಪಲ್ಲಾಗಿ ಸಾಮಾನ್ಯ ಪ್ಯಾಸೆಂಜರ್ ನಂತೆ ವಿಮಾನ ಪ್ರಯಾಣ ಮಾಡಿದ್ದು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜನೀಕಾಂತ್ ಅವರಿಗೆ ಅಭಿಮಾನಿಗಳ ಮೇಲೆ ಎಷ್ಟು ಪ್ರೀತಿ ಇದೆ ಎಂಬುದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಓದಿ:Janaki Vs State of Kerala Movie: ಸ್ವಾತಂತ್ರ್ಯ ದಿನಕ್ಕೆ ʻಜಾನಕಿ vs ಸ್ಟೇಟ್ ಆಫ್ ಕೇರಳ’ ಚಿತ್ರ ಸ್ಟ್ರೀಮಿಂಗ್!.

ಸದ್ಯ ರಜನಿಕಾಂತ್ ಅವರು 'ಕೂಲಿ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಿನಿಮಾದಲ್ಲಿ ನಟ ನಾಗಾರ್ಜುನ, ಸೌಬಿನ್ ಶಾಹಿರ್, ಸೂಪರ್ ಸ್ಟಾರ್ ಉಪೇಂದ್ರ, ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಮತ್ತು ನಟಿ ಶ್ರುತಿ ಹಾಸನ್ ಸೇರಿದಂತೆ ಬಹುದೊಡ್ಡ ತಾರಾಗಣ ಹೊಂದಿದೆ. ಈ ಚಿತ್ರವು ಆಗಸ್ಟ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗಲಿದೆ. ಈ ಮೂಲಕ ನಟ ರಜನೀಕಾಂತ್ ಅಭಿನಯದ 'ಕೂಲಿ' ಚಿತ್ರವು ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿ ಆರ್ ಅವರ 'ವಾರ್ 2' ಚಿತ್ರದೊಂದಿಗೆ ಭರ್ಜರಿ ಪೈಪೋಟಿ ನೀಡಲಿದೆ.