Actress Samantha: ನಟಿ ಸಮಂತಾ ಮರುವಿವಾಹಕ್ಕೆ ಡೇಟ್ ಫಿಕ್ಸ್? ಯಾವಾಗ ಮದುವೆ ಗೊತ್ತಾ?
ನಟಿ ಸಮಂತಾ ಅವರು ಸಿನಿಮಾಕ್ಕಿಂತಲೂ ವೈಯಕ್ತಿಕ ಜೀವನದ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅವರು ಈಗಾಗಲೇ ಲವ್ ನಲ್ಲಿ ಇದ್ದಾರೆ ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡಿತ್ತು. ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಲವ್‌ನಲ್ಲಿದ್ದಾರೆ ಅವರಿಬ್ಬರು ಜೊತೆಗೆ ಸುತ್ತಾಡುತ್ತಿದ್ದಾರೆ ಎಂದು ಹೇಳುವ ಅನೇಕ ಫೋಟೊಗಳು ಕೂಡ ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದೆ. ಅದರ ಬೆನ್ನಲ್ಲೆ ಎರಡನೇ ಮದುವೆಯ ದಿನಾಂಕ ಕೂಡ ನಿಗದಿಯಾಗಿದ್ದು ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.

Samantha Ruth

ನವದೆಹಲಿ: 'ಈಗ', 'ಏನ್ ಮಾಯ ಚೇಸಾವೆ', 'ಖುಷಿ' ಇತ್ಯಾದಿ ಹಿಟ್ ಸಿನಿಮಾ ಖ್ಯಾತಿಯ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ನಟ ನಾಗಚೈತನ್ಯ ಅವರೊಂದಿಗೆ ಪ್ರೀತಿಸಿ ವಿವಾಹವಾಗಿ ಬಳಿಕ ವೈಮನಸ್ಸು ಮೂಡಿ ವಿಚ್ಛೇದನ ಪಡೆದಿದ್ದರು. ಬಳಿಕ ನಾಗಚೈತನ್ಯ ಅವರು ಶೋಭಿತಾ ಅವರನ್ನು ವಿವಾಹವಾಗಿದ್ದರು. ಇದೀಗ ನಟಿ ಸಮಂತಾ ಅವರು ಶೀಘ್ರವೇ ಮರು ವಿವಾಹವಾಗಲಿದ್ದಾರೆ ಎಂಬ ಗಾಸಿಪ್ ಹರಿದಾಡಿದೆ. ಈ ಮೂಲಕ ಅವರ ಮದುವೆ ಡೇಟ್ ಕೂಡ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದ್ದು ಇದೀಗ ಹೊಸ ಕುತೂಹಲಕ್ಕೆ ಕಾರಣವಾಗಿದೆ.
ನಟಿ ಸಮಂತಾ ಅವರು ಸಿನಿಮಾಕ್ಕಿಂತಲೂ ವೈಯಕ್ತಿಕ ಜೀವನದ ವಿಚಾರಕ್ಕೆ ಹೆಚ್ಚು ಸುದ್ದಿ ಯಲ್ಲಿರುತ್ತಾರೆ. ಅವರು ಈಗಾಗಲೇ ಲವ್ ನಲ್ಲಿ ಇದ್ದಾರೆ ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡಿತ್ತು. ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಲವ್ ನಲ್ಲಿದ್ದಾರೆ ಅವರಿಬ್ಬರು ಜೊತೆಗೆ ಸುತ್ತಾಡುತ್ತಿದ್ದಾರೆ ಎಂದು ಹೇಳುವ ಅನೇಕ ಫೋಟೊಗಳು ಕೂಡ ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದೆ. ಅದರ ಬೆನ್ನಲ್ಲೆ ಎರಡನೇ ಮದುವೆಯ ದಿನಾಂಕ ಕೂಡ ನಿಗದಿಯಾಗಿದ್ದು ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಇದೀಗ ನಟಿ ಸಮಂತಾ ರುತು ಪ್ರಭು ಎರಡನೇ ಮದುವೆಯಾಗಲಿದ್ದು ರಾಜ್ ನಿಧಿಮೋರು ಅವರನ್ನು ವಿವಾಹವಾಗಲಿದ್ದಾರಂತೆ. ನಟಿ ಸಮಂತಾ ಅವರು ನಾಗಚೈತನ್ಯ ಅವರನ್ನು ಅಕ್ಟೋಬರ್ 6ರಂದು ವಿವಾಹವಾಗಿದ್ದು ಬಳಿಕ ಅವರು ವಿಚ್ಛೇದನ ಪಡೆದದ್ದು ನಮಗೆಲ್ಲ ತಿಳಿದೆ ಇದೆ. ಅಂತೆಯೇ ಈಗ ನಟಿ ಸಮಂತ ಅವರು ಇದೇ ವರ್ಷದ ಅಕ್ಟೋಬರ್ 6ರಂದು ಎರಡನೇ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಆಡಂಬರ ಇಲ್ಲದೆ ಚರ್ಚ್ ನಲ್ಲಿ ಸರಳವಾಗಿ ವಿವಾಹವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ:The Devil Movie: ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್; ʼದಿ ಡೆವಿಲ್ʼ ಚಿತ್ರದ ಮೋಷನ್ ಪೋಸ್ಟರ್ ಔಟ್
ನಟಿ ಸಮಂತಾ ಅವರು ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದರು ಕೂಡ ಅವರು ಸಿನಿಮಾ ಬದುಕಿನಿಂದ ಹಿಂದೆ ಸರಿದಿಲ್ಲ. ಡಿವೋರ್ಸ್ ಬಳಿಕ ಬಾಲಿವುಡ್ ನಲ್ಲಿಯೂ ಇವರು ಮಿಂಚಿದ್ದರು. ನಿರ್ದೇಶಕ ರಾಜ್ ಮತ್ತು ಸಮಂತಾ ಅವರ ಡೇಟಿಂಗ್ ವಿಚಾರ ಎಲ್ಲೆಡೆ ಗಾಸಿಪ್ ಹರಿ ದಾಡಿದರು ಅದರ ಬಗ್ಗೆ ನಟಿ ಸಮಂತಾ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ.ಇದೀಗ ಅವರ ಮದುವೆ ಪಕ್ಕಾ ಎನ್ನಲಾಗುತ್ತಿದೆ.
ರಾಜ್ ನಿಧಿಮೋರ್ ಅವರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಸಕ್ಸಸ್ ಪಡೆದಿದ್ದಾರೆ. ಶಾದಿ.ಕಾಮ್, ಫೇವರ್ಸ್, 2013ರಲ್ಲಿ ತೆರೆಕಂಡ ಗೋ ಗೋವಾ ಗಾನ್ ಮತ್ತು ಎ ಜಂಟಲ್ ಮ್ಯಾನ್ ಇತರೆ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಬಳಿಕ ದಿ ಫ್ಯಾಮಿಲಿ ಮ್ಯನ್ ವೆಬ್ ಸೀರಿಸ್ ಕೂಡ ಮಾಡಿದ್ದು ಇದು ಅವರ ವೃತ್ತಿ ಬದುಕಲ್ಲಿ ಬಿಗ್ ಟರ್ನಿಂಗ್ ಪಾಂಯ್ಟ್ ಆಗಿದೆ. ಇದೇ ವೆಬ್ ಸೀರಿಸ್ ನಲ್ಲಿ ನಟಿ ಸಮಂತಾ ಕೂಡ ಇವರಿಗೆ ಪರಿಚಯವಾಗಿದ್ದು ಈಗ ಅವರಿಬ್ಬರು ಡೇಟಿಂಗ್ ನಲ್ಲಿದ್ದು ಶೀಘ್ರವೇ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.