ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiccha Sudeepa: ಕಿಚ್ಚನ ಹುಟ್ಟು ಹಬ್ಬಕ್ಕೆ ಮತ್ತೊಂದು ಗಿಫ್ಟ್‌; ಬಿಲ್ಲ ರಂಗ ಬಾಷಾದ ಫಸ್ಟ್ ಲುಕ್ ರಿಲೀಸ್

ಕಿಚ್ಚನ ಅಭಿಮಾನಿಗಳಿಗೆ ಇಂದು ಡಬಲ್‌ ಸಂಭ್ರಮ. ಒಂದೆಡೆ ಅವರ ನೆಚ್ಚಿನ ನಟ ಹುಟ್ಟು ಹಬ್ಬದ ಸಂಭ್ರಮವಾಗಿದ್ದರೆ, ಇನ್ನೊಂದೆಡೆ ಅವರ ಬಹುನಿರೀಕ್ಷಿತ ಚಿತ್ರಗಳ ಲುಕ್‌ ಬಿಡುಗಡೆಯಾಗುತ್ತಿವೆ. ಕಿಚ್ಚ ಸುದೀಪ್ (Kichcha Sudeepa) ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದ (Billa Ranga Baashaa Movie) ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.

ಬಿಲ್ಲ ರಂಗ ಬಾಷಾದ ಫಸ್ಟ್ ಲುಕ್ ರಿಲೀಸ್

-

Vishakha Bhat Vishakha Bhat Sep 2, 2025 11:53 AM

ಕಿಚ್ಚನ ಅಭಿಮಾನಿಗಳಿಗೆ ಇಂದು ಡಬಲ್‌ ಸಂಭ್ರಮ. ಒಂದೆಡೆ ಅವರ ನೆಚ್ಚಿನ ನಟ ಹುಟ್ಟು ಹಬ್ಬದ ಸಂಭ್ರಮವಾಗಿದ್ದರೆ, ಇನ್ನೊಂದೆಡೆ ಅವರ ಬಹುನಿರೀಕ್ಷಿತ ಚಿತ್ರಗಳ ಲುಕ್‌ ಬಿಡುಗಡೆಯಾಗುತ್ತಿವೆ. ಕಿಚ್ಚ ಸುದೀಪ್ (Kichcha Sudeepa) ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದ (Billa Ranga Baashaa Movie) ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಹಲವು ದಿನಗಳಿಂದ ಕಾಯುತ್ತಿದ್ದ ಫ್ಯಾನ್ಸ್‌ಗೆ ಕೊನೆಗೂ ಸಿಹಿ ಸುದ್ದಿ ದೊರಕಿದೆ. ಬಿಲ್ಲ ರಂಗ ಬಾಷಾ ಚಿತ್ರದಲ್ಲಿ ಸುದೀಪ್ ಪಾತ್ರ ಹೇಗಿರುತ್ತದೆ ಅನ್ನೋ ಒಂದು ಪ್ರಶ್ನೆ ಇತ್ತು. ಅದಕ್ಕೆ ಮತ್ತೊಂದು ಉತ್ತರದಂತೆ ಚಿತ್ರದ ಈ ಫಸ್ಟ್ ಲುಕ್ ಪೋಸ್ಟರ್ ಇದೆ. ಈ ಒಂದು ಪೋಸ್ಟರ್ ಅಲ್ಲಿ ಕಿಚ್ಚನ ಕಂಪ್ಲೀಟ್ ಲುಕ್ ರಿವೀಲ್ ಆಗಿದೆ.

ಹೆಗಲ ಮೇಲೆ ವೆಪನ್‌ ಹಿಡಿದು, ವಿಶೇಷ ಗ್ಲಾಸ್‌ನನ್ನು ಕಿಚ್ಚ ತಮ್ಮ ಹಣೆಮೇಲಿಟ್ಟುಕೊಂಡಿದ್ದಾರೆ. ಯುದ್ಧ ಹೊರಟ ಯೋಧನಂತೆ ಸುದೀಪ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಚಿತ್ರದಲ್ಲಿ ಸುದೀಪ್‌ ಎಷ್ಟು ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಲವನ್ನು ಈ ಪೋಸ್ಟರ್‌ ಹುಟ್ಟುಹಾಕಿದೆ. You Can Kill a Rebel..Not A Rebellion ಅನ್ನೋ ಈ ಲೈನ್ ಪೋಸ್ಟರ್ ಅಲ್ಲಿ ಹೈಲೈಟ್ ಆಗಿದೆ. ಸದ್ಯ ಪೋಸ್ಟರ್‌ ನೋಡಿದ ಅಭಿಮಾನಿಗಳು ಖುಷ್‌ ಆಗಿದ್ದಾರೆ.



ನಿನ್ನೆಯಷ್ಟೇ, ಕಿಚ್ಚನ ಜನ್ಮ ದಿನದ ಹಿಂದಿನ ದಿನ ಸೆಪ್ಟೆಂಬರ್-1 ರಂದು ಸಂಜೆ 7. 02 ಕ್ಕೆ ಈ ಟೈಟಲ್ ಟೀಸರ್ ಹೊರ ಬಂದಿತ್ತು. ಇದೀಗ ಟೀಸರ್‌ ಬಿಡಗಡೆ ಮಾಡಲಾಗಿದೆ. ಟೀಸರ್‌ನಲ್ಲಿ ಅತೀ ಹೆಚ್ಚು ಗಮನಸೆಳೆದಿದ್ದು, ಕಿಚ್ಚನ ಹೇರ್‌ ಸ್ಟೈಲ್‌. ಫುಲ್‌ ಮಾಸ್‌ ಲುಕ್‌ನಲ್ಲಿ ಸುದೀಪ್‌ ಕಾಣಿಸಿಕೊಂಡಿದ್ದಾರೆ. ಸುದೀಪ್ ಜನ್ಮ ದಿನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್-1 ರಂದು ಮಧ್ಯಾಹ್ನ 1 ಗಂಟೆ ಹೊತ್ತಿಗೆ ಪ್ರೆಸ್ ಮೀಟ್ ಇತ್ತು. ಆಗಲೇ ಕಿಚ್ಚ ಸುದೀಪ್ ಒಂದು ಹಿಂಟ್ ಕೊಟ್ಟಿದ್ದರು. ನೀವು ಟೈಟಲ್ ಟೀಸರ್ ನೋಡಿ. ಇದು ತುಂಬಾನೆ ಚೆನ್ನಾಗಿದೆ. ಇದರಲ್ಲಿ ನನ್ನ ಈ ಒಂದು ಕರ್ಲಿ ಹೇರ್ ಸ್ಟೈಲ್ ಇನ್ನೂ ಚೆನ್ನಾಗಿ ಕಾಣಿಸುತ್ತದೆ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Kichcha Sudeepa: ಕಿಚ್ಚ ಸುದೀಪ್‌ ಹುಟ್ಟುಹಬ್ಬದ ಮುನ್ನವೇ ಫ್ಯಾನ್ಸ್‌ಗೆ ಸಿಕ್ತು ಭರ್ಜರಿ ಗಿಫ್ಟ್‌; ಹೊಸ ಚಿತ್ರದ ಟೈಟಲ್‌, ಟೀಸರ್‌ ಔಟ್‌

ಇದೇ ವರ್ಷ ಕ್ರಿಸ್​​ಮಸ್ ಹಬ್ಬಕ್ಕೆ ಮಾರ್ಕ್ ಬಿಡುಗಡೆ ಆಗಲಿದೆ. ಸಿನಿಮಾ ಟೀಸರ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸುದೀಪ್ ಮತ್ತೊಂದು ಭರ್ಜರಿ ಯಶಸ್ಸಿನ ಚಿತ್ರಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್​​ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದು. ಹೀಗಾಗಿ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.