BBK 12: ಬಿಗ್ ಬಾಸ್ 12ಕ್ಕೆ ಈ ಇಬ್ಬರನ್ನು ತೆಗೆದುಕೊಳ್ಳಿ ಎಂದ ರಜತ್ ಕಿಶನ್
Bigg Boss Kannada season 12: ಕಿಚ್ಚನ ಬಿಬಿಕೆ 12ರ ಮೊದಲ ಪ್ರೋಮೋ ಶೂಟ್ ಮುಕ್ತಾಯವಾಗಿದೆ. ಇಂದು ಮೊದಲ ಪ್ರೋಮೋ ಔಟ್ ಆಗಲಿದೆ. ಈ ಮಧ್ಯೆ ಮಾಜಿ ಸ್ಪರ್ಧಿ ರಜತ್ ಕಿಶನ್ ಇಬ್ಬರು ಸ್ಪರ್ಧಿಗಳನ್ನು ಈ ಬಾರಿಯ ಶೋಗೆ ರೆಫರ್ ಮಾಡಿದ್ದಾರಂತೆ.

Bigg Boss and Rajath Kishan -

ಬಿಗ್ ಬಾಸ್ ಕನ್ನಡ (Bigg Boss Kannada) ಹೊಸ ಸೀಸನ್ಗಾಗಿ ಕಾತುರದಿಂದ ಕಾಯುತ್ತಿರುವ ಫ್ಯಾನ್ಸ್ಗೆ ಒಂದೊಂದೆ ಗುಡ್ ನ್ಯೂಸ್ ಸಿಗುತ್ತಿದೆ. ಮೊನ್ನೆಯಷ್ಟೆ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಕನ್ನಡ ಸೀಸನ್ 12ರ ಹೊಸ ಲೋಗೋ ಬಿಡುಗಡೆ ಮಾಡುವ ಮೂಲಕ ಸದ್ಯದಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಶುರುವಾಗುವ ಸೂಚನೆ ನೀಡಿತು. ಇದರ ಬೆನ್ನಲ್ಲೇ ಕಿಚ್ಚನ ಬಿಬಿಕೆ 12ರ ಮೊದಲ ಪ್ರೋಮೋ ಶೂಟ್ ಮುಕ್ತಾಯವಾಗಿದೆ. ಇಂದು ಮೊದಲ ಪ್ರೋಮೋ ಔಟ್ ಆಗಲಿದೆ. ಈ ಮಧ್ಯೆ ಮಾಜಿ ಸ್ಪರ್ಧಿ ರಜತ್ ಕಿಶನ್ ಇಬ್ಬರು ಸ್ಪರ್ಧಿಗಳನ್ನು ಈ ಬಾರಿಯ ಶೋಗೆ ರೆಫರ್ ಮಾಡಿದ್ದಾರಂತೆ.
‘ನಾನು ಇಬ್ಬರನ್ನ ಬಿಗ್ ಬಾಸ್‌ಗೆ ರೆಫರ್ ಮಾಡಿದ್ದೆ. ಆದರೆ ಅವರು ಏನೂ ಡಿಸಿಷನ್ ತೆಗೆದುಕೊಂಡಿದ್ದಾರೆ ಅನ್ನೋದು ಗೊತ್ತಿಲ್ಲ. ಬಿಗ್ ಬಾಸ್ ಎನ್ನುವ ವೇದಿಕೆ ಹೇಗೆ ಅಂದರೆ, ಸ್ಟೇಜ್ ಮೇಲೆ ಬಂದಮೇಲೆ ಯಾರೆಲ್ಲಾ ಕಂಟೆಸ್ಟೆಂಟ್ಸ್ ಇದ್ದಾರೆ ಅನ್ನೋದು ಸುದೀಪ್ ಸರ್‌ಗೆ ಗೊತ್ತಾಗುವುದು. ಹೀಗಿರುವಾಗ ನಮಗೆ ಯಾರೆಲ್ಲ ಸ್ಪರ್ಧಿಗಳಿದ್ದಾರೆ ಅನ್ನೋದು ಹೇಗೆ ಗೊತ್ತಾಗುತ್ತದೆ. ಸೀಕ್ರೆಟಿವ್ ಆಗಿ ಮಾಡುವಂತಹ ಮಿಷನ್ ಅದು ಎಂದು ರಜತ್ ಹೇಳಿದ್ದಾರೆ.
ಆದರೆ, ತಾನು ರೆಫರ್ ಮಾಡಿದ್ದು ಯಾರನ್ನೆಲ್ಲ ಎಂಬುದನ್ನು ರಜತ್ ಬಹಿರಂಗಪಡಿಸಿಲ್ಲ. ಸ್ಪರ್ಧಿಗಳ ಹೆಸರುಗಳನ್ನ ಕಿಚ್ಚ ಸುದೀಪ್‌ಗೂ ಶೋ ಆರಂಭವಾಗುವವರೆಗೆ ತಿಳಿಯದು ಎಂದಿದ್ದಾರೆ ರಜತ್. ಇನ್ನು ಬಿಗ್ಬಾಸ್ ಸೀಸನ್ 12 ಸೆಪ್ಟೆಂಬರ್ 28ಕ್ಕೆ ಪ್ರಾರಂಭ ಆಗಲಿದೆ ಎಂದು ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ.
BBK 12: ಇಂದು ಬಿಗ್ ಬಾಸ್ ಕನ್ನಡ 12ರ ಮೊದಲ ಪ್ರೋಮೋ ಬಿಡುಗಡೆ: ಏನಿರಬಹುದು ಕಾನ್ಸೆಪ್ಟ್?
ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನಕ್ಕಾಗಿ ಫ್ಯಾನ್ಸ್ ಕೂಡ ಕಾದಿದ್ದಾರೆ. ಈ ದಿನದಂದು ಬಿಗ್ ಬಾಸ್ ಪ್ರೋಮೋ ಬಿಡುಗಡೆ ಕಾಣಲಿದೆ. ಸೆ. 2 ರಂದು ಆಯೋಜಕರು ಪ್ರೋಮೋ ರಿಲೀಸ್ ಮಾಡಲಿದ್ದು, ಹೊಸ ಸೀಸನ್‌ಗೆ ತಕ್ಕಂತೆ ವಿಶೇಷ ಪ್ರೋಮೋವನ್ನು ಶೂಟ್ ಮಾಡಲಾಗಿದೆ.