Duleep Trophy 2025: ಫಿಟ್ನೆಸ್ ಟೆಸ್ಟ್‌ನಲ್ಲಿ ವಿಫಲರಾದ ಕನ್ನಡಿಗ ವೈಶಾಖ್ ವಿಜಯ್‌ಕುಮಾರ್!
ಪಂಜಾಬ್ ಕಿಂಗ್ಸ್ ಹಾಗೂ ಕರ್ನಾಟಕ ತಂಡದ ವೇಗಿ ವೈಶಾಖ್ ವಿಜಯ್‌ಕುಮಾರ್ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದಿದ್ದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದಾರೆ. ಇದರಿಂದಾಗಿ ಅವರು ಉತ್ತರ ವಲಯ ವಿರುದ್ಧದ ಸೆಮಿಫೈನಲ್ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಅವರ ಸ್ಥಾನದಲ್ಲಿ ವಾಸುಕಿ ಕೌಶಿಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ದುಲೀಪ್ ಟ್ರೋಫಿ ಟೂರ್ನಿಯಿಂದ ವೈಶಾಖ್ ವಿಜಯ್‌ಕುಮಾರ್ ಔಟ್. -

ನವದೆಹಲಿ: ಕರ್ನಾಟಕ ಹಾಗೂ ಪಂಜಾಬ್ ಕಿಂಗ್ಸ್ ತಂಡದ ವೇಗಿ ವೈಶಾಖ್ ವಿಜಯಕುಮಾರ್ (Vyshak Vijaykumar) ಬಿಸಿಸಿಐನ (BCCI) ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದಿದ್ದ ಫಿಟ್ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವಲ್ಲಿ ವಿಫಲರಾಗಿದ್ದಾರೆಂದು ವರದಿಯಾಗಿದೆ. ಉತ್ತರ ವಲಯ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವೇಗಿ ದಕ್ಷಿಣ ವಲಯದ (South Zone) ಪರ ಆಡಬೇಕಿತ್ತು. ಆದಾಗ್ಯೂ, ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ಕಾರಣ, ಸೆಮಿಫೈನಲ್ ಪಂದ್ಯವನ್ನು ಆಡುವ ದಕ್ಷಿಣ ವಲಯ ತಂಡದಿಂದ ಹೊರಬಿದ್ದಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ದೇಶಿ ಋತು ಮತ್ತು ಏಷ್ಯಾ ಕಪ್ ಆರಂಭದ ಮುನ್ನ ಎಲ್ಲಾ ಕ್ರಿಕೆಟಿಗರು ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ.
ವೈಶಾಖ್ ವಿಜಯ್‌ಕುಮಾರ್ ಕೊನೆಯದಾಗಿ2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಅವರು ಈ ಸೀಸನ್‌ನ ಐದು ಪಂದ್ಯಗಳಿಂದ 4 ವಿಕೆಟ್‌ಗಳನ್ನು ಪಡೆದಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಅವರು ಐಪಿಎಲ್ ಆಡಲು ಬಂದಿದ್ದರು. ಇದೀಗ ವಿಜಯಕುಮಾರ್ ಬದಲಿಗೆ ವಾಸುಕಿ ಕೌಶಿಕ್ ಅವರನ್ನು ದಕ್ಷಿಣ ವಲಯ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಅವರು 23 ಪ್ರಥಮ ದರ್ಜೆ ಪಂದ್ಯಗಳಿಂದ 93 ವಿಕೆಟ್‌ಗಳನ್ನು ಪಡೆದಿದ್ದಾರೆ.
2025ರ ದುಲೀಪ್ ಟ್ರೋಫಿ ಟೂರ್ನಿಯಿಂದ ತಿಲಕ್ ವರ್ಮಾ ಔಟ್! ಇದಕ್ಕೆ ಕಾರಣ ಇಲ್ಲಿದೆ..
ದಕ್ಷಿಣ ವಲಯ ತಂಡಕ್ಕೆ ಮೊಹಮ್ಮದ್ ಅಝರುದ್ದೀನ್ ನಾಯಕ
ದಕ್ಷಿಣ ವಲಯ ಮತ್ತು ಉತ್ತರ ವಲಯದ ನಡುವಿನ ಪಂದ್ಯಕ್ಕೂ ಮುನ್ನ ದಕ್ಷಿಣ ವಲಯ ತಂಡದ ನಾಯಕ ಬದಲಾಗಿದ್ದಾರೆ. ಇದೀಗ ಕೇರಳದ ಅಝರುದ್ದೀನ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಈ ಹಿಂದೆ ತಿಲಕ್ ವರ್ಮಾ ಅವರನ್ನು ದಕ್ಷಿಣ ವಲಯ ತಂಡಕ್ಕೆ ನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ, ಅವರು 2025ರ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲು ದುಬೈಗೆ ತೆರಳಬೇಕಾಗಿರುವುದರಿಂದ, ಅವರು ಸೆಮಿಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅದೇ ಸಮಯದಲ್ಲಿ ಎನ್ ಜಗದೀಶನ್ ಅವರನ್ನು ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ ಮತ್ತು ಆರ್ ಸಾಯಿ ಕಿಶೋರ್ ಅವರನ್ನು ಸೆಪ್ಟೆಂಬರ್ 4 ರಂದು ನಡೆಯಲಿರುವ ಪಂದ್ಯದಿಂದ ಹೊರಗುಳಿದಿದ್ದಾರೆ.
Asia Cup 2025: ಬಿಸಿಲಿನ ತಾಪ ಹೆಚ್ಚಳ; ಏಷ್ಯಾಕಪ್ ಪಂದ್ಯಗಳ ಸಮಯದಲ್ಲಿ ಬದಲಾವಣೆ
ದುಲೀಪ್ ಟ್ರೋಫಿ ಸೆಮಿಫೈನಲ್‌ಗೆ ದಕ್ಷಿಣ ವಲಯ ತಂಡ
ಮೊಹಮ್ಮದ್ ಅಝರುದ್ದೀನ್ (ನಾಯಕ ಮತ್ತು ವಿಕೆಟ್‌ಕೀಪರ್), ತನ್ಮಯ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮೋಹಿತ್ ಕಾಳೆ, ಸಲ್ಮಾನ್ ನಿಜಾರ್, ಎನ್ ಜಗದೀಸನ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಸಾಯಿ ಕಿಶೋರ್, ತನಯ್ ತ್ಯಾಗರಾಜನ್, ವಾಸುಕಿ ಕೌಶಿಕ್, ಎಂ ಡಿ ನಿಧೀಶ್, ರಿಕಿ ಭುಯಿ, ಸ್ನೇಹಲ್ ಕೌತಂಕರ್, ಅಂಕಿತ್ ಕುಮಾರ್, ಶೇಖ್ ರಶೀದ್