ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Das: ಸದ್ದಿಲ್ಲದೆ ಓಟಿಟಿಗೆ ಬಂತು ದೀಪಿಕಾ ದಾಸ್ ನಟನೆಯ ಪಾರು ಪಾರ್ವತಿ ಸಿನಿಮಾ

Paru Parvathy Kannada Movie OTT: ಬಿಗ್ ಬಾಸ್ ಕನ್ನಡ ಸೀಸನ್ 9 ರ ನಟಿ ದೀಪಿಕಾ ದಾಸ್ ಮೊದಲ ಚಿತ್ರ ಪಾರು ಪಾರ್ವತಿ ಸಿನಿಮಾ ಓಟಿಟಿಗೆ ಲಗ್ಗೆಯಿಟ್ಟಿದೆ. ಇದೊಂದು ಪ್ರಯಾಣ ಆಧರಿತ ಚಿತ್ರವಾಗಿದ್ದು, ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಾಖಂಡದಾದ್ಯಂತ ಚಿತ್ರಿಸಲಾಗಿದೆ.

ಸದ್ದಿಲ್ಲದೆ ಓಟಿಟಿಗೆ ಬಂತು ದೀಪಿಕಾ ದಾಸ್ ನಟನೆಯ ಸಿನಿಮಾ

Paru Parvathy Kannada Movie

Profile Vinay Bhat Apr 10, 2025 7:33 AM

ಬಿಗ್ ಬಾಸ್ ಕನ್ನಡ ಸೀಸನ್ 9 ರ ಮೂಲಕ ಕನ್ನಡಿಗರ ಮನೆಮಾತಾದ ದೀಪಿಕಾ ದಾಸ್ (Deepika Das) ಸಿನಿಮಾ ಒಂದರಲ್ಲಿ ನಟಿಸಿದ್ದಾರೆ ಎಂಬುದೇ ಅನೇಕರಿಗೆ ತಿಳಿದಿಲ್ಲ. ನಾಗಿಣಿ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಸದ್ದು ಮಾಡಿದ್ದ ದೀಪಿಕಾ ಬಳಿಕ ಬಿಗ್ ಬಾಸ್​ಗೆ ಕಾಲಿಟ್ಟರು. ಅಲ್ಲಿಂದ ಹೊರಬಂದ ಬಳಿಕ ಯಾವುದೇ ಧಾರಾವಾಹಿಯಲ್ಲಿ ಇವರು ನಟಿಸಿಲ್ಲ. ಬದಲಾಗಿ ಪಾರು ಪಾರ್ವತಿ ಎಂಬ ಸಿನಿಮಾ ಮಾಡಿದರು. ಸಿನಿಮಾಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚ್ಯೂಸಿ ಆಗಿರುವ ನಟಿ ದೀಪಿಕಾರ ಮೊದಲ ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತಾದರೂ, ಥಿಯೇಟರ್‌ನಲ್ಲಿ ಹೆಚ್ಚು ದಿನ ಇರಲಿಲ್ಲ.

ಆದರೀಗ ಪಾರು ಪಾರ್ವತಿ ಸಿನಿಮಾ ಓಟಿಟಿಗೆ ಲಗ್ಗೆಯಿಟ್ಟಿದೆ. Eighteen Thirty Six Pictures ಲಾಂಛನದಲ್ಲಿ ಪಿ.ಬಿ. ಪ್ರೇಂನಾಥ್ ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದ ಸಿನಿಮಾ ಪಾರು ಪಾರ್ವತಿಯಲ್ಲಿ ದೀಪಿಕಾ ದಾಸ್ ಜೊತೆ ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ಚಿತ್ರಮಂದಿರಗಳ ಬಳಿಕ ಇದೀಗ ಸದ್ದಿಲ್ಲದೆ ಈ ಸಿನಿಮಾ ಓಟಿಟಿಗೆ (April 4) ಆಗಮಿಸಿದೆ.

ಇದೊಂದು ಪ್ರಯಾಣ ಆಧರಿತ ಚಿತ್ರವಾಗಿದ್ದು, ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಾಖಂಡದಾದ್ಯಂತ ಚಿತ್ರಿಸಲಾಗಿದೆ. #ಪಾರು ಪಾರ್ವತಿ ವಾಸ್ತವ ಮತ್ತು ಭಾವನಾತ್ಮಕ ಪ್ರಯಾಣವನ್ನು ಒಳಗೊಂಡಿದೆ. ವೈವಿಧ್ಯಮಯ ಭೂದೃಶ್ಯಗಳು ಮತ್ತು ಆಂತರಿಕ ರೂಪಾಂತರಗಳನ್ನು ಸೆರೆಹಿಡಿಯುತ್ತದೆ. ಇಡೀ ಸಿನಿಮಾದ ಕೇಂದ್ರಬಿಂದುವಾಗಿ ದೀಪಿಕಾ ದಾಸ್ ಕಾಣಿಸಿಕೊಂಡಿದ್ದಾರೆ. ಅಬಿನ್ ರಾಜೇಶ್ ಛಾಯಾಗ್ರಹಣ ಮಾಡಿದ್ದು, ಆರ್ ಹರಿ ಸಂಗೀತ ನಿರ್ದೇಶನ ಮಾಡಿದ್ದಾರೆ.

Nandagokula Serial: ಕಿರುತೆರೆಯಲ್ಲಿ ಮತ್ತೆ ಬರುತ್ತಿದೆ ನಂದಗೋಕುಲ ಧಾರಾವಾಹಿ: ಯಾವಾಗಿನಿಂದ ಪ್ರಾರಂಭ?

ಜನವರಿ 31 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ಈ ಸಿನಿಮಾ ಇದೀಗ ಅಮೆಜಾನ್‌ ಪ್ರೈಂ ವಿಡಿಯೋ ಓಟಿಟಿಯಲ್ಲಿ ಸ್ಟ್ರೀಮಿಂಗ್‌ (Amazon Prime OTT) ಆರಂಭಿಸಿದೆ. ಆರಂಭದಲ್ಲಿ ಈ ಚಿತ್ರದ ಟ್ರೇಲರ್‌ಅನ್ನು ನಟ ಕಿಚ್ಚ ಸುದೀಪ್‌ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಹಾರೈಸಿದ್ದರು. ಥಿಯೇಟರ್‌ನಲ್ಲಿ ನೋಡಲು ಮಿಸ್ ಮಾಡಿಕೊಂಡವರು ಈಗ ಪ್ರೈಮ್‌ ವಿಡಿಯೋದಲ್ಲಿ #ಪಾರು ಪಾರ್ವತಿ ಸಿನಿಮಾವನ್ನು ವೀಕ್ಷಣೆ ಮಾಡಬಹುದು.