Kangana Ranaut: ಉಡುಪಿಯ ಮಾರಿಯಮ್ಮ ದೇವಾಲಯಕ್ಕೆ ಬಾಲಿವುಡ್ ನಟಿ ಕಂಗನಾ ರಣಾವತ್ ಭೇಟಿ
ಮಂಡಿ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿರುವ ಕಂಗನಾ ಕಾಪು ಕ್ಷೇತ್ರದಲ್ಲಿರುವ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನಕ್ಕೆ ಆಗಮಿಸಿದ ಸಂಸದೆ ಕಂಗನಾ ರಣಾವತ್ ಅವರಿಗೆ ಶಾಲು ಹೊದಿಸಿ ಭರಮಾಡಿಕೊಳ್ಳಲಾಯಿತು. ದೇವರ ದರ್ಶನದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಪಾಲ್ಗೊಂಡಿದ್ದು ಹಿರಿಯ ಆರ್‌ಎಸ್‌ಎಸ್ ಮುಖಂಡ ಬಿಎಲ್ ಸಂತೋಷ್ ಭಾಗಿಯಾಗಿರುವ ಸಾರ್ವಜನಿಕ ಸಭೆಯಲ್ಲಿ ಕಂಗನಾ ಕಾಣಿಸಿಕೊಂಡರು.


ಉಡುಪಿ: ಬಾಲಿವುಡ್ ನಟಿ ಸಂಸದೆ ಕಂಗನಾ ರಣಾವತ್ (Kangana Ranaut) ಉಡುಪಿಯ ಕಾಪು ಮಾರಿಯಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ. ಇತ್ತೀಚೆಗಷ್ಟೆ ಬಹುಕೋಟಿ ವೆಚ್ಚದಲ್ಲಿ ನವೀಕರಣಗೊಂಡ ದೇವಾಲಯ ಇದಾಗಿದ್ದು, ಮಂಡಿ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿರುವ ಕಂಗನಾ ಕಾಪು ಕ್ಷೇತ್ರದಲ್ಲಿರುವ ಹೊಸ ಮಾರಿ ಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನಕ್ಕೆ ಆಗಮಿಸಿದ ಸಂಸದೆ ಕಂಗನಾ ರಣಾವತ್ ಅವರಿಗೆ ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು. ದೇವರ ದರ್ಶನದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಪಾಲ್ಗೊಂಡಿದ್ದು ಹಿರಿಯ ಆರ್‌ಎಸ್‌ಎಸ್ ಮುಖಂಡ(RSS) ಬಿಎಲ್ ಸಂತೋಷ್ ಭಾಗಿಯಾಗಿರುವ ಸಾರ್ವಜನಿಕ ಸಭೆಯಲ್ಲಿ ಕಂಗನಾ ಕಾಣಿಸಿಕೊಂಡರು.
ಇದೇ ಮೊದಲ ಬಾರಿಗೆ ಉಡುಪಿಗೆ ಕಂಗನಾ ರಣಾವತ್ ಭೇಟಿ ನೀಡಿದ್ದು ಕಾಪು ಮಾರಿಗುಡಿಯ ನವೀಕರಣ ವಿನ್ಯಾಸದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಕಂಗನಾ ಪ್ರಸ್ತುತ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು ತನು ವೆಡ್ಸ್ ಮನು ಚಿತ್ರದಲ್ಲಿ ಕಂಗನ ಕಾಣಿಸಿಕೊಳ್ಳುತ್ತಿದ್ದಾರೆ. ಸಹನಟ ಆರ್. ಮಾಧವನ್ ಅವರೊಂದಿಗೆ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ತಮ್ಮ ಅಭಿನಯದಿಂದ ಮೋಡಿ ಮಾಡಿದ್ದ ಇಬ್ಬರು ಮತ್ತೆ ಸ್ಕ್ರೀನ್ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಕಂಗನಾ ರಣಾವತ್ ಮಾನನಷ್ಟ ಮೊಕದ್ದಮೆಗೆ ಸಿಲುಕಿದ್ದು ಇದು ರಾಜಿ ಪಂಚಾಯಿತಿ ಮೂಲಕ ಕೊನೆಗೊಂಡಿತ್ತು. ಇದರ ಬೆನ್ನಲ್ಲೇ ದೇವಸ್ಥಾನದ ದರ್ಶನದಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ.
ಮಾರಿಯಮ್ಮ ದೇವಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಭೇಟಿ:

ಇತ್ತೀಚೆಗೆ ಟೀಮ್ ಇಂಡಿಯಾ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಕೂಡ ಕಾಪು ಶ್ರೀ ಮಾರಿಯಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಮಾರಿಯಮ್ಮನ ಆಶಿರ್ವಾದ ಪಡೆದುಕೊಂಡಿದ್ದಾರೆ. ಕಾಪು ಗದ್ದುಗೆ ಪ್ರತಿ ಷ್ಠೆಯ ಸಂದರ್ಭದಲ್ಲಿ ಪತ್ನಿ ದೇವಿಶಾ ಶೆಟ್ಟಿ ಜೊತೆ ಆಗಮಿಸಿ ದೇವಸ್ಥಾನದ ವಿನ್ಯಾಸವನ್ನು ನೋಡಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಕಾಪು ಕ್ಷೇತ್ರಕ್ಕೆ ಭೇಟಿ ನೀಡಿ ದೇಗುಲಕ್ಕೆ ಕಂಬವನ್ನು ಸೇವಾ ರೂಪದಲ್ಲಿ ಕೊಟ್ಟಿದ್ದರು. ಸೂರ್ಯ ಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಕರಾ ವಳಿ ಮೂಲದವರಾಗಿದ್ದು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
ಇದನ್ನು ಓದಿ: City Lights Movie: ಸಿಟಿ ಲೈಟ್ಸ್ ಚಿತ್ರಕ್ಕೆ ಮುಹೂರ್ತ: ಚಿತ್ರರಂಗಕ್ಕೆ ದುನಿಯಾ ವಿಜಯ್ 2ನೇ ಪುತ್ರಿ ಎಂಟ್ರಿ
ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ

ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಕೂಡ ಕಾಪು ದೇವಾಲಯಕ್ಕೆ ಭೇಟಿ ನೀಡಿದ್ದರು. ತನ್ನ ಇಬ್ಬರು ಮಕ್ಕಳು, ತಾಯಿ ಮತ್ತು ಸಹೋದರಿ, ನಟಿ ಶಮಿತಾ ಶೆಟ್ಟಿ ಜೊತೆಗೆ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕಾಪು ಮಾರಿಯಮ್ಮ ದೇವಾಲಯ ಶಿಲ್ಪಕಲೆ ವಿನ್ಯಾಸ ವೀಕ್ಷಿಸಿ ಕಾಪು ಮಾರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ದೇವಾಲಯದ ದೇಗುಲದ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪನಾ ಮಂಡಳಿಯಿಂದ ಶಿಲ್ಪಾ ಶೆಟ್ಟಿಗೆ ಗೌರವ ಸಲ್ಲಿಸಲಾಗಿದ್ದು ಮಾರಿಯಮ್ಮನ ದರ್ಶನ ಮಾಡಿ ಪ್ರಸಾದ ಸ್ವೀಕಾರ ಮಾಡಿದ್ದಾರೆ.