ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Disha Patani: ನಾವೂ ಸನಾತನಿಗಳು.... ಗುಂಡಿನ ದಾಳಿ ಬೆನ್ನಲ್ಲೇ ದಿಶಾ ಪಟಾನಿ ತಂದೆ ಹೀಗಂದಿದ್ದೇಕೆ?

ಉತ್ತರ ಪ್ರದೇಶದ ಬರೇಲಿಯಲ್ಲಿ ಸೆಪ್ಟೆಂಬರ್ 10ರಂದು ದಿಶಾ ಪಟಾನಿ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದೆ. ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಗ್ಯಾಂಗ್ ಈ ದಾಳಿಗೆ ಹೊಣೆ ಎಂದು ತಿಳಿದು ಬಂದಿದೆ. ದಿಶಾ ಪಟಾನಿಯ ಸಹೋದರಿ ಖುಶ್ಬೂ ಪಟಾನಿ ಧಾರ್ಮಿಕ ನಾಯಕ ಅನಿರುದ್ಧಾಚಾರ್ಯ ಮಹಾರಾಜ್ ಬಗ್ಗೆ ಮಾಡಿದ ಹೇಳಿಕೆ ಈ ದಾಳಿಗೆ ಕಾರಣವೆಂದು ಶಂಕಿಸಲಾಗಿದೆ. ದಿಶಾ ಅವರ ತಂದೆ ಜಗ್ದೀಶ್ ಪಟಾನಿ ಈ ಘಟನೆಗೆ ತೀವ್ರ ಪ್ರತಿಕ್ರಿಯೆ ನೀಡಿದ್ದು, ಇದನ್ನು ರಾಜಕೀಯ ಷಡ್ಯಂತ್ರ ಎಂದು ತಿರಸ್ಕರಿಸಿದ್ದಾರೆ.

ಗುಂಡಿನ ದಾಳಿ ಬೆನ್ನಲ್ಲೇ ದಿಶಾ ಪಟಾನಿ ತಂದೆ ಹೀಗಂದಿದ್ದೇಕೆ?

ಖುಶ್ಬೂ ಪಟಾನಿ - ಅವರ ತಂದೆ -

Profile Sushmitha Jain Sep 13, 2025 6:16 PM

ಬರೇಲಿ: ಉತ್ತರ ಪ್ರದೇಶದಲ್ಲಿನ (Uttar Pradesh) ಬಾಲಿವುಡ್ ನಟಿ (Bollywood actress) ದಿಶಾ ಪಟಾನಿ (Disha Patani) ಅವರ ಬರೇಲಿಯ (Bareilly) ಮನೆಯ ಮೇಲೆ ಸೆಪ್ಟೆಂಬರ್ 10ರಂದು ಗುಂಡಿನ ದಾಳಿ ನಡೆದಿದ್ದು, ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಗ್ಯಾಂಗ್ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ದಿಶಾ ಅವರ ಸಹೋದರಿ ಖುಶ್ಬೂ ಪಟಾನಿ ಅವರ ಧಾರ್ಮಿಕ ನಾಯಕ ಅನಿರುದ್ಧಾಚಾರ್ಯ ಮಹಾರಾಜ್ ವಿರುದ್ಧದ ಹೇಳಿಕೆಯಿಂದ ಈ ದಾಳಿ ಉಂಟಾಗಿದೆ ಎಂದು ತಿಳಿದುಬಂದಿದೆ. ದಿಶಾ ಅವರ ತಂದೆ ಜಗ್ದೀಶ್ ಪಟಾನಿ ಈ ಘಟನೆಯನ್ನು ಷಡ್ಯಂತ್ರ ಎಂದು ಖಂಡಿಸಿದ್ದಾರೆ.

ಬರೇಲಿಯ ಸಿವಿಲ್ ಲೈನ್ಸ್‌ನ ವಿಲ್ಲಾ ನಂ. 40ರಲ್ಲಿ ದಿಶಾ ಕುಟುಂಬ ವಾಸಿಸುತ್ತದೆ. ಬೆಳಿಗ್ಗೆ 4:30ಕ್ಕೆ ಇಬ್ಬರು ದಾಳಿಕೋರರು ಬೈಕ್‌ನಲ್ಲಿ ಬಂದು ಎರಡು ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದ್ದು ಯಾರೂ ಗಾಯಗಳಾಗಿಲ್ಲ. SSP ಅನುರಾಗ್ ಆರ್ಯಾ ಪ್ರಕಾರ, ದಿಶಾ ಕುಟುಂಬದ ದೂರಿನ ಮೇರೆಗೆ ಐದು ತಂಡಗಳನ್ನು ರಚಿಸಿ ತನಿಖೆ ಆರಂಭಿಸಲಾಗಿದೆ. ದಾಳಿಕೋರರು ದೆಹಲಿ-ಲಖನೌ ಹೈವೇ ಮೂಲಕ ಪರಾರಿಯಾಗಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಗೆಳತಿಯ ಭೇಟಿಗೆ ಹೋಗಿ ಬಿತ್ತು ಧರ್ಮದೇಟು; ಯುವಕನನ್ನು ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ, ವಿಡಿಯೊ ವೈರಲ್

ಗೋಲ್ಡಿ ಬ್ರಾರ್ ಗ್ಯಾಂಗ್‌ನ ವಿರೇಂದ್ರ ಚರಣ್ ಮತ್ತು ಮಹೇಂದ್ರ ಸರಣ್ ಸಾಮಾಜಿಕ ಮಾಧ್ಯಮದಲ್ಲಿ, “ಖುಶ್ಬೂ ಮತ್ತು ದಿಶಾ ಸಂತ ಪ್ರೇಮಾನಂದ್ ಜಿ ಮತ್ತು ಅನಿರುದ್ಧಾಚಾರ್ಯರನ್ನು ಅವಮಾನಿಸಿದ್ದಾರೆ. ಸನಾತನ ಧರ್ಮಕ್ಕೆ ಅಗೌರವ ತೋರಿದ್ದಾರೆ. ಇದು ಟ್ರೇಲರ್ ಮಾತ್ರ. ಮುಂದೆ ಧರ್ಮಕ್ಕೆ ಅಗೌರವ ತೋರಿದರೆ ಯಾರೂ ಬದುಕುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.

ಮಾಜಿ ಸೈನಿಕರಾದ ಖುಶ್ಬೂ ಪಟಾನಿ, ಅನಿರುದ್ಧಾಚಾರ್ಯರ ಲಿವ್-ಇನ್ ರಿಲೇಶನ್‌ಶಿಪ್ ಹೇಳಿಕೆಯನ್ನು ಟೀಕಿಸಿದ್ದರು, ಆದರೆ ಕೆಲವರು ಇದನ್ನು ಪ್ರೇಮಾನಂದ್ ಜಿ ಮಹಾರಾಜ್‌ಗೆ ಸಂಬಂಧಿಸಿದ್ದು ಎಂದು ತಪ್ಪಾಗಿ ಅರ್ಥೈಸಿದರು. ಖುಶ್ಬೂ ಇನ್‌ಸ್ಟಾಗ್ರಾಮ್‌ನಲ್ಲಿ, “ನನ್ನ ವಿರುದ್ಧ ತಪ್ಪು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ. ಘಟನೆ ಬಗ್ಗೆ ಖುಶ್ಬೂ ತಂದೆ ಜಗ್ದೀಶ್ ಪಟಾನಿ ಮಾತನಾಡಿದ, “ಖುಶ್ಬೂ ಹೇಳಿಕೆಯನ್ನು ತಿರುಚಲಾಗಿದೆ. ನಾವು ಸನಾತನಿಗಳು, ಸಂತರನ್ನು ಗೌರವಿಸುತ್ತೇವೆ. ಇದು ನಮ್ಮನ್ನು ಕೆಳಗಿಳಿಸುವ ಷಡ್ಯಂತ್ರ” ಎಂದಿದ್ದಾರೆ.