ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Rakshitha: ನಟಿ ರಕ್ಷಿತಾ ಆತ್ಮೀಯ ಸ್ನೇಹಿತೆ ಆತ್ಮಹತ್ಯೆ! ಭಾವುಕ ಪೋಸ್ಟ್ ಫುಲ್‌ ವೈರಲ್

Rakshitha: ಅಪ್ಪು, ಯಶವಂತ, ಕಲಾಸಿಪಾಳ್ಯ, ಮಂಡ್ಯ, ಕಾಶಿ, ತನನಂ ತನನಂ, ಸುಂಟರಗಾಳಿ ಸೇರಿ ದಂತೆ ಸಾಕಷ್ಟು ಹಿಟ್ ಸಿನಿಮಾ ಮಾಡಿ ಖ್ಯಾತಿ ಪಡೆದಿದ್ದ ನಟಿ ರಕ್ಷಿತಾ ಅವರು ಇತ್ತೀಚಿನ ಕೆಲ ವರ್ಷದಲ್ಲಿ ಸಿನಿಮಾ ರಂಗದಲ್ಲಿ ಅಷ್ಟು ಸಕ್ರಿಯವಾಗಿಲ್ಲ ಎನ್ನಬಹುದು. ಹಾಗಿದ್ದರೂ ಕೆಲವು ರಿಯಾಲಿಟಿ ಶೋ ಗೆ ಜಡ್ಜ್ ಆಗಿ ಬರುವ ರಕ್ಷಿತಾ ಅವರು ಈ ಮೂಲಕವು ಖ್ಯಾತಿ ಪಡೆದಿದ್ದಾರೆ. ಇದೀಗ ನಟಿ ರಕ್ಷಿತಾ ಅವರಿಗೆ ಸ್ನೇಹಿತೆಯ ಅಗಲುವಿಕೆ ದೊಡ್ಡ ಆಘಾತವನ್ನೇ ತಂದಿದ್ದು ಈ ಬಗ್ಗೆ ಅವರು ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ರಕ್ಷಿತಾ ಆತ್ಮೀಯ ಸ್ನೇಹಿತೆ ಆತ್ಮಹತ್ಯೆ! ಭಾವುಕ ಪೋಸ್ಟ್ ಫುಲ್‌ ವೈರಲ್

ನಟಿ ರಕ್ಷಿತಾ -

Profile Pushpa Kumari Sep 1, 2025 6:14 PM

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರಮಾಣ ದಿನೇ ದಿನೇ ಹೆಚ್ಚಾ ಗುತ್ತಲೇ ಇದೆ‌. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣಕ್ಕೆ, ಪ್ರೀತಿ ಪ್ರೇಮ ವೈಫಲ್ಯ, ಜಗಳ ವಾಗಿದ್ದಕ್ಕೆ, ಮಾನಸಿಕ ಖಿನ್ನತೆ ಹೀಗೆ ನಾನಾ ಕಾರಣಗಳಿಕೆ ಆತ್ಮಹತ್ಯೆ ಒಂದೇ ಪರಿಹಾರ ಎಂಬ ಮನಸ್ಥಿತಿಯು ಇತ್ತೀಚಿನ ಜನಾಂಗದವರಲ್ಲಿ ವಿಪರ್ಯಾಸ ಎನ್ನಬಹುದು. ಎಷ್ಟೋ ಸಲ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕೊಂಡವರು ತಮ್ಮ ಆಪ್ತರೊಂದಿಗೆ ಸಮಾಲೋಚನೆ ಮಾಡಿದ್ದ ಬಳಿಕ ತಮ್ಮ ನಿರ್ಣಯದಿಂದ ಹಿಂದೆ ಸರಿಯುತ್ತಾರೆ. ಆದರೆ ಕೆಲವೊಮ್ಮೆ ಹೇಳಿ ಕೊಳ್ಳಲಾಗದ ನೋವಿಟ್ಟುಕೊಂಡು ಯಾರೊಂದಿಗೂ ಹೇಳಿಕೊಳ್ಳದೆ ಅದೇ ದೊಡ್ಡ ಮಾನಸಿಕ ಖಿನ್ನತೆಗೆ ಎಡೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತೆಯೆ ಕನ್ನಡ ಸಿನಿಮಾ ರಂಗದ ಖ್ಯಾತ ನಟಿ ರಕ್ಷಿತಾ (Actress Rakshitha) ಅವರ ಸ್ನೇಹಿತೆಯೂ ಆತ್ಮಹತ್ಯೆಗೆ ಶರಣಾಗಿದ್ದು ಅವರು ಈ ಬಗ್ಗೆ ಭಾವನಾತ್ಮಕವಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಅಪ್ಪು, ಯಶವಂತ, ಕಲಾಸಿಪಾಳ್ಯ, ಮಂಡ್ಯ, ಕಾಶಿ, ತನನಂ ತನನಂ, ಸುಂಟರಗಾಳಿ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾ ಮಾಡಿ ಖ್ಯಾತಿ ಪಡೆದಿದ್ದ ನಟಿ ರಕ್ಷಿತಾ ಅವರು ಇತ್ತೀಚಿನ ಕೆಲ ವರ್ಷದಲ್ಲಿ ಸಿನಿಮಾ ರಂಗದಲ್ಲಿ ಅಷ್ಟು ಸಕ್ರಿಯವಾಗಿಲ್ಲ ಎನ್ನಬಹುದು. ಹಾಗಿದ್ದರೂ ಕೆಲವು ರಿಯಾಲಿಟಿ ಶೋ ಗೆ ಜಡ್ಜ್ ಆಗಿ ಬರುವ ರಕ್ಷಿತಾ ಅವರು ಈ ಮೂಲಕವು ಖ್ಯಾತಿ ಪಡೆದಿದ್ದಾರೆ. ಇದೀಗ ನಟಿ ರಕ್ಷಿತಾ ಅವರಿಗೆ ಸ್ನೇಹಿತೆಯ ಅಗಲುವಿಕೆ ದೊಡ್ಡ ಆಘಾತವನ್ನೇ ತಂದಿದ್ದು ಈ ಬಗ್ಗೆ ಅವರು ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಕೊಲ್ಲೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ತಮ್ಮ ಸ್ನೇಹಿತೆ ವಸುಧಾ ಬಗ್ಗೆ ರಕ್ಷಿತಾ ಇನ್‌ಸ್ಟಾಗ್ರಾಮ್‌ ನಲ್ಲಿ ಬರೆದುಕೊಂಡಿದ್ದಾರೆ. ನೀವು ಪ್ರೀತಿಸುವವರೊಂದಿಗೆ ವೈಮನಸ್ಸು ಉಂಟಾದರೆ ಅದನ್ನು ದೀರ್ಘಕಾಲದ ತನಕ ಮುಂದೂಡಬೇಡಿ. ನಿಮ್ಮ ಬಗ್ಗೆ ಕಾಳಜಿ ವಹಿಸುವ ಜನರೊಂದಿಗೆ ನೀವು ಕೂಡ ಹೆಚ್ಚು ಸಮಯ ಕಳೆಯಿರಿ. ಏನೇ ಜಗಳ, ಮನಸ್ಥಾಪ ಇದ್ದರೂ ಕೂಡ ಈಗೋ ಬಿಟ್ಟು ಅವರನ್ನು ಮಾತನಾಡಿಸಿ. ಅವರಿಂದ ನಿಮಗೆ ನೋವಾದರು ಅವರನ್ನು ಕ್ಷಮಿಸಿಬಿಡಿ. ಅವರೊಟ್ಟಿಗೆ ಆದಷ್ಟು ನಗುತ್ತಾ ಕಾಲ ಕಳೆಯಿರಿ. ಈ ಜೀವನ ಬಹಳ ಅನಿರೀಕ್ಷಿತಗಳ ಆಗರ. ಈ ಜೀವನ ಬಹಳ ಚಿಕ್ಕದು ಎಂದು ರಕ್ಷಿತಾ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಬರೆದು ಕೊಂಡಿದ್ದಾರೆ.

ಇದನ್ನು ಓದಿ:Elumale Movie: ಏಳುಮಲೆ ಟ್ರೇಲರ್ ರಿಲೀಸ್; ಸಾಥ್ ಕೊಟ್ಟ ಡಾಲಿ-ನವೀನ್ ಶಂಕರ್, ಶರಣ್!

ಬಳಿಕ ನಟಿ ರಕ್ಷಿತಾ ಅವರು ತಮ್ಮ ಸ್ನೇಹಿತೆ ವಸುಧಾ ಬಗ್ಗೆ ಕೂಡ ಪೋಸ್ಟ್‌ನಲ್ಲಿ ವಿಚಾರ ಹಂಚಿ ಕೊಂಡಿದ್ದಾರೆ. ನಾನು ವಸು ಬಹಳ ಒಳ್ಳೆಯ ಸ್ನೇಹಿತೆಯರು. ಆದರೆ ಕಳೆದ 5 ವರ್ಷಗಳಿಗೂ ಅಧಿಕ ಕಾಲ ನಾವು ಟಚ್‌ನಲ್ಲಿ ಇರಲಿಲ್ಲ. ಆದರೆ ನನಗೆ ಈಗ ನಾವು ಟಚ್‌ನಲ್ಲಿ ಇರಬೇಕಿತ್ತು ಅನಿಸುತ್ತಿದೆ. ಅವಳಿಗೆ ಮಾತನಾಡಲು ಯಾರಾದರೂ ಬೇಕಿತ್ತು‌. ನಾನು ಅವಳೊಂದಿಗೆ ಆಗ ಇರಬೇಕಿತ್ತು ಅನ್ನಿಸುತ್ತೆ. ನನ್ನ ಸ್ನೇಹಿತೆ ಆಗಸ್ಟ್ 27 ರಂದು ಕೊಲ್ಲೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಳು. ಅವಳು ನಮ್ಮೊಂದಿಗೆ ಇನ್ನಿಲ್ಲ. ಅವಳು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಳು. ಆದರೆ ಯಾರಿಗೂ ಹೀಗೆ ಆಗುವುದು ಬೇಡ. ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನೆಲ್ಲ ಮರೆತು ಚೆನ್ನಾಗಿರಿ. ಖಿನ್ನತೆ ಸಮಸ್ಯೆ ಇದ್ದು ಸ್ನೇಹಿತರ ಜೊತೆ ಮಾತನಾಡಿ ಮನಸ್ಸು ಹಗುರ ಮಾಡಿಕೊಳ್ಳಿ... ಇಲ್ಲವೇ ಥೆರಪಿ ಚಿಕಿತ್ಸೆ ಪಡೆಯಿರಿ.. ಮಿಸ್‌ ಯು ವಸು ಎಂದು ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.

ನಟಿ ರಕ್ಷಿತಾ ಅವರು ಈ ಪೋಸ್ಟ್ ಜೊತೆಗೆ ತಮ್ಮ ಸ್ನೇಹಿತೆ ಜೊತೆಗಿರುವ ಫೋಟೊ ಕೂಡ ಹಂಚಿಕೊಂಡಿದ್ದಾರೆ. ಇವರ ಸ್ನೇಹಿತೆ ವಸುಧಾ ಚಕ್ರವರ್ತಿ ಅವರು ಆಗಸ್ಟ್ 27ರಂದು ಕೊಲ್ಲೂರಿನ ಸಮೀಪ ಇರುವ ಸೌಪರ್ಣಿಕಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆ ವೇಳೆ ಅವರಿಗೆ ಮಾನಸಿಕ ಖಿನ್ನತೆ ಸಮಸ್ಯೆ ಇತ್ತು ಎಂಬುದು ತಿಳಿದು ಬಂದಿದೆ. ಎರಡು ದಿನಗಳ ಬಳಿಕ ಆಗಸ್ಟ್ 30ರಂದು ಅವರ ಮೃತದೇಹ ಪತ್ತೆ ಆಗಿದ್ದು ಅವರ ಕುಟುಂಬದವರಿಗೆ , ಆಪ್ತರಿಗೆ ಈ ವಿಚಾರ ದೊಡ್ಡ ಆಘಾತದಂತಾಗಿದೆ.