Alia Bhatt: ರಣಬೀರ್-ಆಲಿಯಾ ಹೊಸ ಬಂಗಲೆ ಹೇಗಿದೆ ಗೊತ್ತಾ? ವಿಡಿಯೊ ನೋಡಿ
Ranbir Kapoor and Alia Bhatt: ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಬಹುನಿರೀಕ್ಷಿತ ಕನಸಿನ ಮನೆ ಪೂರ್ಣಗೊಂಡಿದ್ದು ಆರು ಅಂತಸ್ತಿನ ಈ ಬಂಗಲೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ರಣಬೀರ್ ಮತ್ತು ಆಲಿಯಾ ಅವರ ಈ ಹೊಸ ಮನೆ ಆಧುನಿಕ ವಿನ್ಯಾಸದೊಂದಿಗೆ ಆಕರ್ಷಕವಾಗಿದ್ದು, ಈ ವಿಡಿಯೊ ನೋಡಿ ಫ್ಯಾನ್ಸ್ ಶುಭ ಹಾರೈಸುತ್ತಿದ್ದಾರೆ.

Ranbir Kapoor and Alia Bhatt

ಮುಂಬೈ: ಬಾಲಿವುಡ್‌ನ ಕ್ಯೂಟ್ ಜೋಡಿದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದ್ಯ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಅವರ ಬಹುನಿರೀಕ್ಷಿತ ಕನಸಿನ ಮನೆ ಪೂರ್ಣ ಗೊಂಡಿದ್ದು, ಅವರದ್ದೆನ್ನಲಾದ ಆರು ಅಂತಸ್ತಿನ ಈ ಬಂಗಲೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ರಣಬೀರ್ ಮತ್ತು ಆಲಿಯಾ ಅವರ ಈ ಹೊಸ ಮನೆ ಆಧುನಿಕ ವಿನ್ಯಾಸದೊಂದಿಗೆ ಆಕರ್ಷಕವಾಗಿದ್ದು, ಈ ವಿಡಿಯೊ ನೋಡಿ ಫ್ಯಾನ್ಸ್ ಶುಭ ಹಾರೈಸುತ್ತಿದ್ದಾರೆ.
ರಣಬೀರ್ ಹಾಗೂ ಆಲಿಯಾ ಅವರ ಡ್ರೀಮ್ ಹೌಸ್ ಇದಾಗಿದ್ದು, ಕೆಲವು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಈ ಬಂಗಲೆಯ ಫೋಟೋ ಆಗಾಗ ವೈರಲ್ ಆಗುತ್ತಿದ್ದವು. ಸುಮಾರು 250 ಕೋಟಿ ರೂ. ಮೌಲ್ಯದ ಆರು ಅಂತಸ್ತಿನ ಮನೆ ಕೊನೆಗೂ ಪೂರ್ಣಗೊಂಡಿದ್ದು, ಅದರ ಸಂಪೂರ್ಣ ಮುಂಭಾಗದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೌಟುಂಬಿಕ ಪರಂಪರೆ ಇದ್ದ ಈ ಮನೆಗೆ ಕಪೂರ್ ಕುಟುಂಬದ ಜತೆ ಭಾವನಾತ್ಮಕ ಸಂಬಂಧ ಹೊಂದಿದೆ. ಇದು ಮೊದಲು ರಣಬೀರ್ ಅವರ ಅಜ್ಜ-ಅಜ್ಜಿ ರಾಜ್ ಕಪೂರ್ ಮತ್ತು ಕೃಷ್ಣಾ ರಾಜ್ ಕಪೂರ್ ಅವರಿಗೆ ಸೇರಿದ ಮನೆಯಾಗಿದ್ದು 1980ರಲ್ಲಿ ಈ ಮನೆ ರಿಷಿ ಕಪೂರ್ ಹಾಗೂ ನೀತು ಕಪೂರ್ ಇಲ್ಲಿದ್ದರು. ಇದೀಗ ರಣಬೀರ್ ಮತ್ತು ಆಲಿಯಾ ಆಧುನಿಕ ಶೈಲಿಯಲ್ಲಿ ಈ ಮನೆಯನ್ನು ಪುನರ್ ನಿರ್ಮಿಸಿದ್ದಾರೆ.
Ranbir Kapoor’s new bungalow simple and elegant ✨ pic.twitter.com/dkfaLYrkmH
— 𝓐𝔂𝓪𝓷 🚩 (@behind_you_rk) August 23, 2025
ಸರಳತೆ ಮತ್ತು ಸೌಂದರ್ಯದ ಮೆರುಗು ಹೆಚ್ಚಿಸಿರುವ ರಣಬೀರ್ ಮತ್ತು ಆಲಿಯಾ ಅವರ ಈ ಹೊಸ ಮನೆ ಆಧುನಿಕ ವಿನ್ಯಾಸದೊಂದಿಗೆ ಬಹಳಷ್ಟು ಆಕರ್ಷಕವಾಗಿದೆ. ಬಂಗಲೆಯ ಹೊರ ಭಾಗವು ಬೂದು ಬಣ್ಣದಿಂದ ಕಂಗೊಳಿಸಿದ್ದು ಪ್ರತಿ ಬಾಲ್ಕನಿಯಲ್ಲಿ ಸಾಲುಸಾಲಾಗಿ ಗಿಡಗಳಿಂದ ಅಲಂಕರಿಸಲಾಗಿದೆ. ಒಳಭಾಗದಲ್ಲಿ ಎತ್ತರದ ಸೀಲಿಂಗ್ ಹೊಂದಿರುವ ಲಿವಿಂಗ್ ಸ್ಪೇಸ್‌ಗೆ ಐಷಾರಾಮಿ ದೀಪಗಳುವಿಶೇಷ ಮೆರಗು ನೀಡಿವೆ. ಈ ಬಂಗಲೆಗೆ ರಣಬೀರ್ ಅವರ ಅಜ್ಜಿ ಕೃಷ್ಣ ರಾಜ್ ಕಪೂರ್ ಅವರ ಗೌರವಾರ್ಥವಾಗಿ 'ಕೃಷ್ಣ ರಾಜ್ ಬಂಗಲೆ' ಎಂದು ಹೆಸರು ಕೂಡ ಇಡಲಾಗಿದೆ.
ಇದನ್ನು ಓದಿ:45 Movie: ಬಹು ನಿರೀಕ್ಷಿತ ಮಲ್ಟಿಸ್ಟಾರ್ಸ್ ʼ45ʼ ಚಿತ್ರದ ರಿಲೀಸ್ ಡೇಟ್ ಅನೌನ್ಸ್
ಮಗಳು ರಾಹಾಗೆ ವಿಶೇಷ ಉಡುಗೊರೆ?
ಮೂಲಗಳ ಪ್ರಕಾರ ಈ ಆರು ಅಂತಸ್ತಿನ ಬಂಗಲೆಯನ್ನು ರಣಬೀರ್ ಮತ್ತು ಆಲಿಯಾ ತಮ್ಮ ಮಗಳು ರಾಹಾ ಕಪೂರ್‌ಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಇದರ ಒಟ್ಟು ಮೌಲ್ಯ 250 ಕೋಟಿ ರೂ. ಆಗಿದ್ದು, ಇದನ್ನು ರಾಹಾ ಅವರ ಹೆಸರಿಗೆ ನೋಂದಾಯಿಸುವ ಸಾಧ್ಯತೆ ಕೂಡ ಎಂದು ಹೇಳಲಾಗುತ್ತಿದೆ. ಈ ವರ್ಷದ ದೀಪಾವಳಿಯನ್ನು ರಾಹಾ ಜತೆ ಹೊಸ ಮನೆಯಲ್ಲಿ ಆಚರಿಸುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಈ ನಡುವೆ ಸಿನಿಮಾದಲ್ಲೂ ಬ್ಯುಸಿಯಾಗಿದ್ದು, 2022ರಲ್ಲಿ ʼಬ್ರಹ್ಮಾಸ್ತ್ರʼ ಚಿತ್ರದ ನಂತರ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ʼಲವ್ ಆ್ಯಂಡ್ ವಾರ್ʼ ಚಿತ್ರದಲ್ಲಿ ಮತ್ತೆ ಒಟ್ಟಾಗಿ ತೆರೆ ಹಂಚಿ ಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.