Rupali Ganguly: ಧಾರಾವಾಹಿ ಕ್ಷೇತ್ರಕ್ಕೂ ರಾಷ್ಟ್ರೀಯ ಪ್ರಶಸ್ತಿ ನೀಡಬೇಕು ಎಂದ ನಟಿ ರೂಪಾಲಿ ಟ್ರೋಲ್‌ಗೆ ಗುರಿ
ʼಸಾರಾಭಾಯ್ ವರ್ಸಸ್ ಸಾರಾಭಾಯ್ʼ ವೆಬ್ ಸೀರಿಸ್, ʼಅನುಪಮಾʼ ಧಾರಾವಾಹಿ ಮೂಲಕ ಮನೆಮಾತಾದ ನಟಿ ರೂಪಾಲಿ ಗಂಗೂಲಿ ತಮ್ಮ ಅದ್ಭುತ ಅಭಿನಯದ ಮೂಲಕವೇ ವೀಕ್ಷಕರ ಮನಗೆದ್ದಿದ್ದಾರೆ. ʼಅನುಪಮಾʼ ಸೀರಿಯಲ್ ದೇಶದ ನಂಬರ್ ಒನ್ ಸಿರಿಯಲ್ ಎಂಬ ಖ್ಯಾತಿ ಕೂಡ ಪಡೆದಿತ್ತು. ಇದೀಗ ರೂಪಾಲಿ ರಾಷ್ಟ್ರೀಯ ಪ್ರಶಸ್ತಿಗೆ ಟಿವಿ ವಾಹಿನಿಯಲ್ಲಿ ಅಭಿನಯಿಸುವ ನಟ ನಟಿಯರನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Rupali Ganguly

ಮುಂಬೈ: ಹಿಂದಿ ಟೆಲಿವಿಶನ್ ವಾಹಿನಿಗಳಲ್ಲಿ ಮನೆಮಾತಾದ ʼಅನುಪಮಾʼ ಧಾರವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ (Rupali Ganguly) ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. 'ಸಾರಾಭಾಯ್ ವರ್ಸಸ್ ಸಾರಾಭಾಯ್' ವೆಬ್ ಸೀರಿಸ್, ʼಅನುಪಮಾʼ ಧಾರಾವಾಹಿ ಮೂಲಕವೇ ಮನೆಮಾತಾದ ನಟಿ ರೂಪಾಲಿ ಗಂಗೂಲಿ ತಮ್ಮ ಅದ್ಭುತ ಅಭಿನಯದ ಮೂಲಕವೇ ಅಪಾರ ಪ್ರಮಾಣದಲ್ಲಿ ವೀಕ್ಷಕರ ಮನಗೆದ್ದಿದ್ದಾರೆ. ʼಅನುಪಮಾʼ ಸೀರಿಯಲ್ ದೇಶದ ನಂಬರ್ ಒನ್ ಸಿರಿಯಲ್ ಎಂಬ ಖ್ಯಾತಿಯನ್ನು ಕೂಡ ಪಡೆದಿತ್ತು. ಈ ಮೂಲಕ ಈ ಧಾರಾವಾಹಿಯ ನಟಿ ರೂಪಾಲಿ ರಾಷ್ಟ್ರೀಯ ಪ್ರಶಸ್ತಿಗಳಿಗೆ ಟಿವಿ ವಾಹಿನಿಯಲ್ಲಿ ಅಭಿನಯಿಸುವ ನಟ ನಟಿಯರನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಬೆಂಬಲಿಸಿದರೆ, ಇನ್ನು ಕೆಲವು ನೆಟ್ಟಿಗರು ನಟಿಯ ಈ ನಿರ್ಣಯಕ್ಕೆ ಟ್ರೋಲ್ ಮಾಡಿ ಟೀಕಿಸಿದ್ದಾರೆ.
ʼಅನುಪಮಾʼ ಧಾರಾವಾಹಿಯ ನಟಿ ರೂಪಾಲಿ ಗಂಗೂಲಿ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದು, ರಾಷ್ಟ್ರೀಯ ಪ್ರಶಸ್ತಿಗಳಿಗೆ ದೂರದರ್ಶನ ಕಾರ್ಯಕ್ರಮಗಳು ಮತ್ತು ನಟರನ್ನು ಪರಿಗಣಿಸುವಂತೆ ಸರ್ಕಾರವನ್ನು ವಿನಂತಿಸಿದ್ದಾರೆ. ಇಂದು ಕಂಟೆಂಟ್ ರಚನೆಕಾರರಿಗೆ ರಾಷ್ಟ್ರೀಯ ಪ್ರಶಸ್ತಿ ಇದೆ, ಎಲ್ಲ ಭಾಷೆಯ ಪ್ರಾದೇಶಿಕ ಸಿನಿಮಾಗಳಿಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಲಭಿಸುತ್ತದೆ. ಆದರೆ ಟಿವಿ ಧಾರವಾಹಿ ಕ್ಷೇತ್ರಕ್ಕೆ ಯಾವುದೇ ಪ್ರಶಸ್ತಿ ಇಲ್ಲ ಎಂದು ನಟಿ ಹೇಳಿದ್ದಾರೆ.
ಟೆಲಿವಿಷನ್ ವಾಹಿನಿಯಲ್ಲಿಯೂ ಅದ್ಭುತವಾಗಿ ಅಭಿನಯಿಸುವ ನಟ-ನಟಿಯರು ಇದ್ದಾರೆ. ಅವರನ್ನು ನಿತ್ಯ ಧಾರವಾಹಿಯ ಮೂಲಕ ವೀಕ್ಷಕರು ನೋಡುತ್ತಿರುತ್ತಾರೆ. ಈ ಮೂಲಕ ಸಾಮಾಜಿಕ ರಂಗದಲ್ಲಿಯೂ ಇಂತಹ ನಟ ನಟಿಯರಿಗೆ ಅಭಿಮಾನಿಗಳಿದ್ದಾರೆ. ಹಾಗಿದ್ದರೂ ಇಂತಹ ಅಭಿನಯಕ್ಕೆ ಇದುವರೆಗೆ ರಾಷ್ಟ್ರೀಯ ಪ್ರಶಸ್ತಿಯ ಗರಿಮೆ ಸಿಕ್ಕಿಲ್ಲ. ಇನ್ನಾದರೂ ರಾಷ್ಟ್ರೀಯ ಪ್ರಶಸ್ತಿಗೆ ಟೆಲಿವಿಷನ್ ವಾಹಿನಿಗಳಲ್ಲಿ ಅಭಿನಯಿಸುವವರನ್ನು ಪರಿಗಣಿಸಬೇಕಾಗಿ ನಟಿ ರೂಪಾಲಿ ಗಂಗೂಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನು ಓದಿ:Monk the Young Movie: ವಿಭಿನ್ನ ಕಥಾಹಂದರವುಳ್ಳ ʼಮಾಂಕ್ ದಿ ಯಂಗ್ʼ ಚಿತ್ರ ಫೆ.28ಕ್ಕೆ ರಿಲೀಸ್
ಈ ಬಗ್ಗೆ ನೆಟ್ಟಿಗರು ನಾನಾ ತರನಾಗಿ ಕಾಮೆಂಟ್ ಹಾಕುತ್ತಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ಯಾವುದಕ್ಕೆ ನೀಡಬೇಕು ಎಂದು ಹೇಳಿ ಮೇಡಂ? ಮಹಿಳಾ ಸಬಲೀಕರಣದ ಹೆಸರಿನಲ್ಲಿ ನೀಡಬೇಕೆ ಅಥವಾ ಅಭಿನಯದ ಆಧಾರದಲ್ಲಿ ನೀಡಬೇಕೆ ಎಂದು ಒಬ್ಬ ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಷ್ಟ್ರೀಯ ಪ್ರಶಸ್ತಿಗಳಿಗೆ ಅರ್ಹವಾದ ರೀತಿಯ ಕಾರ್ಯಕ್ರಮಗಳು ಇಲ್ಲದಿರುವುದು ವಿಷಾದದ ಸಂಗತಿ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೆ ನಟಿ, ರಾಜಕೀಯ ನಾಯಕಿ ಸ್ಮೃತಿ ಇರಾನಿ ಕೂಡ ಧಾರಾವಾಹಿ ಕ್ಷೇತ್ರಕ್ಕೆ ಪುನರಾಗಮಿಸಿದ್ದು, ಇದರ ಬೆನ್ನಲ್ಲೆ ನಟಿ ರೂಪಾಲಿ ಮನವಿ ಮಾಡಿದ್ದಾರೆ. ಹೀಗಾಗಿ ಮುಂದಿನ ವರ್ಷವಾದರೂ ಈ ಮನವಿ ಈಡೇರಬಹುದೇ? ಎಂದು ಕಾದು ನೋಡಬೇಕು.