Bhagya Lakshmi Serial: ಭಾಗ್ಯ ಮನೆಯಲ್ಲಿ ಕಳ್ಳತನ: ಆದೀ ಕೊಟ್ಟ 25 ಲಕ್ಷ ಕಾಣೆ
ಭಾಗ್ಯಾನೇ ಆದೀಶ್ವರ್ ಬಳಿ ನೀವು ಈ ಚಾಲೆಂಜ್ ಗೆದ್ದಿದ್ದೀರ ನಾನು 25 ಲಕ್ಷ ಹಣವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಭಾಗ್ಯಾಳ ಮಾವ ರೂಮ್ನಿಂದ ಸ್ಯೂಟ್ ಕೇಸ್ ತಂದು ಕೊಡುತ್ತಾನೆ. ಆದರೆ, ಆದೀಶ್ವರ್ ಸ್ಯೂಟ್ ಕೇಸ್ ಓಪನ್ ಮಾಡಿ ನೋಡಿದಾಗ ಅದರಲ್ಲಿ ಏನೂ ಇರುವುದಿಲ್ಲ.

Bhagya lakshmi serial -

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಗೆ ಒಂದರ ಹಿಂದೆ ಒಂದರಂತೆ ಸಂಕಷ್ಟ ಎದುರಾಗುತ್ತಲೇ ಇದೆ. ತಾನು ಮಾಡಿಲ್ಲದ ತಪ್ಪಿಗೆ ಭಾಗ್ಯ ಅರೆಸ್ಟ್ ಆಗಿ ಸ್ಟೇಷನ್ಗೆ ಹೋಗುವಂತಾಯಿತು. ಬಳಿಕ ಆದೀಶ್ವರ್ ಬಂದು ಎಲ್ಲ ಸರಿ ಮಾಡಿ ಇಬ್ಬರೂ ಹೊರಬಂದಿದ್ದಾರೆ. ಇದೆಲ್ಲ ಮುಗಿದ ಮನೆಗೆ ಬಂದ ಬಳಿಕ ಭಾಗ್ಯಾಗೆ ಮತ್ತೊಂದು ಆಘಾತ ಉಂಟಾಗಿದೆ. ಭಾಗ್ಯಾಳ ಕೆಲಸ ಮೆಚ್ಚಿ ಆದೀ ಕೊಟ್ಟ 25 ಲಕ್ಷ ಭಾಗ್ಯ ಮನೆಯಿಂದ ಕಳ್ಳತನವಾಗಿದೆ. ಸ್ಯೂಟ್ ಕೇಸ್ನಲ್ಲಿ ಹಣವೆಲ್ಲ ಮಂಗಮಾಯವಾಗಿದೆ.
ಈ ಹಿಂದೆ ಆದೀಶ್ವರ್ ಹಾಗೂ ತಾಂಡವ್ ಪ್ರಾಜೆಕ್ಟ್ ಪ್ರೆಸೆಂಟೇಷನ್ ಸಂದರ್ಭದಲ್ಲಿ ಬಹುಮುಖ್ಯ ಫೈಲ್‌ವೊಂದನ್ನ ಮಿಸ್ ಮಾಡಿಕೊಂಡಿದ್ದರು. ಅದೇ ಫೈಲ್ ಅನ್ನು ಭಾಗ್ಯ ಸರಿಯಾದ ಸಮಯಕ್ಕೆ ಆಫೀಸ್ಗೆ ಬಂದು ತಂದುಕೊಟ್ಟಳು. ಭಾಗ್ಯ ಸಮಯಪ್ರಜ್ಞೆಯಿಂದ ಪ್ರಾಜೆಕ್ಟ್ ಓಕೆ ಆಯ್ತು. ಹೀಗಾಗಿ, ಭಾಗ್ಯಗೆ ಪ್ರಾಜೆಕ್ಟ್‌ನಲ್ಲಿ ಪಾಲು ಕೊಡುವ ರೂಪದಲ್ಲಿ 25 ಲಕ್ಷ ರೂಪಾಯಿಯನ್ನ ಆದಿ ನೀಡಿದನು. ಆದರೆ, ಆ ಹಣವನ್ನ ಸ್ವೀಕರಿಸಲು ಭಾಗ್ಯ ತಯಾರಿರಲಿಲ್ಲ.
ಹೆಚ್ಚು ದುಡ್ಡಿನಿಂದ ಭಾರವಾಗುತ್ತಿದೆ ಎಂದು ಭಾಗ್ಯ ಪದೇ ಪದೇ ಹೇಳಿದಳು. ಆಫೀಸ್ಗೆ ಬಂದು ಆ ಹಣವನ್ನು ಪುನಃ ಆದೀಗೆ ನೀಡಲು ಮುಂದಾದಳು. ಆದರೆ, ಇದಕ್ಕೆ ಒಪ್ಪದ ಆದೀಶ್ವರ್, ಭಾಗ್ಯಳಂತೆ ತಾನೂ ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ. ಈ ಚಾಲೆಂಜ್‌ನಲ್ಲಿ ಗೆದ್ದರೆ ಭಾಗ್ಯ 25 ಲಕ್ಷ ರೂಪಾಯಿ ತೆಗೆದುಕೊಳ್ಳಬೇಕು ಇಲ್ಲಾಂದ್ರೆ ಬಿಸಿನೆಸ್ ಪಾರ್ಟ್ನರ್ ಆಗಬೇಕು ಅಂತ ಆದೀಶ್ವರ್ ಸವಾಲು ಹಾಕಿದ್ದಾನೆ. ಒಂದು ವಾರ ನಾನು ನಿಮ್ಮತರ ಜೀವನ ಮಾಡಿ ನೋಡ್ತೀನಿ.. ಅದೇನೊ ಕಷ್ಟ ಅದು-ಇದು ಅಂತ ಹೇಳ್ತೀತಿ ಅಲ್ವಾ ಅದೇನು ಅಂತ ನಾನೂ ನೋಡ್ತೀನಿ ಎಂದು ಹೇಳಿ ಸಾಮಾನ್ಯ ಜೀವನ ನಡೆಸಿದ್ದಾನೆ.
ಅದರಂತೆ ಆದೀ ಕೊನೆಯ ದಿನದ ಕೊನೆಯ ಕ್ಷಣದ ವರೆಗೆ ಕಷ್ಟಪಟ್ಟು ಚಾಲೆಂಜ್ ಮಾಡಿದ್ದಾನೆ. ಅಂತಿಮವಾಗಿ ಭಾಗ್ಯ ಹಾಗೂ ಆದೀಶ್ವರ್ ಒಂದು ನಿರ್ಧಾರಕ್ಕೆ ಬರುತ್ತಾರೆ. ಈ ಮಿಡಲ್ ಕ್ಲಾಸ್ ಜೀವನ ಎಷ್ಟು ಸೂಕ್ಷ್ಮ, ಎಷ್ಟು ಕಷ್ಟ ಎಂಬುದು ನನಗೆ ಅರ್ಥವಾಗಿದೆ.. ಬೇರೆಯವರ ಹಣ ತೆಗೆದುಕೊಂಡರೆ ಏನೆಲ್ಲ ತೊಂದರೆ ಇದೆ ಎಂಬುದು ನನಗೆ ಗೊತ್ತಾಗಿದೆ.. ಆ ಹಣ ಭಾಗ್ಯಾಳಿಗೆ ಕಷ್ಟ ಆಗಬಹುದು.. ನಾನೇ ವಾಪಾಸ್ ತೆಗೆದುಕೊಳ್ಳುತ್ತೇನೆ ಎಂದು ಆದೀಶ್ವರ್ ಅಂದುಕೊಂಡಿದ್ದಾನೆ.
ಮತ್ತೊಂದೆಡೆ ಭಾಗ್ಯ, ಪಾಪಾ ಆದೀ ಅವರು ನಾನು ಈ ಹಣ ತೆಗೆದುಕೊಳ್ಳಬೇಕೆಂದು ಎಷ್ಟೆಲ್ಲ ಕಷ್ಟ ಪಟ್ಟಿದ್ದಾರೆ. ಅವರ ಸಂಪೂರ್ಣ ವಿರುದ್ಧದ ಜೀವನ ಶೈಲಿ ನಡೆಸಿ, ದಿನಕ್ಕೆ 150 ರೂ. ಪಾತ್ರ ಖರ್ಚು ಮಾಡಿ, ಎರಡು ಪ್ರತಿ ಡ್ರೆಸ್ ಮಾತ್ರ ಹಾಕಿ, ಆಫೀಸ್ಗೆ ಬಸ್ನಲ್ಲಿ ಹೋಗಿ ನಾನು ಹಣ ತೆಗೆದುಕೊಳ್ಳಬೇಕೆಂದು ಎಷ್ಟು ಶ್ರಮ ಹಾಕಿದ್ದಾರೆ.. ಈ ಚಾಲೆಂಜ್‌ನಲ್ಲಿ ಅವರು ಗೆದ್ದಿದ್ದಾರೆ.. ಇನ್ನುಕೂಡ ನಾನು ಈ ಹಣ ತೆಗೆದುಕೊಂಡಿಲ್ಲ ಅಂದ್ರೆ ಅದು ಸರಿ ಇರುವುದಿಲ್ಲ ಎಂದು ಭಾಗ್ಯ ಅಂದುಕೊಂಡಿದ್ದಾಳೆ.
ಕೊನೆಗೆ ಭಾಗ್ಯಾನೇ ಆದೀಶ್ವರ್ ಬಳಿ ನೀವು ಈ ಚಾಲೆಂಜ್ ಗೆದ್ದಿದ್ದೀರ ನಾನು 25 ಲಕ್ಷ ಹಣವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಈ ಮಾತು ಕೇಳಿ ಆದೀಗೆ ಶಾಕ್ ಆದರೂ ಒಂದುಕಡೆಯಿಂದ ಖುಷಿ ಆಗಿದೆ. ಸರಿ ಎನ್ನುತ್ತಾನೆ ಆದೀ. ಪುನಃ ಆದೀ ಅವರೇ ಭಾಗ್ಯಾಗೆ ಆ ಹಣ ನೀಡಲಿ ಎಂದು ಭಾಗ್ಯಾಳ ಮಾವ ರೂಮ್ನಿಂದ ಸ್ಯೂಟ್ ಕೇಸ್ ತಂದು ಕೊಡುತ್ತಾನೆ. ಆದರೆ, ಆದೀಶ್ವರ್ ಸ್ಯೂಟ್ ಕೇಸ್ ಓಪನ್ ಮಾಡಿ ನೋಡಿದಾಗ ಅದರಲ್ಲಿ ಏನೂ ಇರುವುದಿಲ್ಲ. ಇದನ್ನು ಕಂಡು ಮನೆಯವರಿಗೆ ಆಘಾತವಾಗುತ್ತದೆ.
ಬಹುಶಃ ಕಳ್ಳತನ ಆಗಿರಬೇಕೆಂದು ಅಂದುಕೊಳ್ಳುತ್ತಾರೆ. ಮನೆಯವರೆಲ್ಲ ಇಡೀ ರೂಮ್ಗೆ ತೆರಳಿ ಹಣ ಇದೆಯಾ ಎಂದು ಹುಡುಕಿದ್ದಾರೆ. ಬಳಿಕ ಕುಸುಮಾ, ನಮ್ಮ ಮನೆಯ ಹಿಂದಿನ ಡೋರ್ ಸರಿಯಿಲ್ಲ.. ನಿನ್ನೆಯಷ್ಟೆ ಅದನ್ನು ಸರಿ ಮಾಡಿದ್ದು ಎಂದು ಹೇಳುತ್ತಾಳೆ. ಆಗ ಕಳ್ಳತನ ಆಗಿರುವುದು ಖಚಿತವಾಗಿದೆ. ಭಾಗ್ಯ ಹಾಗೂ ಆದೀ ಪೊಲೀಸ್ ಸ್ಟೇಷನ್ಗೆ ತೆರಳಿ ಕಂಪ್ಲೆಂಟ್ ಕೊಡುತ್ತಾರೆ. ಇದೇ ಸಮಯದಲ್ಲಿ ತಾಂಡ್ ಆದೀಗೆ ಕಾಲ್ ಮಾಡಿ ಎಲ್ಲಿದ್ದೀರ ಎಂದು ಕೇಳುತ್ತಾನೆ.
ಆದೀ ಸ್ಟೇಷನ್ನಲ್ಲಿ ಇರುವ ಸುದ್ದಿ ಕೇಳಿ ತಾಂಡವ್ ಕೂಡ ಅಲ್ಲಿಗೆ ಬಂದಿದ್ದಾನೆ. ಭಾಗ್ಯ ಮನೆಯಿಂದ 25 ಲಕ್ಷ ಕಳುವಾದ ಸುದ್ದಿ ಕೇಳಿ ತಾಂಡವ್ಗೆ ಕೋಪ ಬರುತ್ತದೆ. ನಾನು ಅವತ್ತೇ ಹೇಳಿದೆ ನಿಮ್ ಹತ್ರ, ಇವರಿಗೆ ಬೇಕರಿಯಿಂದ ಸ್ವೀಟ್ ತೆಗೊಂಡು ಹೋದ್ರೆ ಸಾಕು.. ಈ ಹಣ ಎಲ್ಲ ಏಕೆ ಅಂತ.. ಈಗ ನೋಡಿ ಏನು ಮಾಡಿದ್ದಾರೆ ಅಂತ ಎಂದು ರೇಗಾಡಿದ್ದಾನೆ. ಬಳಿಕ ಪೊಲೀಸರು ಮನೆಯನ್ನು ನೋಡಬೇಕು ಹೋಗೋಣ ಎಂದಿದ್ದಾರೆ. ಸದ್ಯ ತಾಂಡವ್ ಸೇರಿ ಎಲ್ಲರೂ ಭಾಗ್ಯ ಮನೆಗೆ ತೆರಳಿದ್ದಾರೆ. ಈ ಕಳ್ಳತನ ಯಾರು ಮಾಡಿದ್ರು..?, 25 ಲಕ್ಷ ಪುನಃ ಸಿಗುತ್ತ?, ಈ ಕಳ್ಳತನಕ್ಕೂ ಕನ್ನಿಕಾಗೂ ಸಂಬಂಧ ಇದೆಯೇ? ಎಂಬುದೆಲ್ಲ ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
Mokshitha Pai: ಬಿಗ್ ಬಾಸ್ ಮೋಕ್ಷಿತಾ ನಟನೆಯ ಮಿಡಲ್ ಕ್ಲಾಸ್ ರಾಮಾಯಣ ಸಿನಿಮಾದ ಟ್ರೈಲರ್ ರಿಲೀಸ್