BBK 12: ಮಿತಿ ಮೀರಿದ ಜಗಳ: ಬಿಗ್ ಬಾಸ್ ಸ್ಥಗಿತಗೊಳ್ಳುವ ಮುನ್ನ ಸ್ಪರ್ಧಿಗಳ ನಡುವೆ ಕಿತ್ತಾಟ
Bigg Boss Kannada 12: ಇಂದಿನ ಎಪಿಸೋಡ್ನಲ್ಲಿ ನಿನ್ನೆಯ ದಿನದ ಚಟುವಟಿಕೆ ಪ್ರಸಾರ ಕಾಣಲಿದೆ. ಅಂದರೆ ಸ್ಪರ್ಧಿಗಳನ್ನು ಮನೆಯಿಂದ ಹೊರಕಳುಹಿಸುವುದಕ್ಕೂ ಮುನ್ನ ನಡೆದ ಟಾಸ್ಕ್, ಸಂಭಾಷಣೆ ಇಂದು ಟೆಲಿಕಾಸ್ಟ್ ಆಗಲಿದೆ. ಇದೀಗ ಕಲರ್ಸ್ ಬಿಡುಗಡೆ ಮಾಡಿರುವ ಇಂದಿನ ಎಪಿಸೋಡ್ನಲ್ಲಿ ಪ್ರೋಮೋದಲ್ಲಿ ಬರೀ ಜಗಳಗಳೇ ಕಾಣುತ್ತಿದೆ. ಮನೆ ತೊರೆಯುವ ಮೊದಲು ಸ್ಪರ್ಧಿಗಳ ನಡುವೆ ಸರಿಯಾಗಿ ಕಿತ್ತಾಟ ನಡೆದಿದೆ.

Manju Bhashini and Rashika BBK 12 -

ಬೆಂಗಳೂರು, ಅಕ್ಟೋಬರ್ 08: ಪರಿಸರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ನಿನ್ನೆ ಸಂಜೆ ಅಧಿಕಾರಿಗಳು ಬೀಗ ಜಡಿದರು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆಯದ ಕಾರಣ ಅಧಿಕಾರಿಗಳು ಈ ಕ್ರಮ ಕೈಗೊಂಡ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಕೂಡ ಸ್ಥಗಿತಗೊಂಡಿತು. ಹೀಗಾಗಿ ಬಿಗ್ ಬಾಸ್ ಇನ್ನುಮುಂದೆ ನಡೆಯುತ್ತ ಅಥವಾ ಇಲ್ಲಿಗೇ ಸೀಸನ್ 12 ಕೊನೆಯಾಗುತ್ತ, ಸ್ಪರ್ಧಿಗಳನ್ನ ಏನು ಮಾಡುತ್ತಾರೆ?, ಎಷ್ಟು ದಿನ ರೆಸಾರ್ಟ್ನಲ್ಲಿ ಇಡುತ್ತಾರೆ? ಹೀಗೆ ಅನೇಕ ಪ್ರಶ್ನೆಗಳು ಎದ್ದಿದ್ದವು. ಆದರೀಗ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ.
ಜಾಲಿವುಡ್ ಸ್ಟುಡಿಯೋಸ್ ಇಂದು ಬೆಳಗ್ಗೆ ಸ್ಟುಡಿಯೋದಲ್ಲಿ ಇರುವ ಲೋಪಗಳನ್ನು ಸರಿಪಡಿಸಿಕೊಳ್ಳಲು ಹದಿನೈದು ದಿನಗಳ ಕಾಲಾವಕಾಶ ನೀಡಿ ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು. ಅದರಂತೆ ಈ ಮನವಿಯನ್ನು ಮನ್ನಿಸಿರು ಜಿಲ್ಲಾಧಿಕಾರಿಗಳು ಸ್ವೀಕರಿಸಿ ಹತ್ತು ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ. ಇದರ ಒಳಗೆ ಎಲ್ಲ ಸಮಸ್ಯೆ ಬಗೆ ಹರಿಯಬೇಕು. ಹೀಗಾಗಿ ಇಂದಿನಿಂದಲೇ ಪುನಃ ಬಿಗ್ ಬಾಸ್ ಆರಂಭವಾಗುವ ಸಾಧ್ಯತೆ ಇದೆ.
ಸದ್ಯ ಇಂದಿನ ಎಪಿಸೋಡ್ನಲ್ಲಿ ನಿನ್ನೆಯ ದಿನದ ಚಟುವಟಿಕೆ ಪ್ರಸಾರ ಕಾಣಲಿದೆ. ಅಂದರೆ ಸ್ಪರ್ಧಿಗಳನ್ನು ಮನೆಯಿಂದ ಹೊರಕಳುಹಿಸುವುದಕ್ಕೂ ಮುನ್ನ ನಡೆದ ಟಾಸ್ಕ್, ಸಂಭಾಷಣೆ ಇಂದು ಟೆಲಿಕಾಸ್ಟ್ ಆಗಲಿದೆ. ಇದೀಗ ಕಲರ್ಸ್ ಬಿಡುಗಡೆ ಮಾಡಿರುವ ಇಂದಿನ ಎಪಿಸೋಡ್ನಲ್ಲಿ ಪ್ರೋಮೋದಲ್ಲಿ ಬರೀ ಜಗಳಗಳೇ ಕಾಣುತ್ತಿದೆ. ಮನೆ ತೊರೆಯುವ ಮೊದಲು ಸ್ಪರ್ಧಿಗಳ ನಡುವೆ ಸರಿಯಾಗಿ ಕಿತ್ತಾಟ ನಡೆದಿದೆ.
ಮಂಜು ಭಾಷಿಣಿ ಹಾಗೂ ರಶಿಕಾ ನಡುವಣ ಜಗಳದ ವಿಡಿಯೋ:
ಬಿಗ್ ಬಾಸ್ ಮನೆಯಲ್ಲಿ ಯಾರೂ ಫ್ರೆಂಡ್ಸ್ ಅಲ್ಲ, ಸಂಬಂಧಕ್ಕೆ ಬೆಲೆಯಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ನೋಡಿ. ಕಳೆದ 10 ದಿನಗಳಿಂದ ಕುಚುಕುಗಳಂತಿದ್ದ ಹಾಗೂ ಜಂಟಿಯಾಗಿರುವ ಮಂಜು ಭಾಷಿಣಿ ಮತ್ತು ರಾಶಿಕಾ ನಡುವೆ ಈಗ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಪ್ರೋಮೋದಲ್ಲಿ ಮಂಜು ಅವರು ಅಸುರನ ಬಳಿ, ಈ ಹುಡುಗಿ (ರಾಶಿಕಾ) ಪದೇ ಪದೇ ವಾಶ್‌ರೂಂಗೆ ಹೋಗ್ತಾಳೆ ಎಂದು ಬೇಸರದಿಂದ ಹೇಳುತ್ತಾರೆ. ಈ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಶಿಕಾ ಪರ್ಸನಲ್ ವಿಷಯ ಇಲ್ಲಿ ತೆಗೆದುಕೊಂಡು ಬರಬೇಡಿ ಅಂತಾರೆ. ಮನೆಯ ಅಸುರ ಕಾಕ್ರೋಚ್ ಸುಧಿ ನಾವು ಹೇಳುವರೆಗೂ ನೀವು ವಾಶ್ ರೂಂಗೆ ಹೋಗಬೇಡಿ ಎಂದು ಆಜ್ಞೆ ಮಾಡುತ್ತಾರೆ.
BBK 12: ‘ಸ್ಪಂದನಾ ಜೊತೆ ಮಾತಾಡೋಕೆ ಕರಿಬಸಪ್ಪ ಮಲಗೋವರೆಗೆ ಕಾಯ್ತಾ ಇದ್ದೆ’ ಎಂದ ಆರ್ಜೆ ಅಮಿತ್
ಇದು ರಾಶಿಕಾಗೆ ಮತ್ತಷ್ಟು ಸಿಟ್ಟು ತರಿಸಿದೆ. ಇತ್ತ ಮಂಜು ಭಾಷಿಣಿ ಮತ್ತು ರಾಶಿಕಾ ಜಗಳ ನಡೆಯುತ್ತಿದ್ದರೆ ಅತ್ತ ಜಾನ್ವಿ ಮತ್ತು ಅಶ್ವಿನಿ ಗೌಡ ನಗುತ್ತಾ ಮಜಾ ತೆಗೆದುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಚಪ್ಪಾಳೆ ತಟ್ಟುತ್ತಾ ರಾಶಿಕಾಗೆ ತಮ್ಮ ಬೆಂಬಲ ಸೂಚಿಸುತ್ತಾರೆ. ಈ ವಾರ ಇವರೇ ಮನೆಯಿಂದ ಹೊರಗೆ ಹೋಗುವುದು ಎಂದು ಹೇಳಿದ್ದಾರೆ.
ಮತ್ತೊಂದೆಡೆ ಊಟದ ವಿಚಾರಕ್ಕೆ ರಕ್ಷಿತಾ ಶೆಟ್ಟಿ ಹಾಗೂ ಮಂಜು ಭಾಷಿಣಿ ನಡುವೆ ಮತ್ತೊಂದು ಜಗಳ ನಡೆದಿದೆ. ರಕ್ಷಿತಾ ಎಲ್ಲರ ಮುಂದೆಯೇ ಕಾಕ್ರೋಚ್ ಸುಧಿಗೆ ನಿಮಗೆ ನಾಚಿಕೆ ಆಗೋದಿಲ್ವಾ ಎಂದು ಕೆರಳಿದ್ದಾರೆ. ಅಷ್ಟೇ ಅಲ್ಲದೇ ಮಂಜು ಭಾಷಿಣಿ ಜೊತೆಗೂ ರಕ್ಷಿತಾ ಶೆಟ್ಟಿ ಜಗಳ ಮಾಡಿಕೊಂಡಿದ್ದಾರೆ. ಇದೇ ವೇಳೆ ಮಂಜು ಭಾಷಿಣಿ ಅವರು ಗ್ಯಾಸ್ ಮೇಲಿದ್ದ ಬಾಣಲೆಯನ್ನು ರಕ್ಷಿತಾ ಮೇಲೆ ಎಸೆಯೋದಕ್ಕೆ ಮುಂದಾಗಿದ್ದರು. ಗಲಾಟೆ ಬಳಿಕ ರಕ್ಷಿತಾ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಒಟ್ಟಾರೆ ದೊಡ್ಮನೆಗೆ ದೊಡ್ಡ ಆಘಾತ ಎದುರಾಗುವ ಮುನ್ನ ಅಂದರೆ ನಿನ್ನೆ ಮನೆಯೊಳಗೆ ಬರೀ ಜಗಳಗಳೇ ನಡೆದಿರುವಂತೆ ಕಾಣುತ್ತಿದೆ.
BBK 12: ಬಿಗ್ ಬಾಸ್ ದಿಢೀರ್ ಸ್ಥಗಿತಕ್ಕೆ ಅಸಲಿ ಕಾರಣ ಏನು?: ಇಲ್ಲಿದೆ ನೋಡಿ ಪಟ್ಟಿ