ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sangeetha Sringeri: ಕೊನೆಗೂ ಒಂದು ಸಿನಿಮಾ ಒಪ್ಪಿಕೊಂಡ ಸಂಗೀತಾ ಶೃಂಗೇರಿ, ಇದು ಅಂತಿಂಥಾ ಪಾತ್ರವಲ್ಲ

ಆದರೀಗ ಸದ್ದಿಲ್ಲದೆ ಸಂಗೀತಾ ದೊಡ್ಡ ಗ್ಯಾಪ್ ಬಳಿಕ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಇವರಿಗೆ ಸಿಕ್ಕಿರುವುದು ಅಂತಿಂಥಾ ಪಾತ್ರವಲ್ಲಂತೆ. ಆಪ್ತಮಿತ್ರ ಚಿತ್ರದಲ್ಲಿದ್ದ ನಟಿ ಸೌಂದರ್ಯ ಪಾತ್ರದಂತೆ ಇವರ ಪಾತ್ರ ಇದರಲ್ಲಿದೆಯಂತೆ. ಹೌದು, ಸಂಗೀತಾ ಶೃಂಗೇರಿ ಒಪ್ಪಿಕೊಂಡಿರುವುದು ಭಯ ಬೀಳಿಸುವ ಮುದ್ದಾದ ಹಾರರ್‌ ಸಿನಿಮಾಕ್ಕೆ.

ಕೊನೆಗೂ ಒಂದು ಸಿನಿಮಾ ಒಪ್ಪಿಕೊಂಡ ಸಂಗೀತಾ, ಇದು ಅಂತಿಂಥಾ ಪಾತ್ರವಲ್ಲ

Sangeetha Sringeri

Profile Vinay Bhat Aug 8, 2025 7:32 AM

ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ಅನೇಕ ಕಲಾವಿದರಿಗೆ ದೊಡ್ಡ ಬ್ರೇಕ್ ಕೊಟ್ಟಿದೆ. ಈ ಶೋಗೆ ಹೋಗಿ ಬಂದ ಮೇಲೆ ಅನೇಕ ಸ್ಪರ್ಧಿಗಳು ನಟನಾ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಆಫರ್​ಗಳು ಇವರಿಗೆ ಹುಡುಕಿಕೊಂಡು ಬರುತ್ತವೆ.. ದೊಡ್ಡ ದೊಡ್ಡ ಬ್ಯಾನರ್ ಅಡಿಯಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಹೀಗೆ ಬಿಗ್ ಬಾಸ್​ನಿಂದ ಸಾಕಷ್ಟು ಫೇಮಸ್ ಆದವರು ಸಂಗೀತ ಶೃಂಗೇರಿ. ಬಿಗ್ ಬಾಸ್ ಕನ್ನಡ ಸೀಸನ್ 10ರ ಚೆಲುವೆ, ನಟಿ ಸಂಗೀತ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದ್ಭುತ ಆಟದ ಮೂಲಕ ಧೂಳೆಬ್ಬಿಸಿದ್ದರು. ಸಿಂಹಿಣಿ ಅಂತಾನೇ ಖ್ಯಾತಿ ಪಡೆದರು.

ಬಿಗ್ ಬಾಸ್​ನಿಂದ ಹೊರ ಬಂದ ಮೇಲೆ ಇವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಹೆಚ್ಚಾಗಿ ತಮ್ಮ ಫೋಟೋ ಶೂಟ್, ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಆದರೆ, ಇವರ ಸಿನಿಮಾ ಬಗ್ಗೆ ಮಾತ್ರ ಒಂದೇ ಒಂದು ಅಪ್ಡೇಟ್ ಇರಲಿಲ್ಲ. ಬಿಗ್‌ ಬಾಸ್ ಮನೆಗೆ ಹೋಗಿದ್ದಾಗ ನಟಿ ಸಂಗೀತಾ ಶೃಂಗೇರಿಗೆ ಭಾರೀ ಕ್ರೇಜ್ ಇತ್ತು. ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ ಸಂಗೀತಾ ಬಳಿಕ ಬಿಗ್‌ ಬಾಸ್ ಸ್ಪರ್ಧಿಯಾಗಿ ಗಮನ ಸೆಳೆದರು. ಬಿಗ್‌ ಬಾಸ್‌ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಡಿ ಟಾಪ್‌ 3 ಸ್ಪರ್ಧಿಯಾಗುವುದರ ಜೊತೆಗೆ ಕರ್ನಾಟಕದ ಕ್ರಷ್‌-ಸಿಂಹಿಣಿ ಎನ್ನುವ ಪಟ್ಟ ಕೂಡ ಪಡೆದುಕೊಂಡರು.

ದೊಡ್ಮನೆಯಿಂದ ಹೊರ ಬಂದಮೇಲೆ ಇವರು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕೊನೆಯದಾಗಿ ಮಾರಿಗೋಲ್ಡ್ ಸಿನಿಮಾ ರಿಲೀಸ್ ಆಗಿತ್ತು, ಈ ಸಿನಿಮಾದಲ್ಲಿ ಸಂಗೀತಾ, ದಿಗಂತ್​ಗೆ ನಾಯಕಿಯಾಗಿ ನಟಿಸಿದ್ದರು. ಅದಾದ ಬಳಿಕ ಇವರು ಯಾವ ಸಿನಿಮಾದಲ್ಲಿ ಸಂಗೀತಾ ನಟಿಸಿರಲಿಲ್ಲ. ಸಿನಿಮಾ ಕ್ಷೇತ್ರದಿಂದ ಕೊಂಚ ದೂರ ಇಳಿದು ತಮ್ಮ ಸ್ಪಿರೀಚುವಲ್ ಜರ್ನಿ ಹಾಗೂ ತಮ್ಮ ಹೊಸ ಕ್ರಿಸ್ಟಲ್ ಬೀಡ್ಸ್ ಗಳ ಬ್ಯುಸಿನೆಸ್ ಮಾಡುತ್ತ ಬ್ಯುಸಿಯಾಗಿದ್ದರು.

ಆದರೀಗ ಸದ್ದಿಲ್ಲದೆ ಸಂಗೀತಾ ದೊಡ್ಡ ಗ್ಯಾಪ್ ಬಳಿಕ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಇವರಿಗೆ ಸಿಕ್ಕಿರುವುದು ಅಂತಿಂಥಾ ಪಾತ್ರವಲ್ಲಂತೆ. ಆಪ್ತಮಿತ್ರ ಚಿತ್ರದಲ್ಲಿದ್ದ ನಟಿ ಸೌಂದರ್ಯ ಪಾತ್ರದಂತೆ ಇವರ ಪಾತ್ರ ಇದರಲ್ಲಿದೆಯಂತೆ. ಹೌದು, ಸಂಗೀತಾ ಶೃಂಗೇರಿ ಒಪ್ಪಿಕೊಂಡಿರುವುದು ಭಯ ಬೀಳಿಸುವ ಮುದ್ದಾದ ಹಾರರ್‌ ಸಿನಿಮಾಕ್ಕೆ. ವಿಶೇಷ ಎಂದರೆ ಈ ಸಿನಿಮಾ ತಮಿಳು ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ಶೂಟಿಂಗ್‌ ಆಗುತ್ತಿದೆ. ಇದರ ಚಿತ್ರೀಕರಣ ಕೂಡ ಸದ್ದಿಲ್ಲದೆ ಶುರುವಾಗಿದ್ದು, ಎರಡೇ ದಿನಗಳಲ್ಲಿ ಸಂಗೀತಾ ಅವರ ಹಾಡೊಂದರ ಶೂಟಿಂಗ್‌ ಕೂಡ ಮಾಡಿ ಮುಗಿಸಿದ್ದಾರಂತೆ.

Kannada Serial TRP: ಮತ್ತೆ ನಂ. 1: ಕರ್ಣನ ಮುಂದೆ ತಲೆಬಾಗಿದ ಎಲ್ಲ ಧಾರಾವಾಹಿಗಳು

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುವಾಗ, ನನಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿವೆ. ಆದರೆ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲದ, ಜನರ ಮನದಲ್ಲಿ ಉಳಿಯದ ಪಾತ್ರಗಳನ್ನು ಒಪ್ಪಲು ಇಷ್ಟವಿಲ್ಲ ಎಂದು ಹೇಳಿದ್ದರು. ಆದರೀಗ ಇವರಿಗೆ ಅಂದುಕೊಂಡ ವಿಶೇಷ ಪಾತ್ರವೇ ಸಿಕ್ಕಿದೆ. ಈ ಕುರಿತು ಖಾಸಗಿ ಪತ್ರಿಕೆಗೆ ಮಾತನಾಡಿದ ಅವರು, ಇದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಇದರ ನಿರ್ಮಾಪಕರು ಪಾತ್ರಕ್ಕೆ ಅಪ್ರೋಚ್‌ ಮಾಡಿದ ವಿಧಾನ ಇಷ್ಟವಾಗಿ ಓಕೆ ಹೇಳಿದೆ. ಬಜೆಟ್‌ ಕೇಳಿದ ತಕ್ಷಣ ಬೇರೆ ಹಿರೋಯಿನ್‌ ಹುಡುಕುವ ಸಿನಿಮಾ ತಂಡಗಳ ನಡುವೆ ನಾನೇ ನಟಿಸಬೇಕೆಂದು ಬಂದ ತಂಡವಿದು. ಕನ್ನಡ ಹಾಗೂ ತಮಿಳಿನಲ್ಲಿ ನಾನೇ ನಾಯಕಿ. ಆದರೆ ಕನ್ನಡದಲ್ಲಿ ಗಂಟುಮೂಟೆ ಖ್ಯಾತಿಯ ನಿಶ್ಚಿತ್‌ ನನಗೆ ಜೋಡಿಯಾಗಿದ್ದರೆ, ತಮಿಳಿನಲ್ಲಿ ಖ್ಯಾತ ಹಾಸ್ಯ ನಟ ನಾಗೇಶ್‌ ಮೊಮ್ಮಗ ಗಜೇಶ್‌ ಹೀರೋ ಆಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಇದರ ಶೂಟಿಂಗ್‌ ನಡೆಯುತ್ತಿದೆ ಎಂದು ಹೇಳಿದ್ದಾರೆ.