ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಪಾರ್ಕಿಂಗ್‌ಗೆ ತಗಾದೆ, ಬಾಲಿವುಡ್‌ ನಟಿ ಹುಮಾ ಖುರೇಷಿ ಸೋದರನ ಹತ್ಯೆ, ಇಬ್ಬರ ಬಂಧನ

Huma Khureshi: ರಾತ್ರಿ 11 ಗಂಟೆ ಸುಮಾರಿಗೆ, ಸ್ಕೂಟಿಯನ್ನು ಗೇಟ್‌ನಿಂದ ತೆಗೆದು ಪಕ್ಕದಲ್ಲಿ ನಿಲ್ಲಿಸುವ ವಿಚಾರದಲ್ಲಿ ನಡೆದ ಜಗಳದಲ್ಲಿ ಆರೋಪಿಗಳು ಆಸಿಫ್ ಖುರೇಷಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಪಾರ್ಕಿಂಗ್‌ಗೆ ತಗಾದೆ, ನಟಿ ಹುಮಾ ಖುರೇಷಿ ಸೋದರನ ಹತ್ಯೆ, ಇಬ್ಬರ ಬಂಧನ

ಹರೀಶ್‌ ಕೇರ ಹರೀಶ್‌ ಕೇರ Aug 8, 2025 8:51 AM

ನವದೆಹಲಿ: ಬಾಲಿವುಡ್ ನಟಿ ಹುಮಾ ಖುರೇಷಿ (Actress Huma Khureshi) ಅವರ ಸೋದರಸಂಬಂಧಿ ಆಸಿಫ್​ನನ್ನು ದೆಹಲಿಯಲ್ಲಿ ಕೊಲೆ (Murder case) ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಿಜಾಮುದ್ದೀನ್ ಭೋಗಲ್ ಜಂಗ್ಪುರದಲ್ಲಿ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆದಿತ್ತು. ಮಾಹಿತಿಯ ಪ್ರಕಾರ, ಸ್ಕೂಟಿ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ವಿಷಯ ವಿಕೋಪಕ್ಕೆ ಹೋಗಿ ಹಲ್ಲೆಗೊಳಗಾದ ಆಸಿಫ್ ಖುರೇಷಿ ಮೃತಪಟ್ಟಿದ್ದಾರೆ.

ಹುಮಾ ಖುರೇಷಿಯ ತಂದೆ ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಮಾಹಿತಿಯ ಪ್ರಕಾರ, ರಾತ್ರಿ 11 ಗಂಟೆ ಸುಮಾರಿಗೆ, ಸ್ಕೂಟಿಯನ್ನು ಗೇಟ್‌ನಿಂದ ತೆಗೆದು ಪಕ್ಕದಲ್ಲಿ ನಿಲ್ಲಿಸುವ ವಿಚಾರದಲ್ಲಿ ನಡೆದ ಜಗಳದಲ್ಲಿ ಆರೋಪಿಗಳು ಆಸಿಫ್ ಖುರೇಷಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಆಸಿಫ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಗೆ ತಲುಪಿದಾಗ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಮೃತ ಆಸಿಫ್ ಖುರೇಷಿ ಅವರ ಪತ್ನಿ ಹೇಳುವಂತೆ, ಈ ಹಿಂದೆಯೂ ಆರೋಪಿಯು ಪಾರ್ಕಿಂಗ್ ವಿವಾದಕ್ಕಾಗಿ ನನ್ನ ಪತಿಯೊಂದಿಗೆ ಜಗಳವಾಡಿದ್ದ. ಗುರುವಾರ ರಾತ್ರಿ ನನ್ನ ಪತಿ ಕೆಲಸದಿಂದ ಮನೆಗೆ ಹಿಂದಿರುಗಿದಾಗ, ಪಕ್ಕದ ಮನೆಯವರ ಸ್ಕೂಟಿ ಮನೆಯ ಮುಂದೆ ನಿಂತಿತ್ತು. ಅದನ್ನು ತೆಗೆಯಲು ಅವರು ಕೇಳಿದ್ದಾರೆ. ಆದರೆ ಸ್ಕೂಟಿ ತೆಗೆಯುವ ಜಗಳ ಶುರು ಮಾಡಿದ್ದರು. ಬಳಿಕ ಆರೋಪಿ ಚೂಪಾದ ಚಾಕುವಿನಿಂದ ಅವರಿಗೆ ಇರಿದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಆಸಿಫ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಯಲ್ಲಿ ಭಾಗಿಯಾಗಿರುವ ಇಬ್ಬರನ್ನು ಬಂಧಿಸಿದ್ದಾರೆ. ಜಗಳ ಕೇವಲ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದ್ದೇ ಅಥವಾ ಅವರ ನಡುವೆ ಹಳೆಯ ದ್ವೇಷವೇ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅಪರಾಧಕ್ಕೆ ಬಳಸಲಾದ ಆಯುಧವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Body Found: ರಸ್ತೆಯುದ್ದಕ್ಕೂ ಕಂಡುಬಂದ ಮಹಿಳೆಯ ದೇಹದ ಚೂರುಗಳು; ಬರ್ಬರವಾಗಿ ಕೊಲೆಯಾದಾಕೆ ಯಾರು?