Kempamma: ಕ್ವಾಟ್ಲೆ ಕಿಚನ್ ಶೋನಿಂದ ಕೆಂಪಮ್ಮ ದಿಢೀರ್ ಹೊರನಡೆದಿದ್ದೇಕೆ?: ಇಲ್ಲಿದೆ ಕಾರಣ
ವಿಧಾನ ಸೌಧ ಸಮೀಪ ಕೆ.ಆರ್ ಸರ್ಕಲ್ ವೃತ್ತದ ಬಳಿ ಪಿಡಬ್ಲ್ಯೂಡಿ ಕಚೇರಿ ಹತ್ತಿರ ಕೆಂಪಮ್ಮ ಮೆಸ್ ಫುಲ್ ಫೇಮಸ್. ಅನ್ನಪೂರ್ಣೇಶ್ವರಿ ಹೋಟೆಲ್ ಎಂಬ ಬೋರ್ಡ್ನಲ್ಲಿ ಇವರು ಸರ್ಕಾರಿ ನೌಕರರಿಗೆ, ಆಟೋ ಡ್ರೈವರ್‌ಗಳಿಗೆ, ಕಚೇರಿ ಕೆಲಸಕ್ಕೆಂದು ವಿಧಾನ ಸೌಧ, ಎಂಎಸ್ ಬಿಲ್ಡಿಂಗ್‌ಗೆ ಬರುವವರಿಗೆ ಕಡಿಮೆ ಬೆಲೆಗೆ ಸುಮಾರು ಇಪ್ಪತ್ತೈದು ವರ್ಷಗಳಿಂದ ಶುಚಿ-ರುಚಿಯ ಊಟವನ್ನ ಉಣಬಡಿಸುತ್ತಿದ್ದಾರೆ.

Kempamma

ಪ್ರಸಿದ್ಧ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ವೀಕೆಂಡ್ ಪ್ರಸಾರ ಕಾಣುವ ಜನಪ್ರಿಯ ಶೋಗಳಲ್ಲಿ ಕ್ವಾಟ್ಲೆ ಕಿಚನ್ ಕೂಡ ಒಂದು. ಅನುಪಮಾ ಗೌಡ ಹಾಗೂ ಕುರಿ ಪ್ರತಾಪ್ ಈ ಶೋ ಅನ್ನು ನಿರೂಪಕರಾಗಿ ನಡೆಸಿಕೊಡುತ್ತಾರೆ ಈ ಶೋನಲ್ಲಿ ಬಗೆಬಗೆಯ ಅಡುಗೆಯ ಜೊತೆಗೆ ನಗುವನ್ನೂ ಬಡಿಸುವ ಕೆಲಸ ಆಗುತ್ತಿದೆ. ಈ ಕಾರ್ಯಕ್ರಮದಲ್ಲಿ ತಮ್ಮದೇ ವಿಭಿನ್ನ ರೀತಿಯಲ್ಲಿ ಜನಮನ ಗೆದ್ದಿರುವ ಕೆಂಪಮ್ಮ ಕ್ವಾಟ್ಲೆ ಕಿಚನ್ನಿಂದ ದಿಢೀರ್ ಹೊರನಡೆದಿದ್ದಾರೆ.
ವಿಧಾನ ಸೌಧ ಸಮೀಪ ಕೆ.ಆರ್ ಸರ್ಕಲ್ ವೃತ್ತದ ಬಳಿ ಪಿಡಬ್ಲ್ಯೂಡಿ ಕಚೇರಿ ಹತ್ತಿರ ಕೆಂಪಮ್ಮ ಮೆಸ್ ಫುಲ್ ಫೇಮಸ್. ಅನ್ನಪೂರ್ಣೇಶ್ವರಿ ಹೋಟೆಲ್ ಎಂಬ ಬೋರ್ಡ್ನಲ್ಲಿ ಇವರು ಸರ್ಕಾರಿ ನೌಕರರಿಗೆ, ಆಟೋ ಡ್ರೈವರ್‌ಗಳಿಗೆ, ಕಚೇರಿ ಕೆಲಸಕ್ಕೆಂದು ವಿಧಾನ ಸೌಧ, ಎಂಎಸ್ ಬಿಲ್ಡಿಂಗ್‌ಗೆ ಬರುವವರಿಗೆ ಕಡಿಮೆ ಬೆಲೆಗೆ ಸುಮಾರು ಇಪ್ಪತ್ತೈದು ವರ್ಷಗಳಿಂದ ಶುಚಿ-ರುಚಿಯ ಊಟವನ್ನ ಉಣಬಡಿಸುತ್ತಿದ್ದಾರೆ. ಕೆಂಪಮ್ಮ ಎಂದೇ ಖ್ಯಾತಿ ಪಡೆದಿರುವ ಇವರು ಕ್ವಾಟ್ಲೆ ಕಿಚನ್ಗೆ ಎಂಟ್ರಿ ಕೊಟ್ಟಿದ್ದರು.
ಕ್ವಾಟ್ಲೆ ಕಿಚನ್‌ನಲ್ಲಿ ಅವರು ತಮ್ಮ ಭಿನ್ನ ಮ್ಯಾನರಿಸಂನಿಂದ ಕರ್ನಾಟಕದಾದ್ಯಂತ ಮನೆಮಾತಾಗಿದ್ದರು. ಆದರೀಗ ದಿಢೀರ್ ಶೋನಿಂದ ಹೊರ ನಡೆದಿದ್ದಾರೆ. ಬಂದ ಮೊದಲ ದಿನದಿಂದಲೇ ಕೆಂಪಮ್ಮ ಕುಕ್ ಆಗಿ ತಮ್ಮ ಕೈಚಳಕ ತೋರಿಸಿ ಎಲ್ಲರ ಮನ ಸೆಳೆದರು. ಶೆಫ್ ಕೌಷಿಕ್, ಜಡ್ಜ್ ಶೃತಿ ಸೇರಿದಂತೆ ಕಿಚನ್‌ನಲ್ಲಿ ಎಲ್ಲರಿಗೂ ಇವರೆಂದರೆ ಅಚ್ಚುಮೆಚ್ಚಾಗಿತ್ತು. ಅವರು ಕುಕ್ ಆಫ್ ದ ವೀಕ್ ಬಿರುದು ಕೂಡ ಪಡೆದಿದ್ದರು.
Zee Power: ಝೀ ಕನ್ನಡದ ಹೊಸ ಚಾನೆಲ್ ಝೀ ಪವರ್ಗು ಪುನೀತ್ ರಾಜ್ಕುಮಾರ್ಗು ಏನು ಲಿಂಕ್?: ಇಲ್ಲಿದೆ ಮಾಹಿತಿ
ಕ್ವಾಟ್ಲೆ ಕಿಚನ್‌ನಲ್ಲಿ ನೂಡಲ್ಸ್, ಬರ್ಗರ್ ಸೇರಿದಂತೆ ಹಲವು ರೀತಿಯ ಕಾಂಟಿನೆಂಟಲ್ ಅಡುಗೆಯನ್ನೂ ಮಾಡಿ ಕೆಂಪಮ್ಮ ಭೇಷ್ ಎನಿಸಿಕೊಂಡವರು. ಆದರೆ, ಕಳೆದ ಭಾನುವಾರ ನಡೆಯುತ್ತಿದ್ದ ಎಲಿಮಿನೇಷನ್ ರೌಂಡಲ್ಲಿ ಕೆಂಪಮ್ಮ ಡೇಂಜರ್ ಜೋನ್‌ಗೆ ಬಂದಿದ್ದರು. ಅದರಿಂದ ಹತಾಶರಾದ ಕೆಂಪಮ್ಮ ಅಚಾನಕ್ಕಾಗಿ ಸ್ಪರ್ಧೆಯಿಂದ ಹೊರನಡೆದಿದ್ದಾರೆ. ಈಗಾಗಲೇ ಸೋನಿಯಾ ಪೊನ್ನಮ್ಮ ಮತ್ತು ಪ್ರೇರಣಾ ಕಂಬಂ ಎಲಿಮಿನೇಟ್ ಆಗಿದ್ದು, ಇದೀಗ ಕೆಂಪಮ್ಮ ಸ್ಪರ್ಧೆಯಿಂದ ಆಚೆ ಬಂದಿದ್ದಾರೆ.
ಸದ್ಯ ಕೊನೆಯ ಹಂತದಲ್ಲಿ ಸ್ಪರ್ಧೆಯ ಕಾವೇರುತ್ತಿದೆ, ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಏಳು ಜನ ಕುಕ್‌ಗಳು ಇದ್ದು, ಸ್ಪರ್ಧೆ ಇನ್ನಷ್ಟು ಪ್ರಬಲತೆ ಪಡೆದುಕೊಂಡಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೋ ಪ್ರಸಾರ ಆಗುತ್ತದೆ.