Shilpa Shetty: 60 ಕೋಟಿ ವಂಚನೆ ಪ್ರಕರಣ: ಸತತ 4 ಗಂಟೆ ವಿಚಾರಣೆ ಎದುರಿಸಿದ ಕುಂದ್ರಾ ದಂಪತಿ
Shilpa Shetty: ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಬಾಲಿವುಡ್ ಖ್ಯಾತ ಜನಪ್ರಿಯ ದಂಪತಿ. ಆದರೆ ಈ ಜೋಡಿ ದಿನದಿಂದ ದಿನಕ್ಕೆ ಭಾರೀ ಸಂಕಷ್ಟಗಳನ್ನು ಎದುರಿಸುತ್ತಿದೆ. ಇದೀಗ 60 ಕೋಟಿ ವಂಚನೆ ಪ್ರಕರಣವಾಗಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಅವರನ್ನು ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ವಿಚಾರಣೆ ಗೊಳಪಡಿಸಿದೆ.

Shilpa Shetty -

ಮುಂಬೈ: ಶಿಲ್ಪಾ ಶೆಟ್ಟಿ (Shilpa Shetty) ಮತ್ತು ರಾಜ್ ಕುಂದ್ರಾ (Raj Kundra) ಬಾಲಿವುಡ್ನ ಖ್ಯಾತ ಜನಪ್ರಿಯ ದಂಪತಿ. ಆದರೆ ಈ ಜೋಡಿ ದಿನದಿಂದ ದಿನಕ್ಕೆ ಭಾರೀ ಸಂಕಷ್ಟಗಳನ್ನು ಎದುರಿಸುತ್ತಿದೆ. ಇದೀಗ 60 ಕೋಟಿ ವಂಚನೆ ಪ್ರಕರಣವಾಗಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಅವರನ್ನು ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (Economic Offences Wing - EoW) ಸುಮಾರು ನಾಲ್ಕೂವರೆ ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದೆ. ಪತಿ ರಾಜ್ ಕುಂದ್ರಾ ಅವರ 'ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್' ಕಂಪನಿಗೆ ಸಂಬಂಧಿಸಿದಂತೆ ದಾಖಲಾಗಿರುವ 60 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಿಚಾರಣೆ ನಡೆದಿದೆ ಎನ್ನಲಾಗಿದೆ.
ಇದೇ ಪ್ರಕರಣ ಸಂಬಂಧ ಸೆಪ್ಟೆಂಬರ್ 5ರಂದು ಮುಂಬೈ ಪೊಲೀಸರು ಶಿಲ್ಪಾ ಶೆಟ್ಟಿ–ರಾಜ್ ಕುಂದ್ರಾ ಅವರಿಗೆ ಲುಕ್ಔಟ್ ನೋಟಿಸ್ ನೀಡಿದ್ದರು. ಇದೀಗ ಪ್ರಕರಣ ಸಂಬಂಧ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಸೇರಿದಂತೆ ಐವರನ್ನು ಸುಮಾರು ನಾಲ್ಕುವರೆ ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಒಡಬ್ಲ್ಯೂ ಅಧಿಕಾರಿಗಳ ಪ್ರಕಾರ, ಇಲ್ಲಿಯವರೆಗೆ ಒಟ್ಟು ಐದು ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ ಮತ್ತು ಕಂಪನಿಯ ರೆಸಲ್ಯೂಷನ್ ಪ್ರೊಫೆಷನಲ್ ಸೇರಿದಂತೆ ಐದು ಜನರ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಇದನ್ನು ಓದಿ:Actress Shilpa Shetty: 60 ಕೋಟಿ ವಂಚನೆ-ರೆಸ್ಟೋರೆಂಟ್ ಮುಚ್ಚಿದ ಶಿಲ್ಪಾ ಶೆಟ್ಟಿ
ದೀಪಕ್ ಕೊಠಾರಿ ಎಂಬ ಉದ್ಯಮಿಯೊಬ್ಬರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದಂಪತಿ 2015 ಮತ್ತು 2023ರ ನಡುವೆ 60 ಕೋಟಿ ರೂಪಾಯಿ ಹಣವನ್ನು 'ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್' ಕಂಪನಿಗೆ ಹೂಡಿಕೆ ಮಾಡಲು ಸಾಲವಾಗಿ ಪಡೆದಿದ್ದಾರೆ. ಆದರೆ ಆ ಹಣವನ್ನು ಸಾಲ ಪಡೆದ ಉದ್ದೇಶಕ್ಕೆ ಬಳಸಿಕೊಳ್ಳದೆ ತಮ್ಮ ವೈಯಕ್ತಿಕ ಕಾರಣಗಳಿಗೆ ಬಳಸಿಕೊಂಡಿದ್ದಾರೆ ಎಂದು ದೀಪಕ್ ಆರೋಪ ಮಾಡಿದ್ದಾರೆ.
ಸದ್ಯ ಇಒಡಬ್ಲ್ಯೂ ಅಧಿಕಾರಿಗಳು ಈ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಕಂಪನಿಯ ಹಣಕಾಸು ದಾಖಲೆಗಳು ಹಾಗೂ ಹಣದ ದುರ್ಬಳಕೆಯ ಬಗ್ಗೆ ತನಿಖೆಯನ್ನು ಕೂಡ ಮುಂದುವರಿಸಿದ್ದಾರೆ. ಅಧಿಕಾರಿಗಳು ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಮತ್ತು 'ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್' ಜೊತೆ ಸಂಬಂಧ ಹೊಂದಿರುವ ಇತರ ವ್ಯಕ್ತಿಗಳ ವಿಚಾರಣೆಯನ್ನು ಸಕ್ರಿಯವಾಗಿ ತನಿಖೆ ಮುಂದುವರೆಸಿದ್ದಾರೆ.