ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vivek Agnihotri: ರೈತರು ತಿನ್ನೋದು ಬಡವರ ಆಹಾರ ಎಂದ್ರಾ ವಿವೇಕ್‌ ಅಗ್ನಿಹೋತ್ರಿ? ವಿವಾದಕ್ಕೆ ಭಾರೀ ಟೀಕೆ

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಎಲ್ಲ ಸಿನಿಮಾಗಳು ಬಿಡುಗಡೆಗೂ ಮುನ್ನ ಭಾರೀ ಸದ್ದು ಮಾಡುತ್ತವೆ. ಜೊತೆಗೆ ಒಂದಲ್ಲಾ ಒಂದು ವಿವಾದ ಹುಟ್ಟುಹಾಕುತ್ತವೆ. ಈಗ ಅವರು ನಿರ್ದೇಶಿಸಿರುವ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈಗಾಗಲೇ ಈ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಬೆನ್ನಲ್ಲೇ ವಿವೇಕ್ ಅಗ್ನಿಹೋತ್ರಿ ಮತ್ತೊಂದು ವಿವಾದತ್ಮಾಕ ಹೇಳಿಕೆ ನೀಡಿದ್ದು, ರೈತರನ್ನು ತುಚ್ಛವಾಗಿ ಬಿಂಬಿಸಿ ಮಾತಾನಾಡಿದ್ದಾರೆ ಎನ್ನಲಾಗಿದೆ.

ವಿವೇಕ್ ಅಗ್ನಿಹೋತ್ರಿ ವಿರುದ್ಧ ನೆಟ್ಟಿಗರು ಸಿಡಿಮಿಡಿ

ವಿವೇಕ್ ಅಗ್ನಿಹೋತ್ರಿ

Profile Sushmitha Jain Aug 22, 2025 9:04 PM

ನವದೆಹಲಿ: ಚಿತ್ರ ನಿರ್ದೇಶ (Filmmaker) ವಿವೇಕ್ ಅಗ್ನಿಹೋತ್ರಿ (Vivek Agnihotri) ತಮ್ಮ ಹೊಸ ಸಿನಿಮಾ ‘ದಿ ಬೆಂಗಾಲ್ ಫೈಲ್ಸ್’ (The Bengal Files) ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಮಹಾರಾಷ್ಟ್ರದ ಆಹಾರವನ್ನು (Maharashtrian food) “ಕಿಸಾನೋ ಕಾ ಗರೀಬ್ ಖಾನಾ” (ರೈತರ ಬಡ ಆಹಾರ) ಎಂದು ಕರೆದಿದ್ದಕ್ಕೆ ಇತ್ತೀಚೆಗೆ ತೀವ್ರ ಟೀಕೆಗೆ ಒಳಗಾಗಿದ್ದಾರೆ.

ವಿವಾದದ ಹಿನ್ನೆಲೆ

ಕರ್ಲಿ ಟೇಲ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂದರ್ಶನದಲ್ಲಿ, ವಿವೇಕ್ ಮತ್ತು ಅವರ ಪತ್ನಿ, ನಟಿ ಪಲ್ಲವಿ ಜೋಶಿ, ಮಹಾರಾಷ್ಟ್ರದ ಆಹಾರದ ಬಗ್ಗೆ ಮಾತನಾಡಿದರು. ಮಹಾರಾಷ್ಟ್ರದ ಆಹಾರ ತಿಂದು ಬೆಳೆದ ಪಲ್ಲವಿ, ವಿವೇಕ್ ತಮ್ಮ ಮದುವೆಯ ಆರಂಭದಲ್ಲಿ ಈ ಆಹಾರವನ್ನು “ಬಡವರ ಆಹಾರ” ಎಂದು ಕರೆಯುತ್ತಿದ್ದರು ಎಂದು ನೆನಪಿಸಿಕೊಂಡರು. “ನಾನು ತಯಾರಿಸಿದ ಯಾವುದೇ ಆಹಾರವನ್ನು ಅವರು ಇಷ್ಟಪಡುತ್ತಿರಲಿಲ್ಲ. ಮಹಾರಾಷ್ಟ್ರದ ಆಹಾರ ಸರಳವಾಗಿದೆ, ತರಕಾರಿಗಳನ್ನು ಸ್ವಲ್ಪ ಎಣ್ಣೆಯಲ್ಲಿ ತಿರುಗಿಸಿ ತಿನ್ನುತ್ತೇವೆ. ಅವರು ‘ಇದು ಬಡವರ ಆಹಾರ’ ಎಂದು ಹೇಳುತ್ತಿದ್ದರು. ಈಗ ಅವರೇ ಆ ಆಹಾರದ ಪ್ರಯೋಜನಗಳನ್ನು ಅರಿತು ತಿನ್ನುತ್ತಾರೆ” ಎಂದು ಪಲ್ಲವಿ ಹೇಳಿದರು.

ಈ ಸುದ್ದಿಯನ್ನು ಓದಿ: Viral Video: ದೆಹಲಿ ರಸ್ತೆಯಲ್ಲಿ ಹೃದಯ ಬಿದ್ದಿದೆ, ವೈರಲ್‌ ಆಯ್ತು ಪೋಸ್ಟ್‌; ಏನಿದರ ಅಸಲಿಯತ್ತು?

ವಿವೇಕ್‌ ಅಗ್ನಿಹೋತ್ರಿ ಆಹಾರದ ಅಭಿರುಚಿ

ವಿವೇಕ್, ದೆಹಲಿಯ ಆಹಾರಕ್ಕೆ ಒಗ್ಗಿರುವುದರಿಂದ ಆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದೆ ಎಂದರು. “ಮಹಾರಾಷ್ಟ್ರದ ಆಹಾರದಲ್ಲಿ ಉಪ್ಪಿಲ್ಲ, ಪ್ರತ್ಯೇಕವಾಗಿ ಹಾಕಬೇಕು. ಖಡಿಯಲ್ಲಿ ಮಸಾಲೆಯಿಲ್ಲ, ಆರೋಗ್ಯಕರವಾಗಿರುತ್ತದೆ. ಸಣ್ಣ ಪ್ರಮಾಣದಲ್ಲಿ ತಿನ್ನುವುದು ಅವರ ರೀತಿ. ದೆಹಲಿಯಲ್ಲಿ ಆಹಾರವನ್ನು ವ್ಯರ್ಥ ಮಾಡದಿದ್ದರೆ ಶ್ರೀಮಂತ ಎನಿಸಿಕೊಳ್ಳುವುದಿಲ್ಲ ಎಂಬ ಭಾವನೆಯಿದೆ” ಎಂದು ಅವರು ಹೇಳಿದರು. ಮಹಾರಾಷ್ಟ್ರದ ಆಹಾರ “ರೈತರ ಬಡ ಆಹಾರ” ಎಂದು ಕರೆದದ್ದು ನನಗೆ ಸಂಸ್ಕೃತಿಯ ಆಘಾತವಾಗಿತ್ತು ಎಂದರು. ಈಗ ತಾನು ಸರಳ ಆಹಾರವನ್ನೇ ತಿನ್ನುವುದಾಗಿ, ಮಹಾರಾಷ್ಟ್ರದ ತಟ್ಟೆ ಆರ್ಥಿಕ ಮತ್ತು ಆರೋಗ್ಯಕರ ಎಂದು ಶ್ಲಾಘಿಸಿದರು. ಜೊತೆಗೆ, ತಾವು ಸಸ್ಯಾಹಾರಿಯಾಗಿ ಬದಲಾಗಿ, ಮಾಂಸಾಹಾರ ಮತ್ತು ಮದ್ಯವನ್ನು ತ್ಯಜಿಸಿದ್ದಾಗಿ ತಿಳಿಸಿದರು.

ಟೀಕೆಗೆ ಪ್ರತಿಕ್ರಿಯೆ

ತಮ್ಮ ಹೇಳಿಕೆಗೆ ಎದುರಾದ ಟೀಕೆಗೆ ರೌನಕ್ ಪಾಡ್‌ಕಾಸ್ಟ್‌ನಲ್ಲಿ ಪ್ರತಿಕ್ರಿಯಿಸಿದ ವಿವೇಕ್, “ನಾನು ಹಾಸ್ಯದಿಂದ ಹೇಳಿದ್ದೆ, ಆದರೆ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು. ನನ್ನ ಮಾತಿನ ಮೊದಲ ಭಾಗವನ್ನು ಮಾತ್ರ ತೆಗೆದುಕೊಂಡು ವಿವಾದ ಸೃಷ್ಟಿಸಲಾಗಿದೆ. ಜನರು ಇಂದು ಎಡಿಟಿಂಗ್ ಮೂಲಕ ವಿಷಯವನ್ನು ತಿರುಚುತ್ತಾರೆ ಎಂದು ಆರೋಪಿಸಿದರು.