ಎಂಥ ಕಾಲ ಬಂತು ನೋಡಿ: ಗದರಿಸಿದ್ದಕ್ಕೆ ಸಿಟ್ಟಿಗೆದ್ದ ಪ್ರೌಢಶಾಲಾ ವಿದ್ಯಾರ್ಥಿ; ರಿವಾಲ್ವರ್ ತಂದು ಮುಖ್ಯೋಪಾಧ್ಯಾಯರಿಗೆ ಬೆದರಿಕೆ
Student threatened the headmaster: ಗದರಿಸಿದ್ದಕ್ಕೆ ಸಿಟ್ಟಿಗೆದ್ದ 14 ವರ್ಷದ ಪ್ರೌಢಶಾಲಾ ವಿದ್ಯಾರ್ಥಿಯೊಬ್ಬ ತರಗತಿಗೆ ರಿವಾಲ್ವರ್ ತಂದು ಮುಖ್ಯೋಪಧ್ಯಾಯರನ್ನು ಬೆದರಿಸಿದ ಆಘಾತಕಾರಿ ಘಟನೆ ಒಡಿಶಾದಲ್ಲಿ ನಡೆದಿದೆ. ಈ ಘಟನೆ ಶಾಲಾ ಪರಿಸರದ ಭದ್ರತೆ ಮತ್ತು ವಿದ್ಯಾರ್ಥಿಗಳ ಮನಸ್ಥಿತಿಯ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಸಾಂದರ್ಭಿಕ ಚಿತ್ರ -
ಭುವನೇಶ್ವರ, ಡಿ. 14: 14 ವರ್ಷದ ವಿದ್ಯಾರ್ಥಿಯೊಬ್ಬ ಶಾಲೆಗೆ ದೇಸಿ ರಿವಾಲ್ವರ್ ತಂದು, ಮುಖ್ಯೋಪಾಧ್ಯಾಯರಿಗೆ ಬೆದರಿಕೆ ಹಾಕಿರುವ ಘಟನೆ ಒಡಿಶಾದ (Odisha) ಕೇಂದ್ರಪಾರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಯು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬಾಲಕನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಯಿತು. ನಂತರ ಆತನನ್ನು ಅಂಗುಲ್‌ನಲ್ಲಿರುವ ಪ್ರೊಬೇಷನ್ ಹಾಸ್ಟೆಲ್-ಕಮ್-ಅಬ್ಸರ್ವೇಷನ್ ಹೋಮ್ ಮತ್ತು ಸ್ಪೆಷಲ್ ಹೋಮ್‌ಗೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರಿ ಕೊರುವಾ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಬಾಲಕನಿಗೆ ಗದರಿಸಿದ್ದರು ಎನ್ನಲಾಗಿದೆ. ಅಧ್ಯಯನದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಮತ್ತು ತರಗತಿಯಲ್ಲಿ ಕಿರಿಕಿರಿ ಉಂಟು ಮಾಡಿದ್ದಕ್ಕಾಗಿ ಗದರಿಸಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಕೋಪಗೊಂಡ ಬಾಲಕ ಶಾಲೆಗೆ ರಿವಾಲ್ವರ್ ತಂದು ಮುಖ್ಯೋಪಾಧ್ಯಾಯರಿಗೆ ಬೆದರಿಸಿದ್ದಾನೆ.
ಬಾಲಕನಿಗೆ ಬಂದೂಕು ಹೇಗೆ ಸಿಕ್ಕಿತು ಎಂಬುದರ ಕುರಿತು ನಾವು ಅವನ ಪೋಷಕರು ಮತ್ತು ಸಂಬಂಧಿಕರನ್ನು ಪ್ರಶ್ನಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕನ ಬಳಿಯಿದ್ದ ದೇಸಿ ನಿರ್ಮಿತ ರಿವಾಲ್ವರ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಮಹಿಳೆಯ ಕತ್ತು ಹಿಸುಕಿ ಕೊಂದ ಪ್ರಿಯಕರ
ಪಂಜಾಬ್‌ನ ಲುಧಿಯಾನದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಂಡೋ-ಅಮೇರಿಕನ್ ಹೋಟೆಲ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿರುವುದು ಸಂಚಲನ ಮೂಡಿಸಿದೆ. ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಕೊಲೆಯ ನಂತರ ಆರೋಪಿ ಪರಾರಿಯಾಗಿದ್ದು, ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಸ್ತುತ, ಪೊಲೀಸ್ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.
ಸಾಧುವಿನ ವೇಷದಲ್ಲಿ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯ ಬಂಧನ
ಮಾಹಿತಿಯ ಪ್ರಕಾರ, ಮಹಿಳೆ ವಿವಾಹಿತಳಾಗಿದ್ದು, ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಇಬ್ಬರು ಮಕ್ಕಳ ತಾಯಿಯೂ ಆಗಿದ್ದಳು. ಪೊಲೀಸರ ಪ್ರಕಾರ, ಆ ಮಹಿಳೆಯನ್ನು ಆಕೆಯ ಗೆಳೆಯ ಅಮಿತ್ ನಿಶಾದ್ ಕೊಲೆ ಮಾಡಿದ್ದಾನೆ. ಇಬ್ಬರೂ ಬಹಳ ದಿನಗಳಿಂದ ಸಂಬಂಧದಲ್ಲಿದ್ದರು. ಶುಕ್ರವಾರ ಹೋಟೆಲ್ ಇಂಡೋ-ಅಮೆರಿಕನ್ ಹೋಟೆಲ್‍ನ ಕೊಠಡಿಯಲ್ಲಿ ಸಮಯ ಕಳೆಯುತ್ತಿದ್ದರು. ದೈಹಿಕ ಸಂಬಂಧದ ನಂತರ ರೇಖಾ, ಅಮಿತ್‍ನನ್ನು ಮದುವೆಯಾಗುವಂತೆ ಒತ್ತಾಯಿಸಿದಳು. ಆದರೆ, ಅಮಿತ್ ಶೀಘ್ರದಲ್ಲೇ ಮದುವೆಯಾಗಲಿದ್ದನು. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಯಿತು. ಕೋಪದಲ್ಲಿ ರೇಖಾ, ಅಮಿತ್‍ನ ಖಾಸಗಿ ಅಂಗವನ್ನು ಕತ್ತರಿಯಿಂದ ಕತ್ತರಿಸಿದಳು. ಇದರಿಂದ ಕೋಪಗೊಂಡ ಅಮಿತ್, ರೇಖಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ.
ಬಳಿಕ ಆರೋಪಿ ಅಮಿತ್ ಹೊರಗಿನಿಂದ ಆಹಾರ ತರುವ ನೆಪದಲ್ಲಿ ಹೋಟೆಲ್‌ನಿಂದ ಪರಾರಿಯಾಗಿದ್ದಾನೆ. ಹೋಟೆಲ್ ಮ್ಯಾನೇಜರ್, ಮಹಿಳೆಯ ರಕ್ತದಿಂದ ಕೂಡಿದ್ದ ಅರೆಬೆತ್ತಲೆ ಶವವನ್ನು, ಆಕೆಯ ಮುಖದ ಮೇಲಿನ ಗಾಯಗಳನ್ನು ನೋಡಿ ಶಾಕ್ ಆಗಿದ್ದಾರೆ. ಕೂಡಲೇ ಹೋಟೆಲ್ ಮ್ಯಾನೇಜರ್, ಪೊಲೀಸರಿಗೆ ಈ ವಿಷಯವನ್ನು ತಿಳಿಸಿದರು. ನಂತರ, ಸಿಸಿಟಿವಿ ಕ್ಯಾಮರಾಗಳ ಸಹಾಯದಿಂದ ಪೊಲೀಸರು ತಡರಾತ್ರಿ ದಾಳಿ ನಡೆಸಿ ಆರೋಪಿ ಅಮಿತ್‌ನನ್ನು ಬಂಧಿಸಿದರು. ಅಮಿತ್‌ನ ಖಾಸಗಿ ಭಾಗಗಳಿಗೆ ತೀವ್ರವಾದ ಗಾಯಗಳಾಗಿರುವುದರಿಂದ ಆತನ ಆರೋಗ್ಯ ಪರಿಸ್ಥಿತಿ ಕೂಡ ಹದಗೆಟ್ಟಿತ್ತು. ಇದರಿಂದಾಗಿ ಅವನನ್ನು ಚಂಡೀಗಢದ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಯಿತು. ಅಮಿತ್ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ.