ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Apache Choppers: ಭಾರತೀಯ ಸೇನೆ ಸೇರಿದ ವಿಶ್ವದ ಅತ್ಯುತ್ತಮ ಹೆಲಿಕಾಪ್ಟರ್; ನಡುಗಿದ ಪಾಕಿಸ್ತಾನ

ಅಮೆರಿಕದ ಬೋಯಿಂಗ್ ಕಂಪನಿ ತಯಾರಿಸಿರುವ ವಿಶ್ವದ ಅತ್ಯುತ್ತಮ ಅಪಾಚೆ ಕಾಂಬಾಟ್ ಚಾಪರ್‌ಗಳು ಇದೀಗ ಭಾರತೀಯ ಸೇನೆಗೆ ಸೇರ್ಪಡೆಯಾಗಿವೆ. ಇದೇ ಮೊದಲ ಬಾರಿಗೆ ಭಾರತೀಯ ಸೇನೆ ಸೇರಿರುವ ಮೂರು ಅಪಾಚೆ ಚಾಪರ್‌ಗಳು ಅಮೆರಿಕದಿಂದ ಭಾರತಕ್ಕೆ ಆಗಮಿಸಿದೆ.

ಅಪಾಚೆ ಕಾಂಬಾಟ್ ಚಾಪರ್ ಭಾರತೀಯ ಸೈನ್ಯಕ್ಕೆ ಸೇರ್ಪಡೆ

ನವದೆಹಲಿ: ಅಮೆರಿಕದ ಬೋಯಿಂಗ್ ಕಂಪನಿ (American Boeing Company) ತಯಾರಿಸಿರುವ ವಿಶ್ವದ ಅತ್ಯುತ್ತಮ ಅಪಾಚೆ ಕಾಂಬಾಟ್ ಚಾಪರ್ (Apache Combat Chopper)ಗಳು ಇದೀಗ ಭಾರತೀಯ ಸೇನೆಗೆ (Indian Army) ಸೇರ್ಪಡೆಯಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ಸೇನೆ ಸೇರಿರುವ ಮೂರು ಅಪಾಚೆ ಚಾಪರ್‌ಗಳು ಅಮೆರಿಕದಿಂದ ಭಾರತಕ್ಕೆ ಆಗಮಿಸಿವೆ. ಭಾರತೀಯ ಸೇನೆಗೆ ಆರು ಅಪಾಚೆ ಕಾಂಬಾಟ್ ಚಾಪರ್​​ಗಳನ್ನು ನೀಡಬೇಕು ಎನ್ನುವ ಒಪ್ಪಂದವನ್ನು ಅಮೆರಿಕದ ಬೋಯಿಂಗ್ ಕಂಪನಿಯೊಂದಿಗೆ ಮಾಡಿಕೊಳ್ಳಲಾಗಿದೆ. ಇದರ ಪ್ರಯುಕ್ತ ಇದೀಗ ಮೊದಲ ಹಂತದಲ್ಲಿ ಮೂರು ಬೋಯಿಂಗ್​ ಎಎಚ್​-64ಇ ಅಪಾಚೆ ​ಚಾಪರ್ ಭಾರತಕ್ಕೆ ಬಂದಿಳಿದಿದೆ.

ಅಪಾಚೆ ಕಾಂಬಾಟ್ ಚಾಪರ್ ಜಗತ್ತಿನ ಸುಧಾರಿತ ಬಹು ಹಂತದ ಕಾಂಬಾಟ್​ ಹೆಲಿಕಾಪ್ಟರ್​ ಆಗಿದೆ. ಇದನ್ನು ಈಗಾಗಲೇ ಅಮೆರಿಕ ಸೇನಾಪಡೆಗಳು ಬಳಸುತ್ತಿವೆ. ಈ ಹೆಲಿಕಾಪ್ಟರ್‌ಗಳು ಭಾರತೀಯ ಸೇನಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎನ್ನಲಾಗುತ್ತಿದೆ.

ಭಾರತೀಯ ಸೇನೆ ಸೇರಲು ಮಂಗಳವಾರ ಮಧ್ಯಾಹ್ನ ಅಮೆರಿಕದಿಂದ ಆಂಟೊನೊವ್ ಸಾರಿಗೆ ವಿಮಾನದಲ್ಲಿ ಹಿಂಡನ್ ವಾಯುನೆಲೆಗೆ ಅಪಾಚೆ ಕಾಂಬಾಟ್ ಚಾಪರ್‌ಗಳು ಬಂದಿಳಿದವು. ಈ ಮೂಲಕ ವಿಶ್ವದ ಅತ್ಯುತ್ತಮ ಫೈಟರ್ ಚಾಪರ್‌ಗಳಲ್ಲಿ ಭಾರತೀಯ ಸೇನೆ ಸೇರಿದಂತಾಗಿದೆ. ಈಗಾಗಲೇ ಭಾರತೀಯ ವಾಯುಪಡೆಯು 22 ಭಾರೀ ದಾಳಿ ಹೆಲಿಕಾಪ್ಟರ್‌ಗಳನ್ನು ಹೊಂದಿದೆ.

ʼಟ್ಯಾಂಕ್ಸ್ ಇನ್ ದಿ ಏರ್ʼ ಎಂದು ಕರೆಯಲ್ಪಡುವ ಈ ಹೊಸ ಚಾಪರ್‌ಗಳನ್ನು ಪಾಕಿಸ್ತಾನದ ಪಶ್ಚಿಮ ಗಡಿಯ ಬಳಿಯ ಜೋಧ್‌ಪುರದಲ್ಲಿ ನಿಯೋಜಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ.



ಒಪ್ಪಂದ

ಬೋಯಿಂಗ್​ ಕಂಪೆನಿಯು 2020ರಲ್ಲಿ ಭಾರತೀಯ ವಾಯುಪಡೆಗೆ 22 ಅಪಾಚೆ ಹೆಲಿಕಾಪ್ಟರ್‌ಗಳನ್ನು ಪೂರೈಕೆ ಮಾಡಿತ್ತು. ಇದೇ ವೇಳೆ ಆರು ಎಎಚ್​-64ಇ ಪೂರೈಕೆ ಒಪ್ಪಂದವನ್ನೂ ಮಾಡಲಾಗಿತ್ತು.

ಮೂರು ಅಪಾಚೆ ಕಾಂಬಾಟ್ ಚಾಪರ್‌ಗಳು ಸೇರಿದಂತೆ ಒಟ್ಟು ಆರು ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಭಾರತೀಯ ಸೇನೆಯು ಸರಿ ಸುಮಾರು 51 ಕೋಟಿ ರೂ. ವೆಚ್ಚದ ಒಪ್ಪಂದವನ್ನು ಮಾಡಿಕೊಂಡಿದೆ. ಇದನ್ನು 2020ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಅಧಿಕಾರಾವಧಿಯಲ್ಲಿ ಮಾಡಲಾಗಿತ್ತು. ಈ ಒಪ್ಪಂದದಡಿ ಮೂರು ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ 2024ರ ಮೇ-ಜೂನ್ ವೇಳೆಗೆ ಬರಬೇಕಿತ್ತು. ಆದರೆ ಕೆಲವೊಂದು ಕಾರಣಗಳಿಂದ ಇದು ತಡವಾಯಿತು.

ಇದನ್ನೂ ಓದಿ: Solar Eclipse: ನೂರು ವರ್ಷಗಳ ಬಳಿಕ ನಡೆಯಲಿದೆ ಅಪರೂಪದ ಸೂರ್ಯಗ್ರಹಣ

ಅಪಾಚೆ ಹೆಲಿಕಾಪ್ಟರ್‌ ವಿಶೇಷ

ಭಾರತೀಯ ವಾಯುಪಡೆಯು ಪಂಜಾಬ್‌ನ ಪಠಾಣ್‌ಕೋಟ್ ಮತ್ತು ಅಸ್ಸಾಂನ ಜೋರ್ಹತ್‌ನಲ್ಲಿ ಈಗಾಗಲೇ ಎರಡು ಸಕ್ರಿಯ ಅಪಾಚೆ ಸ್ಕ್ವಾಡ್ರನ್‌ಗಳನ್ನು ಹೊಂದಿದೆ. ಅಪಾಚೆ ಹೆಲಿಕಾಪ್ಟರ್‌ಗಳನ್ನು ನಿಖರ ದಾಳಿ, ಭದ್ರತೆ, ವಿಚಕ್ಷಣ ಕಾರ್ಯಾಚರಣೆಗಳಿಗಾಗಿ ಬಳಸಬಹುದಾಗಿದೆ. ಇವುಗಳು ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಗುರಿಯ ಬಗ್ಗೆ ನಿಖರವಾದ ಡೇಟಾವನ್ನು ಒದಗಿಸುವ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿದೆ.