ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral video: ಅಪ್ರಾಪ್ತ ಬಾಲಕಿಯ ಕುತ್ತಿಗೆಗೆ ಚಾಕು ಹಿಡಿದ ಹುಚ್ಚು ಪ್ರೇಮಿ...ಮುಂದೇನಾಯ್ತು?

ಅಪ್ರಾಪ್ತ ಬಾಲಕಿಗೆ ಚಾಕು ತೋರಿಸಿ ವ್ಯಕ್ತಿಯೊಬ್ಬ ತನ್ನನ್ನು ಪ್ರೀತಿಸುವಂತೆ ಬೆದರಿಕೆ ಹಾಕಿರುವ ಘಟನೆ ಮಹಾರಾಷ್ಟ್ರದ ಸತಾರ ನಗರದಲ್ಲಿ ನಡೆದಿದೆ. ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ಆತ ಆಕೆಯ ಕುತ್ತಿಗೆಗೆ ಚಾಕು ಹಿಡಿದಿದ್ದಾನೆ. ಸ್ಥಳದಲ್ಲಿದ್ದ ಸೇರಿದ ಜನ ಸಮೂಹ ಕೊನೆಗೆ ಯುವಕನ ಕೈಯಿಂದ ಬಾಲಕಿಯನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಲಕಿಯ ಕುಟುಂಬಕ್ಕೆ ಬೆದರಿಕೆಯೊಡ್ಡಲು ಹುಚ್ಚು ಪ್ರೇಮಿ ಮಾಡಿದ್ದೇನು ಗೊತ್ತೆ?

ಮುಂಬೈ: ಅಪ್ರಾಪ್ತ ಬಾಲಕಿಗೆ ಚಾಕು ತೋರಿಸಿ ವ್ಯಕ್ತಿಯೊಬ್ಬ ತನ್ನನ್ನು ಪ್ರೀತಿಸುವಂತೆ ಬೆದರಿಕೆ ಹಾಕಿರುವ ಘಟನೆ ಮಹಾರಾಷ್ಟ್ರದ (Maharstra) ಸತಾರ (Satara) ನಗರದಲ್ಲಿ ನಡೆದಿದೆ. ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ಆತ ಬಾಲಕಿಯ ಕುತ್ತಿಗೆಗೆ ಚಾಕು ಹಿಡಿದಿದ್ದಾನೆ. ಸ್ಥಳದಲ್ಲಿದ್ದ ಸೇರಿದ ಜನ ಸಮೂಹ ಯುವಕನ ಕೈಯಿಂದ ಬಾಲಕಿಯನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯ ಭಯಾನಕ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿದ ಆತ ಆಕೆಯ ಕುಟುಂಬವನ್ನು ಬೆದರಿಸಲು ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.

ಸತಾರದ ಬಿಎಸ್‌ಪಿಎ ಪಥ್ ಕರಂಜೆ ಪ್ರದೇಶದಲ್ಲಿ ಹತ್ತನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ಹುಚ್ಚು ಪ್ರೇಮಿಯೊಬ್ಬ ಬಾಲಕಿಯ ಕುತ್ತಿಗೆಗೆ ಚಾಕು ಹಿಡಿದು ಆಕೆಯ ಮನೆಯವರಿಗೆ ಬೆದರಿಕೆ ಹಾಕಲು ಯತ್ನಿಸಿದ್ದಾನೆ. ಬಾಲಕಿ ಶಾಲೆಯಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಏಕಾಏಕಿ ಆಕೆಯ ಎದುರು ಬಂದ ಆತ ಅವಳನ್ನು ತಡೆದು ಆಕೆಯ ಕುತ್ತಿಗೆಗೆ ಚಾಕು ಹಿಡಿದು ಯಾರಾದರೂ ಹತ್ತಿರ ಬಂದರೆ ಅವಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಆ ವ್ಯಕ್ತಿ ಕೂಗಾಡಿ ಸುತ್ತಮುತ್ತಲಿನ ಜನರನ್ನು ಹೆದರಿಸಲು ಪ್ರಯತ್ನಿಸಿದ್ದಾನೆ.

ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದು, ಇದರಿಂದ ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ, ಚಾಕು ಬೀಸುತ್ತಾ ಜನರಿಗೆ ಆತ ಬೆದರಿಕೆಯೊಡ್ಡುತ್ತಿರುವುದನ್ನು ಕಾಣಬಹುದು.



ಇದನ್ನೂ ಓದಿ: Karnataka escoms: ಮಾಹಿತಿ ತಂತ್ರಜ್ಞಾನ ಉನ್ನತೀಕರಣ: ಜುಲೈ 25ರಿಂದ ಎರಡು ದಿನ ಎಸ್ಕಾಂಗಳ ಆನ್‌ಲೈನ್‌ ಸೇವೆ ಅಲಭ್ಯ

ಬಾಲಕಿ ಮನೆಗೆ ಹೋಗುತ್ತಿದ್ದಾಗ ಆ ವ್ಯಕ್ತಿ ಅವಳನ್ನು ತಡೆದು ಬಲವಂತವಾಗಿ ಹತ್ತಿರದ ಮನೆಯೊಳಗೆ ಕರೆದೊಯ್ಯಲು ಪ್ರಯತ್ನಿಸಿದ್ದಾನೆ. ಆದರೆ ಅಲ್ಲಿ ಸೇರಿದ್ದ ಜನ ಸಮೂಹ ಅವನನ್ನು ತಡೆಯಲು ಪ್ರಯತ್ನಿಸಿದ್ದಾರೆ. ಅನಂತರ ಒಬ್ಬ ಧೈರ್ಯಶಾಲಿ ವ್ಯಕ್ತಿ ಹಿಂದಿನಿಂದ ಗೋಡೆ ಹತ್ತಿ ದಾಳಿಕೋರನನ್ನು ಹಿಡಿದಿದ್ದಾನೆ. ಬಳಿಕ ಎಲ್ಲರೂ ಸೇರಿ ಆತನನ್ನು ಥಳಿಸಿದ್ದಾರೆ.

ಅನಂತರ ಬಾಲಕಿಯನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಹಪುರ ಪೊಲೀಸ್ ಠಾಣೆಯ ತಂಡವು ಆರೋಪಿಯನ್ನು ಬಂಧಿಸಿತು.