ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Upendra Dwivedi: ಆಪರೇಷನ್ ಸಿಂಧೂರದಿಂದ ಪಾಕಿಸ್ತಾನ ಸೇನೆಗೆ ಭಾರೀ ನಷ್ಟ: ಭಾರತೀಯ ಸೇನಾ ಮುಖ್ಯಸ್ಥ

ಆಪರೇಷನ್ ಸಿಂಧೂರ್‌ನ ನಂತರ ನಾವು ಗೆದ್ದಿದ್ದೇವೆ ಎಂದಿದ್ದ ಪಾಕಿಸ್ತಾನವನ್ನು (Pakistan) ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಲೇವಡಿ ಮಾಡಿದ್ದಾರೆ. ಚೆನ್ನೈನ ಐಐಟಿ ಮದ್ರಾಸ್‌ನಲ್ಲಿ ಭಾಷಣ ಮಾಡಿದ ಜನರಲ್ ಉಪೇಂದ್ರ ದ್ವಿವೇದಿ, “ಗೆಲುವು ಮನಸ್ಸಿನಲ್ಲಿದೆ. ಒಂದು ದೇಶದ ಜನರ ಮನಸ್ಸನ್ನು ಗೆಲ್ಲುವುದೇ ತಂತ್ರ” ಎಂದು ಹೇಳಿದರು

ಆಪರೇಷನ್ ಸಿಂಧೂರದಿಂದ ಪಾಕಿಸ್ತಾನ ಸೇನೆಗೆ ಭಾರೀ ನಷ್ಟ!

ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ

Profile Sushmitha Jain Aug 11, 2025 10:34 AM

ನವದೆಹಲಿ: ಆಪರೇಷನ್ ಸಿಂಧೂರ್‌ನ (Operation Sindoor) ನಂತರ ನಾವು ಗೆದ್ದಿದ್ದೇವೆ ಎಂದಿದ್ದ ಪಾಕಿಸ್ತಾನವನ್ನು (Pakistan) ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (General Upendra Dwivedi) ಲೇವಡಿ ಮಾಡಿದ್ದಾರೆ. ಚೆನ್ನೈನ (Chennai) ಐಐಟಿ ಮದ್ರಾಸ್‌ನಲ್ಲಿ ಭಾಷಣ ಮಾಡಿದ ಜನರಲ್ ಉಪೇಂದ್ರ ದ್ವಿವೇದಿ, “ಗೆಲುವು ಮನಸ್ಸಿನಲ್ಲಿದೆ. ಒಂದು ದೇಶದ ಜನರ ಮನಸ್ಸನ್ನು ಗೆಲ್ಲುವುದೇ ತಂತ್ರ” ಎಂದು ಹೇಳಿದರು. ಪಾಕಿಸ್ತಾನವು ತನ್ನ ಜನರಿಗೆ ತಾವು ಗೆದ್ದಿದ್ದೇವೆ ಎಂದು ಭಾವಿಸುವಂತೆ ಮಾಡಿದೆ ಎಂದು ಉಲ್ಲೇಖಿಸಿದ ಅವರು, ಫೀಲ್ಡ್ ಮಾರ್ಷಲ್‌ ಆಗಿ ಬಡ್ತಿ ಹೊಂದಿದ ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್‌ ಅವರ ಕಾಲೆಳೆದರು.

ಭಾರತವು ಸಾಮಾಜಿಕ ಜಾಲತಾಣಗಳು ಮತ್ತು ಇತರ ವೇದಿಕೆಗಳ ಮೂಲಕ ತನ್ನ ಸಂದೇಶವನ್ನು ಜನರಿಗೆ ತಲುಪಿಸಿತು. ನಾವು ಮೊದಲಿಗೆ ‘ನ್ಯಾಯ ಒದಗಿಸಲಾಗಿದೆ’ ಎಂಬ ಸಂದೇಶವನ್ನು ರವಾನಿಸಿದೆವು. ಇದು ವಿಶ್ವಾದ್ಯಂತ ಅತಿ ಹೆಚ್ಚು ಜನರನ್ನು ತಲುಪಿದೆ ಎಂದು ದ್ವಿವೇದಿ ಹೇಳಿದರು. ಈ ಸರಳ ಸಂದೇಶವನ್ನು ಭಾರತೀಯ ಸೇನೆಯ ಇಬ್ಬರು ಮಹಿಳಾ ಅಧಿಕಾರಿಗಳು ನಡೆಸಿದ ಪತ್ರಿಕಾಗೋಷ್ಠಿಗಳ ಮೂಲಕ ಪ್ರಚಾರ ಮಾಡಲಾಯಿತು. ಆಪರೇಷನ್‌ಗೆ ಬಳಸಿದ ಲೋಗೋವನ್ನು ಲೆಫ್ಟಿನೆಂಟ್ ಕರ್ನಲ್ ಮತ್ತು ಎನ್‌ಸಿಒ ನೀಡಿದ್ದರು.

ಆಪರೇಷನ್ ಸಿಂಧೂರ್‌ನಲ್ಲಿ ಭಾರತವು “ಗ್ರೇ ಝೋನ್” ತಂತ್ರವನ್ನು ಅನುಸರಿಸಿತು. ಇದರಲ್ಲಿ ಸಾಂಪ್ರದಾಯಿಕ ಯುದ್ಧದ ಬದಲು ಅನಿಶ್ಚಿತ ಕಾರ್ಯಾಚರಣೆಗಳನ್ನು ನಡೆಸಲಾಯಿತು. “ಇದು ಚದುರಂಗದ ಆಟದಂತೆ. ಶತ್ರುವಿನ ಮುಂದಿನ ನಡೆ ಊಹಿಸಲಾಗದು. ನಾವು ಕೆಲವು ಬಾರಿ ಅವರಿಗೆ ಚೆಕ್‌ಮೇಟ್ ನೀಡುತ್ತಿದ್ದೆವು, ಕೆಲವೊಮ್ಮೆ ನಮ್ಮದನ್ನೇ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕುತಿದ್ದೆವು” ಎಂದು ದ್ವಿವೇದಿ ವಿವರಿಸಿದರು.

ಈ ಸುದ್ದಿಯನ್ನು ಓದಿ: Viral News: ಬಿಜೆಪಿ ಸಂಸದ ನಾಪತ್ತೆ ; ವಿದ್ಯಾರ್ಥಿ ನಾಯಕನಿಂದ ಪೊಲೀಸರಿಗೆ ದೂರು

ಏಪ್ರಿಲ್ 22, 2025 ರಂದು ಪಹಲ್ಗಾಮ್‌ನಲ್ಲಿ 26 ಜನರನ್ನು ಕೊಂದ ಭಯೋತ್ಪಾದಕ ದಾಳಿಯ ನಂತರ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇನ್ನು ಸಾಕು ಎಂದು ತೀರ್ಮಾನಿಸಿದರು. ಮೂರು ಸೇನಾಪಡೆಗಳ ಮುಖ್ಯಸ್ಥರಿಗೆ ಕಾರ್ಯಾಚರಣೆಗೆ ಸ್ವಾತಂತ್ರ್ಯ ನೀಡಲಾಯಿತು. ಇಂತಹ ರಾಜಕೀಯ ಸ್ಪಷ್ಟತೆ ಮತ್ತು ಧೈರ್ಯವು ಸೇನೆಯ ಛಲವನ್ನು ಹೆಚ್ಚಿಸಿತು ಎಂದು ದ್ವಿವೇದಿ ತಿಳಿಸಿದರು.

ಈ ಕಾರ್ಯಾಚರಣೆಯು ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಟ್ಟಿತು. ಮೇ 7 ರಂದು, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಶಿಬಿರಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಾಶ ಮಾಡಲಾಯಿತು. ಆಪರೇಷನ್ ಮಹಾದೇವ್‌ ಹೆಸರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ ಮೂವರು ಭಯೋತ್ಪಾದಕರನ್ನು ಕೊಲ್ಲಲಾಯಿತು.