ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಒಂದಲ್ಲ.. ಎರಡಲ್ಲ.. ಭಾಗ್ಯಾಗೆ 25 ಲಕ್ಷ ಹಣವನ್ನು ಗಿಫ್ಟ್ ನೀಡಲು ಮುಂದಾದ ಆದೀಶ್ವರ್

ಕೋಟಿ ಕೋಟಿ ಪ್ರಾಜೆಕ್ಟ್ ಭಾಗ್ಯ ಇಲ್ಲದಿದ್ದರೆ ಆದೀಗೆ ಸಿಗುತ್ತಿರಲಿಲ್ಲ. ಹೀಗಾಗಿ ಆದೀಗೆ ಈಗ ಭಾಗ್ಯ ದೇವರಂತಾಗಿದ್ದಾಳೆ. ಇಷ್ಟೆಲ್ಲ ಸಹಾಯ ಮಾಡಿರುವ ಭಾಗ್ಯಾಗೆ ಏನಾದರು ದೊಡ್ಡದು ಗಿಫ್ಟ್ ನೀಡಬೇಕು ಎಂದು ಆದೀ ಮುಂದಾಗಿದ್ದಾನೆ. ಭಾಗ್ಯಾಗೆ 25 ಲಕ್ಷ ರೂಪಾಯಿ ಕೋಡೋಣ ಎಂದು ಅಂದುಕೊಳ್ಳುತ್ತಾನೆ.

ಭಾಗ್ಯಾಗೆ 25 ಲಕ್ಷ ಹಣವನ್ನು ಗಿಫ್ಟ್ ನೀಡಲು ಮುಂದಾದ ಆದೀಶ್ವರ್

Bhagya lakshmi serial

Profile Vinay Bhat Aug 11, 2025 12:10 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ಹಾಗೂ ಆದೀಶ್ವರ್ ಒಂದಲ್ಲ ಎಂದು ವಿಚಾರದಿಂದ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಈಗಾಗಲೇ ಭಾಗ್ಯಾಳ ಗುಣಕ್ಕೆ ಆದೀಶ್ವರ್ ಕಾಮತ್ ಮನಸೋತಿದ್ದಾನೆ. ಭಾಗ್ಯಾಳ ಸ್ವಾಭಿಮಾನ - ನಿಷ್ಕಲ್ಮಶ ಮನಸ್ಸು ಆದೀಗೆ ತುಂಬಾ ಇಷ್ಟವಾಗಿದೆ. ಇದನ್ನೆಲ್ಲ ಮೀರಿಸುವಂತೆ ಆದೀಗೆ ಕೈ ತಪ್ಪುತ್ತಿದ್ದ ದೊಡ್ಡ ಪ್ರಾಜೆಕ್ಟ್ ಒಂದು ಭಾಗ್ಯಾಳ ಕೃಪೆಯಿಂದ ಪುನಃ ಸಿಕ್ಕಿದೆ. ಕೋಟಿ ಕೋಟಿ ಪ್ರಾಜೆಕ್ಟ್ ಭಾಗ್ಯ ಇಲ್ಲದಿದ್ದರೆ ಆದೀಗೆ ಸಿಗುತ್ತಿರಲಿಲ್ಲ. ಹೀಗಾಗಿ ಆದೀಗೆ ಈಗ ಭಾಗ್ಯ ದೇವರಂತಾಗಿದ್ದಾಳೆ. ಇಷ್ಟೆಲ್ಲ ಸಹಾಯ ಮಾಡಿರುವ ಭಾಗ್ಯಾಗೆ ಏನಾದರು ದೊಡ್ಡದು ಗಿಫ್ಟ್ ನೀಡಬೇಕು ಎಂದು ಆದೀ ಮುಂದಾಗಿದ್ದಾನೆ.

ತಾಂಡವ್-ಆದೀ ಒಂದು ಬಹುದೊಡ್ಡ ಪ್ರಾಜೆಕ್ಟ್​ಗೆ ಕೈ ಹಾಕಿದ್ದಾರೆ. ಇದರ ಅಪ್ರೂವಲ್ ಹಾಗೂ ಇನ್​ವೆಸ್ಟ್​ಮೆಂಟ್​ಗೆ ಒಂದು ಮೀಟಿಂಗ್ ಕರೆದಿರುತ್ತಾರೆ. ಆದರೆ, ಈ ಮೀಟಿಂಗ್​ಗೆ ಬರುವ ಬರದಲ್ಲಿ ತಾಂಡವ್ ಒಂದು ಫೈಲ್ ಅನ್ನು ಮಿಸ್ ಮಾಡಿದ್ದಾನೆ. ಇದನ್ನ ಕಂಡ ಭಾಗ್ಯ ಫೈಲ್ ಅನ್ನು ಆಫೀಸ್​ಗೆ ತಂದುಕೊಟ್ಟಿದ್ದಾಳೆ. ಸರಿಯಾದ ಸಮಯಕ್ಕೆ ಭಾಗ್ಯ ಫೈಲ್ ತಂದುಕೊಟ್ಟು ಆ ಪ್ರಾಜೆಕ್ಟ್ ಅಪ್ರೂವ್ ಆಗಿ ಎಲ್ಲರೂ ಖುಷಿ ಪಡುತ್ತಾರೆ.

ಆದೀಶ್ವರ್ ಭಾಗ್ಯಾಗೆ ತುಂಬಾ ಥ್ಯಾಂಕ್ಸ್ ಎಂದು ಹೇಳುತ್ತಾನೆ.. ಈ ಫೈಲ್ ನೀವು ತಂದುಕೊಟ್ಟಿಲ್ಲ ಎಂದಾದರೆ ನಮಗೆ ತುಂಬಾ ಲಾಸ್ ಆಗುತ್ತಿತ್ತು.. ಇವತ್ತು ನೀವು ದೇವರ ರೀತಿ ಬಂದ್ರಿ ಎಂದಿದ್ದಾನೆ. ತಾಂಡವ್ ಬಳಿಯೂ ಥ್ಯಾಂಕ್ಸ್ ಹೇಳಲು ಹೇಳುತ್ತಾನೆ, ತಾಂಡವ್ ಒಲ್ಲದ ಮನಸ್ಸಿನಿಂದ ಥ್ಯಾಂಕ್ಸ್ ಎಂದು ಹೇಳುತ್ತಾನೆ. ಭಾಗ್ಯಾಳ ಈ ಒಳ್ಳೆಯ ಗುಣ ಕಂಡು ಆದೀಗೆ ತುಂಬಾ ಖುಷಿ ಆಗುತ್ತದೆ. ಮರುದಿನ ಭಾಗ್ಯಾಗೆ ಏನಾದರು ಒಂದು ಗಿಫ್ಟ್ ನೀಡಬೇಕು ಎಂದು ಅಂದುಕೊಳ್ಳುತ್ತಾನೆ.

ಇದಕ್ಕಾಗಿ ಪೂಜಾ ಬಳಿ ತೆರಳಿ ಭಾಗ್ಯಾಗೆ ಏನು ಇಷ್ಟ ಎಂದು ಕೇಳುತ್ತಾನೆ. ಆಕೆ ಭಾಗ್ಯಾಗೆ ಪಾನಿಪುರಿ, ಕಡ್ಲೆ ಮಿಟಾಯಿ ಇಷ್ಟ ಎನ್ನುತ್ತಾಳೆ.. ಇದು ಆದೀಗೆ ನಗು ತರಿಸಿದೆ.. ಆ ತರದ್ದು ಅಲ್ಲ ದೊಡ್ಡದಾಗಿ ಏನಾದರು ಕೊಡಬೇಕು ಎನ್ನುತ್ತಾನೆ. ಅಕ್ಕನಿಗೆ ಆರೀತಿಯ ಯಾವುದೇ ಆಸೆ ಇಲ್ಲ ಎಂಬುದನ್ನು ಕೇಳಿ ಆದೀಗೆ ಭಾಗ್ಯ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗುತ್ತದೆ. ಬಳಿಕ ಕುಸುಮಾಗೆ ಕಾಲ್ ಮಾಡಿ ನಾನು ನಿಮ್ಮ ಮನೆಗೆ ಬರುತ್ತೇನೆ.. ನಿಮ್ಮ ಬಳಿ ಸ್ವಲ್ಪ ಮಾತನಾಡ ಬೇಕು ಎನ್ನುತ್ತಾನೆ.

ಅದರಂತೆ ಆದೀ ಭಾಗ್ಯಾ ಮನೆಗೆ ಬರುತ್ತಾನೆ.. ಕುಸುಮಾಳನ್ನು ಪಕ್ಕಕ್ಕೆ ಕರೆದು, ನಮ್ಮ ಪ್ರಾಜೆಕ್ಟ್ ಒಕೆ ಆಗಲು ಭಾಗ್ಯಾನೇ ಕಾರಣ ಹೀಗಾಗಿ ಭಾಗ್ಯಾಗೆ ಏನಾದರು ದೊಡ್ಡ ಗಿಫ್ಟ್ ಕೊಡಬೇಕು.. ಅವಳಿಗೆ ಏನು ಇಷ್ಟ ಅಂತ ಹೇಳಿ ಎಂದಿದ್ದಾನೆ.. ಅದಕ್ಕೆ ಕುಸುಮಾ, ಅವಳು ಏನೂ ತೆಗೆದುಕೊಳ್ಳುವುದಿಲ್ಲ.. ಅವಳಿಗೆ ಅದೆಲ್ಲ ಇಷ್ಟವಿಲ್ಲ ಎನ್ನುತ್ತಾಳೆ. ಆದರೆ, ಆದೀ ಒತ್ತಾಯದಿಂದ ಪದೇ ಪದೇ ಕೇಳುತ್ತಾನೆ. ಕುಸುಮಾ ಬಳಿ ಒಂದೇ ಉತ್ತರ ಆಕೆಗೆ ಏನೂ ಇಷ್ಟವಿಲ್ಲ ಎಂಬುದು.



ಯಾರಿಂದಲೂ ಸರಿಯಾದ ಪ್ರತಿಕ್ರಿಯೆ ಬರದ ಕಾರಣ ಸ್ವತಃ ಆದೀಗೆ ಒಂದು ದೊಡ್ಡ ನಿರ್ಧಾರಕ್ಕೆ ಬರುತ್ತಾನೆ. ಭಾಗ್ಯಾಗೆ 25 ಲಕ್ಷ ರೂಪಾಯಿ ಕೋಡೋಣ ಎಂದು ಅಂದುಕೊಳ್ಳುತ್ತಾನೆ. ಇದನ್ನ ಮೊದಲಿಗೆ ಆದೀ ತಾಂಡವ್​ಗೆ ಕಾಲ್ ಮಾಡಿ ಹೇಳುತ್ತಾನೆ. ನಾನು ಭಾಗ್ಯಾಗೆ ಏನಾದರು ವ್ಯಾಲ್ಯುವೆಬಲ್ ಗಿಫ್ಟ್ ಕೊಡಬೇಕು ಅಂದುಕೊಂಡಿದ್ದೇನೆ.. ಅವಳಿಂದಲೇ ನಮ್ಮ ಪ್ರಾಜೆಕ್ಟ್ ಅಪ್ರೂವ್ ಆಗಿರೋದು ಅಲ್ವಾ ಎಂದು ತಾಂಡವ್​ಗೆ ಕಾಲ್ ಮಾಡಿ ಹೇಳುತ್ತಾನೆ. ತಾಂಡವ್​ಗೆ ಕೋಪ ಬಂದರೂ ಅದನ್ನು ತೋರಿಸದೆ, ಹೌದು ಹೌದು.. ಅವಳಿಗೆ ಒಂದು ಸ್ವೀಟ್ ಬಾಕ್ಸ್ ತೆಗೊಂಡು ಹೋಗಿ ಕೊಡೋಣ ಎಂದಾಗ ಆದೀ ನಗುತ್ತಾನೆ.. ಹಾಗಾದರೆ ಒಂದು 50 ಸಾವಿರ ಕೊಡೋಣ ಎನ್ನುತ್ತಾನೆ.



ಇಲ್ಲ ನಾನು ಅವರಿಗೆ ಒಂದು 25 ಲಕ್ಷ ಕ್ಯಾಶ್ ಕೊಟ್ಟುಬಿಡೋಣ ಅಂತ ಅಂದುಕೊಂಡಿದ್ದೇನೆ ಅಂತ ಆದೀ ಹೇಳುತ್ತಾನೆ. ಇದು ತಾಂಡವ್​ಗೆ ಆಘಾತ ತರಿಸಿದೆ. ಏನು ಲಕ್ಷದಲ್ಲ.. ಅಂತ ಚಿಕ್ಕ ಕೆಲಸಕ್ಕೆ ಇಷ್ಟೆಲ್ಲ ಬೇಡ ಎಂದು ಹೇಳುತ್ತಾ. ಆಗ ಆದೀ ಇಲ್ಲ ಇದನ್ನ ನಾನು ನನ್ನ ಶೇರ್​ನಲ್ಲೇ ಕೊಡುತ್ತೇನೆ ಎನ್ನುತ್ತಾನೆ. ಬಳಿಕ ಈ ವಿಚಾರ ಆದೀ ಅವನ ಮನೆಯಲ್ಲಿ ಹೇಳುತ್ತಾನೆ. ಇದನ್ನ ಕೇಳಿ ಕನ್ನಿಕಾಗೂ ಶಾಕ್ ಆಗಿ ಉರಿದುಕೊಂಡಿದ್ದಾಳೆ. ಅತ್ತ ಶ್ರೇಷ್ಠಾಗೂ ಇದು ತಿಳಿದಿದ್ದು, ಯಾವುದೇ ಕಾರಣಕ್ಕೂ ಭಾಗ್ಯಾಗೆ ಆ ಗಿಫ್ಟ್ ಸಿಗಬಾರದು ಆರೀತಿಯ ಪ್ಲ್ಯಾನ್ ಮಾಡಬೇಕು ಎಂದು ತಾಂಡವ್ ಬಳಿ ಹೇಳಿದ್ದಾಳೆ.

ಸದ್ಯ ಭಾಗ್ಯ ಮನೆಯಲ್ಲಿ ಪೂಜೆ ಏರ್ಪಡಿಸಲಾಗಿದೆ.. ಇದಕ್ಕೆ ಆದೀ ಮನೆಯವರೆಲ್ಲ ಆಗಮಿಸಿದ್ದಾರೆ.. ಇಲ್ಲೇ ಆದೀಶ್ವರ್ ಭಾಗ್ಯಾಗೆ 25 ಲಕ್ಷವನ್ನು ಗಿಫ್ಟ್ ಆಗಿ ಕೊಡುವ ಸಂಭವವಿದೆ. ಆದರೆ, ಇದನ್ನ ತಡೆಯಲು ಕನ್ನಿಕಾ ಟೀಮ್ ಹಾಗೂ ಶ್ರೇಷ್ಠಾ ಮುಂದಾಗಿದ್ದಾರೆ.. ಮುಂದೆ ಇಲ್ಲಿ ಏನೆಲ್ಲ ಆಗುತ್ತೆ ಎಂಬುದು ನೋಡಬೇಕಿದೆ.

BBK 12: ಬಿಗ್ ಬಾಸ್ ಕನ್ನಡ 12ರ ಮೊದಲ ಕಂಟೆಸ್ಟೆಂಟ್ ಇವರೇ..?