Attack on journalist: ಮಣಿಪುರದಲ್ಲಿ ಪತ್ರಕರ್ತನ ಮೇಲೆ ಡೆಡ್ಲ ಅಟ್ಯಾಕ್!
ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ಲೈಯಿ ಗ್ರಾಮದಲ್ಲಿ ಹೂವಿನ ಹಬ್ಬದ ವರದಿ ಮಾಡುತ್ತಿದ್ದ ಪತ್ರಕರ್ತ ದೀಪ್ ಸೈಕಿಯಾ ಅವರ ಮೇಲೆ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಗುಂಡಿನ ದಾಳಿಯಾಗಿದೆ. ಇದರಿಂದ ಬಲಗಾಲಿಗೆ ಗಾಯವಾಗಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ. ದಾಳಿಗೆ ಬಳಸಲಾದ ಏರ್ ರೈಫಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯ ಬಂಧನಕ್ಕೆ ತಂಡವನ್ನು ರಚಿಸಿದ್ದಾರೆ.

-

ಗುವಾಹಟಿ: ಪತ್ರಕರ್ತನ ಮೇಲೆ ಗುಂಡಿನ ದಾಳಿ (Attack on journalist) ನಡೆಸಿರುವ ಘಟನೆ ಮಣಿಪುರದಲ್ಲಿ (Manipur) ನಡೆದಿದೆ. ನಾಗಾಲ್ಯಾಂಡ್ (Nagaland) ಮೂಲದ ಟಿವಿ ಚಾನೆಲ್‌ನಲ್ಲಿ (TV Channel) ಕೆಲಸ ಮಾಡುತ್ತಿದ್ದ ಅಸ್ಸಾಂ ಪತ್ರಕರ್ತನನ್ನು (Assam Journalist) ಮಣಿಪುರಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ ಆತನ ಮೇಲೆ ಗುಂಡು ಹಾರಿಸಲಾಗಿದೆ. ದಾಳಿಗೆ ಬಳಸಲಾದ ಏರ್ ರೈಫಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತ್ರಕರ್ತ ದೀಪ್ ಸೈಕಿಯಾ ಅವರು ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ಹೂವಿನ ಹಬ್ಬದ ವರದಿ ಮಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ.
ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ಲೈಯಿ ಗ್ರಾಮದಲ್ಲಿ ಹೂವಿನ ಹಬ್ಬದ ವರದಿ ಮಾಡುತ್ತಿದ್ದ ಪತ್ರಕರ್ತ ದೀಪ್ ಸೈಕಿಯಾ ಅವರ ಮೇಲೆ ಗುಂಡಿನ ದಾಳಿಯಾಗಿದೆ. ಇದರಿಂದ ಬಲಗಾಲಿಗೆ ಗಾಯವಾಗಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.
ಸೈಕಿಯಾ ಅವರನ್ನು ತಕ್ಷಣವೇ ಪ್ರಥಮ ಚಿಕಿತ್ಸೆಗಾಗಿ ಸೇನಾಪತಿಯ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಾಗಾಲ್ಯಾಂಡ್‌ಗೆ ಸ್ಥಳಾಂತರಿಸಲಾಯಿತು. ಅವರು ಈಗ ಅಪಾಯದಿಂದ ಪಾರಾಗಿದ್ದಾರೆ ಎಂದು ಸೇನಾಪತಿ ಜಿಲ್ಲಾ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಣಿಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಾಳಿಯಲ್ಲಿ ಬಳಸಲಾಗಿದೆ ಎಂದು ಶಂಕಿಸಲಾದ ಏರ್ ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ.ಪೊಲೀಸರು ಅಪರಾಧಿಯನ್ನು ಗುರುತಿಸಿದ್ದು, ಬಂಧಿಸಲು ತಂಡವನ್ನು ರಚಿಸಿದ್ದಾರೆ. ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಸೇನಾಪತಿ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಘಟನೆಯನ್ನು ಹಾರ್ನ್‌ಬಿಲ್ ಟಿವಿ ತೀವ್ರವಾಗಿ ಖಂಡಿಸಿದ್ದು, ಇದೊಂದು ಆಘಾತಕಾರಿ ಮತ್ತು ಖಂಡನೀಯ ಎಂದು ಹೇಳಿದೆ. ಈ ದಾಳಿಯು ಸೈಕಿಯಾ ಅವರ ಮೇಲೆ ಮಾತ್ರವಲ್ಲ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ ಎಂದು ಚಾನೆಲ್ ತಿಳಿಸಿದೆ.
ಪತ್ರಕರ್ತರು ಸಾರ್ವಜನಿಕರ ಕಣ್ಣು ಮತ್ತು ಕಿವಿಗಳಾಗಿದ್ದಾರೆ. ಅವರು ಸತ್ಯವನ್ನು ಬೆಳಕಿಗೆ ತರಲು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ. ಸೈಕಿಯಾ ಅವರು ಸಾಂಸ್ಕೃತಿಕ ಕಾರ್ಯಕ್ರಮದ ವರದಿ ಮಾಡುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಇದು ಪ್ರಜಾಪ್ರಭುತ್ವ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ಹಾರ್ನ್‌ಬಿಲ್ ಟಿವಿ ಹೇಳಿದೆ.
ಇದನ್ನೂ ಓದಿ: Helicopter Crash: POKನಲ್ಲಿ ಹೆಲಿಕಾಪ್ಟರ್ ಪತನ; ಐವರು ಪಾಕ್ ಅಧಿಕಾರಿಗಳು ಸಾವು
ನಾಗಾಲ್ಯಾಂಡ್ ಮತ್ತು ಮಣಿಪುರ ಸರ್ಕಾರಗಳು, ಕಾನೂನು ಜಾರಿ ಸಂಸ್ಥೆಗಳು ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸಿ ಅಪರಾಧಿಗಳನ್ನು ನ್ಯಾಯದ ಕಟಕಟೆಗೆ ತರಬೇಕೆಂದು ಚಾನೆಲ್ ಒತ್ತಾಯಿಸಿದೆ.