Murder Case: ಕಪ್ಪು ಎಂದು ಪತ್ನಿಯನ್ನೇ ಜೀವಂತ ಸುಟ್ಟ ಪಾಪಿಗೆ ಮರಣದಂಡನೆ
ಮೈಬಣ್ಣಕ್ಕಾಗಿ ಸದಾ ಪತ್ನಿಯನ್ನು ನಿಂದಿಸುತ್ತಿದ್ದ ವ್ಯಕ್ತಿಯೊಬ್ಬ ಬಳಿಕ ಆಕೆಯನ್ನು ಜೀವಂತವಾಗಿ ಸುಟ್ಟು (Murder Case) ಹಾಕಿದ್ದಾನೆ. ಇದಕ್ಕೆ ಸಂಬಂಧಿಸಿ ಆರೋಪಿಯ ವಿಚಾರಣೆ ನಡೆಸಿದ ಬಳಿಕ ಆತನನ್ನು ಅಪರಾಧಿ ಎಂದು ಘೋಷಿಸಿ ಉದಯಪುರದ ನ್ಯಾಯಾಲಯವು ಮರಣದಂಡನೆ (Death penalty) ಶಿಕ್ಷೆಯನ್ನು ವಿಧಿಸಿದೆ.

-

ಉದಯಪುರ: ಮೈ ಬಣ್ಣ (dark complexion), ತೂಕದ (body weight)ಕಾರಣಕ್ಕೆ ಪತ್ನಿಯನ್ನು ಸದಾ ನಿಂದಿಸುತ್ತಿದ್ದ ವ್ಯಕ್ತಿ ಬಳಿಕ ಅವಳನ್ನು ಸುಟ್ಟು (Murder Case) ಹಾಕಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿಚಾರಣೆ ನಡೆಸಿದ ಉದಯಪುರದ ನ್ಯಾಯಾಲಯವು (Udaipur court) ಆತನನ್ನು ಅಪರಾಧಿ ಎಂದು ಘೋಷಿಸಿ ಮರಣದಂಡನೆ ಶಿಕ್ಷೆಯನ್ನು (Death penalty) ವಿಧಿಸಿದೆ. ಆರೋಪಿಯು ಪತ್ನಿಯ ಮೈ ಬಣ್ಣ ಮತ್ತು ದೇಹದ ತೂಕಕ್ಕಾಗಿ ಸದಾ ನಿಂದಿಸುತ್ತಿದ್ದ. ಅವಳಿಗೆ ಹಿಂಸೆಯನ್ನು (Violence) ನೀಡುತ್ತಿದ್ದ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪತ್ನಿಯದ್ದು ಕಪ್ಪು ಮೈಬಣ್ಣ ಎಂದು ಪದೇ ಪದೇ ನಿಂದಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಬಳಿಕ ಆಕೆಗೆ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಿ ಆತನಿಗೆ ಉದಯಪುರದ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಶನ್ ಎಂಬಾತ ತನ್ನ ಪತ್ನಿ ಲಕ್ಷ್ಮಿ ಮೇಲೆ ಆಸಿಡ್ ಸುರಿದು ಬೆಂಕಿ ಹಚ್ಚಿದ್ದನು. ಕಿಶನ್ ನಿರಂತರ ಲಕ್ಷ್ಮಿಯನ್ನು ನಿಂದಿಸುತ್ತಿದ್ದ. ಆಕೆಯ ಮೈ ಬಣ್ಣ ಮತ್ತು ದೇಹದ ತೂಕಕ್ಕಾಗಿ ಅವಳನ್ನು ಹೀಯಾಳಿಸುತ್ತಿದ್ದ. ಅಪರಾಧದ ನಡೆದ ದಿನ ರಾತ್ರಿ ಅವನು ತನ್ನ ಹೆಂಡತಿಗೆ ಔಷಧವೆಂದು ಆಸಿಡ್ ತಂದು ಆಕೆಯ ದೇಹದ ಮೇಲೆ ಎರಚಿದ್ದಾನೆ. ಅದು ಆಮ್ಲೀಯ ವಾಸನೆ ಇತ್ತು. ಬಳಿಕ ಆತ ಧೂಪದ್ರವ್ಯದ ಕಡ್ಡಿಯನ್ನು ಹಚ್ಚಿ ಆಕೆಯ ಬಟ್ಟೆ ಮೇಲೆ ಹಾಕಿದ್ದಾನೆ. ಇದರಿಂದ ತೀವ್ರ ಸುಟ್ಟಗಾಯಗಳಾಗಿ ಆಕೆ ಸಾವನ್ನಪ್ಪಿದ್ದಾಳೆ.
ಈ ಕುರಿತು ಉದಯಪುರದ ವಲ್ಲಭನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಪಬ್ಲಿಕ್ ಪ್ರಾಸಿಕ್ಯೂಟರ್ ದಿನೇಶ್ ಪಾಲಿವಾಲ್ ಅವರು ಆರೋಪಿ ತನ್ನ ಹೆಂಡತಿಯ ಮೈಬಣ್ಣದ ಮೇಲಿನ ಗೀಳಿನಿಂದ ಈ ಅಪರಾಧ ನಡೆಸಿದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅವನು ನಿರಂತರವಾಗಿ ಅವಳ ಕಪ್ಪು ಮೈಬಣ್ಣಕ್ಕಾಗಿ ಅವಮಾನಿಸುತ್ತಿದ್ದ ಮತ್ತು ಅಂತಿಮವಾಗಿ ಅವಳನ್ನು ಕ್ರೂರ ರೀತಿಯಲ್ಲಿ ಕೊಲೆ ಮಾಡಿದ್ದಾನೆ ಎಂದು ಪಾಲಿವಾಲ್ ಹೇಳಿದ್ದಾರೆ. ಇಂತಹ ಕ್ರೌರ್ಯದ ಘಟನೆಗಳು ಹೆಚ್ಚುತ್ತಿದ್ದು ಈ ಬಗ್ಗೆ ಜನರಿಗೆ ಎಚ್ಚರಿಕೆ ಸಂದೇಶ ನೀಡುವುದು ಮುಖ್ಯವಾಗಿದೆ ಎಂದ ನ್ಯಾಯಾಧೀಶರು ಆತನಿಗೆ ಮರಣದಂಡನೆ ಶಿಕ್ಷೆಯನ್ನು ನೀಡಿ ಆದೇಶಿಸಿದರು.