ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tiranga Yatra: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ 12,000 ಜನರಿಂದ ತಿರಂಗಾ ಯಾತ್ರೆ

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೇಶಭಕ್ತಿಯ ಪ್ರದರ್ಶನವಾಗಿದ್ದು, 12,000ಕ್ಕೂ ಹೆಚ್ಚು ಮಂದಿ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ, ರಾಷ್ಟ್ರಪ್ರೇಮವನ್ನು ಮೆರೆದಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸಹ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, 2 ಕಿ.ಮೀ ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದು ನಡಿದ ಈ ಯಾತ್ರೆಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ 12,000 ಜನರಿಂದ ತಿರಂಗಾ ಯಾತ್ರೆ

Profile Sushmitha Jain Aug 12, 2025 4:54 PM

ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಾರಾಮುಲ್ಲಾದಲ್ಲಿ (Baramulla) ಸ್ವಾತಂತ್ರ್ಯ ದಿನಾಚರಣೆಗೂ (Independence Day Celebration) ಮುನ್ನ 12,000ಕ್ಕೂ ಹೆಚ್ಚು ಜನರು ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ, ದೇಶಭಕ್ತಿಯ ಉತ್ಸಾಹವನ್ನು ಪ್ರದರ್ಶಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸೇರಿದಂತೆ ಎಲ್ಲಾ ವರ್ಗದ ಜನರು 2 ಕಿ.ಮೀ. ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದು ಯಾತ್ರೆಯಲ್ಲಿ ಭಾಗವಹಿಸಿದ್ದು, ಈ ವಿಡೀಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತ್ರಿವರ್ಣ ಧ್ವಜ ನಮ್ಮ ಹೆಮ್ಮೆ, ಇದು ನಮ್ಮ ಸ್ವಾತಂತ್ರ್ಯ, ನಮ್ಮ ಹೋರಾಟಗಳು ಮತ್ತು ನಮ್ಮ ಏಕತೆಯನ್ನು ಪ್ರತಿನಿಧಿಸುತ್ತದೆ. ಪ್ರಪಂಚದ್ಯಾಂತ ನಮ್ಮ ಭಾರತ ಧ್ವಜದ ಪ್ರಾಮುಖ್ಯತೆ ಹರಡಿ, ಎಲ್ಲಡೆ ನಮ್ಮ ತಿರಂಗ ಧ್ವಜ ರಾರಾಜಿಸಲಿ. ಈ ಹಿನ್ನಲೆಯಲ್ಲಿಯೆ ಬಾರಾಮುಲ್ಲಾದಲ್ಲಿ 12,000ಕ್ಕೂ ಹೆಚ್ಚು ಜನರು ತಿರಂಗಾ ಯಾತ್ರೆಯಲ್ಲಿ ಭಾಗಿಯಾದ್ದು, ಎಲ್ಲಾ ವರ್ಗದ ನಾಗರಿಕರು 2 ಕಿ.ಮೀ. ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದು, ತಲೆಯೆತ್ತಿ, ಹೆಮ್ಮೆಯಿಂದ ಮೆರವಣಿಗೆ ನಡೆಸಿದ್ದಾರೆ” ಎಂದು ಲೆಫ್ಟಿನೆಂಟ್ ಗವರ್ನರ್ ಟ್ವೀಟ್ ಮಾಡಿ, ಯಾತ್ರೆಯ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ಆಗಸ್ಟ್ 11 ರಿಂದ 15 ರವರೆಗೆ ರಾಷ್ಟ್ರವ್ಯಾಪಿ ‘ಹರ್ ಘರ್ ತಿರಂಗಾ’ ಅಭಿಯಾನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.



ಈ ಸುದ್ದಿಯನ್ನು ಓದಿ: Viral Video: 5 ಲಕ್ಷ ರೂ. ಮೌಲ್ಯದ ಲಬುಬು ಗೊಂಬೆಗಳ ಕಳವು- ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಬಾರಾಮುಲ್ಲಾದ ಡೆಪ್ಯೂಟಿ ಕಮಿಷನರ್ ಮಿಂಗಾ ಶೆರ್ಪಾ ಮತ್ತು ಸೀನಿಯರ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಗುರಿಂದರ್‌ಪಾಲ್ ಸಿಂಗ್ ಯಾತ್ರೆಯ ಮುಂದಾಳತ್ವ ವಹಿಸಿದ್ದು, ಇವರಿಗೆ ಎಡಿಸಿ ಬಾರಾಮುಲ್ಲಾ ಸೈಯದ್ ಅಲ್ತಾಫ್ ಹುಸೇನ್ ಮೌಸ್ವಿ, ಇತರ ಸಿವಿಲ್ ಆಡಳಿತ ಅಧಿಕಾರಿಗಳು, ಸೇನೆ ಮತ್ತು ಪೊಲೀಸ್ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸ್ಥಳೀಯ ನಿವಾಸಿಗಳು ಭಾಗವಹಿಸಿ ಏಕತೆ ಮತ್ತು ದೇಶಭಕ್ತಿಯನ್ನು ಪ್ರದರ್ಶಿಸಿದ್ದಾರೆ.

ಬಾರಾಮುಲ್ಲಾದ ಸೇಂಟ್ ಜೋಸೆಫ್ ಶಾಲೆಯಿಂದ ಆರಂಭವಾದ ಯಾತ್ರೆಯು ಇಡೀ ಪಟ್ಟಣದ ಮೂಲಕ ಹಾದು ಶೌಕತ್ ಅಲಿ ಕ್ರೀಡಾಂಗಣದಲ್ಲಿ ಕೊನೆಗೊಂಡಿದ್ದು, ಭಾಗವಹಿಸಿದವರು ದೇಶಭಕ್ತಿಯ ಘೋಷಣೆಗಳನ್ನು ಕೂಗಿ, ರಾಷ್ಟ್ರಗೀತೆಗಳನ್ನು ಹಾಡಿದರು. ಡೆಪ್ಯೂಟಿ ಕಮಿಷನರ್ ಯಾತ್ರೆಯ ಭಾಗವಹಿಸಿದವರಿಗೆ ಕೃತಜ್ಞತೆ ಸಲ್ಲಿಸಿ, ಬಾರಾಮುಲ್ಲಾದಲ್ಲಿ ದೇಶಭಕ್ತಿ ಮತ್ತು ಏಕತೆಯ ಕುರಿತು ಮಾತನಾಡಿದರು. ಈ ಯಾತ್ರೆಯು ಸ್ಥಳೀಯರಲ್ಲಿ ರಾಷ್ಟ್ರೀಯ ಒಗ್ಗಟ್ಟಿನ ಭಾವನೆಯನ್ನು ಇನ್ನಷ್ಟು ಬಲಗೊಳಿಸಿತು.