ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mehul Choksi: ಭಾರತಕ್ಕೆ ಅತೀ ದೊಡ್ಡ ಗೆಲುವು; ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಬೆಲ್ಜಿಯಂ ನ್ಯಾಯಾಲಯ ಆದೇಶ

ಬಹುಕೋಟಿ ರೂಪಾಯಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹಗರಣದ ಪ್ರಮುಖ ಆರೋಪಿ, ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಭಾರತವು ಜಯ ದೊರಕಿದೆ. ಬೆಲ್ಜಿಯಂನ ನ್ಯಾಯಾಲಯವು ಇಂದು ಚೋಕ್ಸಿಯನ್ನು ಹಸ್ತಾಂತರಿಸಲು ಅನುಮೋದನೆ ನೀಡಿದೆ.

ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಬೆಲ್ಜಿಯಂ ನ್ಯಾಯಾಲಯ ಆದೇಶ

-

Vishakha Bhat Vishakha Bhat Oct 18, 2025 8:36 AM

ನವದೆಹಲಿ: ಬಹುಕೋಟಿ ರೂಪಾಯಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹಗರಣದ ಪ್ರಮುಖ ಆರೋಪಿ, ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ (Mehul Choksi) ವಿರುದ್ಧ ಭಾರತವು ಜಯ ದೊರಕಿದೆ. ಬೆಲ್ಜಿಯಂನ (Belgium Govt) ನ್ಯಾಯಾಲಯವು ಇಂದು ಚೋಕ್ಸಿಯನ್ನು ಹಸ್ತಾಂತರಿಸಲು ಅನುಮೋದನೆ ನೀಡಿದೆ. ನ್ಯಾಯಾಲಯವು ಭಾರತದ ಹಸ್ತಾಂತರ ವಿನಂತಿಯನ್ನು ಎತ್ತಿಹಿಡಿದ್ದು ಚೋಕ್ಸಿಯ ಬಂಧನ ಕಾನೂನುಬದ್ಧವಾಗಿದೆ ಎಂದು ಘೋಷಿಸಿದೆ. ಭಾರತದ ಕೋರಿಕೆಯ ಮೇರೆಗೆ ಮೆಹುಲ್ ಚೋಕ್ಸಿಯನ್ನು 2025ರ ಏಪ್ರಿಲ್ 11ರಂದು ಬೆಲ್ಜಿಯಂನಲ್ಲಿ ಬಂಧಿಸಲಾಗಿತ್ತು.

ಸೆಪ್ಟೆಂಬರ್‌ನಲ್ಲಿ ನಡೆದ ವಿಚಾರಣೆಯ ನಂತರ ಆಂಟ್ವೆರ್ಪ್ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಬೆಲ್ಜಿಯಂನ ಪ್ರಾಸಿಕ್ಯೂಟರ್‌ಗಳು ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ಸಿಬಿಐ ಅಧಿಕಾರಿಗಳೊಂದಿಗೆ ಬಲವಾದ ವಾದಗಳನ್ನು ಮಂಡಿಸಿದ್ದರು. ಚೋಕ್ಸಿ ಮತ್ತು ಸೋದರಳಿಯ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಲ್ಲಿ 13,000 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ತಿಳಿಸಿದರು. ಚೋಕ್ಸಿ ದೇಶದಿಂದ ಪರಾರಿಯಾಗಿದ್ದು ಅವನನ್ನು ಬಿಡುಗಡೆ ಮಾಡುವುದರಿಂದ ಅವನು ಮತ್ತೆ ತಪ್ಪಿಸಿಕೊಳ್ಳಲು ಕಾರಣವಾಗಬಹುದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು.

ಆರೋಪಿಗಳು ಮುಂಬೈನಲ್ಲಿರುವ ಪಿಎನ್‌ಬಿಯ ಬ್ರಾಡಿ ಹೌಸ್ ಶಾಖೆಯಿಂದ ಸರಿಯಾದ ಅನುಮತಿ ಅಥವಾ ಮೇಲಾಧಾರವಿಲ್ಲದೆ ಅಂಡರ್‌ಟೇಕಿಂಗ್ ಲೆಟರ್ಸ್ (ಎಲ್‌ಒಯುಗಳು) ಮತ್ತು ಫಾರಿನ್ ಲೆಟರ್ಸ್ ಆಫ್ ಕ್ರೆಡಿಟ್ (ಎಫ್‌ಎಲ್‌ಸಿಗಳು) ಪಡೆದಿದ್ದಾರೆ ಎಂದು ತನಿಖೆಗಳು ಬಹಿರಂಗಪಡಿಸಿವೆ. ಈ ಎಲ್‌ಒಯುಗಳನ್ನು ಎಸ್‌ಬಿಐ (ಮಾರಿಷಸ್ ಮತ್ತು ಫ್ರಾಂಕ್‌ಫರ್ಟ್), ಆಕ್ಸಿಸ್ ಬ್ಯಾಂಕ್ (ಹಾಂಗ್ ಕಾಂಗ್) ಮತ್ತು ಬ್ಯಾಂಕ್ ಆಫ್ ಇಂಡಿಯಾ (ಆಂಟ್ವೆರ್ಪ್) ಸೇರಿದಂತೆ ವಿದೇಶಿ ಬ್ಯಾಂಕುಗಳಿಂದ ಸಾಲ ಪಡೆಯಲು ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಬ್ಯಾಂಕ್ ವಂಚನೆಯ ಜೊತೆಗೆ, ಚೋಕ್ಸಿ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾರೆ. ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರ ತನಿಖಾ ದಳ (CBI) ನಡೆಸಿದ ತನಿಖೆಗಳು ಅವರು ಶೆಲ್ ಕಂಪನಿಗಳು ಮತ್ತು ನಕಲಿ ಸಂಸ್ಥೆಗಳ ಮೂಲಕ ವಿದೇಶಕ್ಕೆ ದೊಡ್ಡ ಮೊತ್ತದ ಹಣವನ್ನು ಸಾಗಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Fraud Case: 125 ವರ್ಷಗಳಷ್ಟು ಹಳೆಯ ಒಪ್ಪಂದ ಬಳಸಿ ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಮನವಿ ಸಲ್ಲಿಸಿದ ಭಾರತ

ಭಾರತಕ್ಕೆ ಹಸ್ತಾಂತರವನ್ನು ತಪ್ಪಿಸಲು ಚೋಕ್ಸಿ ಆರೋಗ್ಯ ಸಮಸ್ಯೆಯ ನೆಪವೊಡ್ಡಿದ್ದ.ಚೋಕ್ಸಿಗೆ ಜೈಲಿನಲ್ಲಿ ಯುರೋಪಿಯನ್ ಮಾನದಂಡಗಳಿಗೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭಾರತ ಬೆಲ್ಜಿಯಂಗೆ ಭರವಸೆ ನೀಡಿದೆ. ಸೆಪ್ಟೆಂಬರ್ 4ರಂದು ಗೃಹ ಸಚಿವಾಲಯವು ಬೆಲ್ಜಿಯಂಗೆ ಮಾಹಿತಿ ನೀಡಿದ್ದು, 12ನೇ ಬ್ಯಾರಕ್‌ನಲ್ಲಿರುವ ಪ್ರತಿಯೊಬ್ಬ ಕೈದಿಗೆ ಯುರೋಪಿಯನ್ ಸಮಿತಿ ಫಾರ್ ದಿ ಪ್ರಿವೆನ್ಷನ್ ಆಫ್ ಟಾರ್ಚರ್ (CPT) ಮಾನದಂಡಗಳ ಪ್ರಕಾರ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸಲಾಗುವುದು ಎಂದು ತಿಳಿಸಿದೆ.