CJI BR Gavai: ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆತ ಕೇಸ್; ಬೆಂಗಳೂರಿನಲ್ಲಿ FIR ದಾಖಲು
ಅಕ್ಟೋಬರ್ 6 ರಂದು ಸುಪ್ರೀಂ ಕೋರ್ಟ್ ಮುಖ್ಯ ನಾಯ್ಯಮೂರ್ತಿಗಳ ಮೇಲೆ (Supreme Court) ಹಿರಿಯ ವಕೀಲ ರಾಕೇಶ್ ಕಿಶೋರ್ ಎಂಬಾತ ಶೂ ಎಸೆದಿದ್ದರು. ಆರೋಪಿಯನ್ನು ತಕ್ಷಣವೇ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದರು. ಇದೀಗ ಬೆಂಗಳೂರಿನಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

-

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಆರೋಪದ ಮೇಲೆ ವಕೀಲ ರಾಕೇಶ್ ಕಿಶೋರ್ ವಿರುದ್ಧ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬೆಂಗಳೂರಿನ ಅಖಿಲ ಭಾರತ ವಕೀಲರ ಸಂಘವು ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 132 ಮತ್ತು 133 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಅಕ್ಟೋಬರ್ 6 ರಂದು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲ ರಾಕೇಶ್ ಕಿಶೋರ್ ಎಂಬಾತ ಶೂ ಎಸೆದಿದ್ದರು. ಆರೋಪಿಯನ್ನು ತಕ್ಷಣವೇ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದರು. ಆತನನ್ನು ನ್ಯಾಯಾಲಯದಿಂದ ಹೊರೆಗೆ ಕರೆದುಕೊಂಡು ಹೋಗುತ್ತಿರುವಾಗ ಆತ ಸನಾತನ ಧರ್ಮದ (Hindu) ಅವಮಾನವನ್ನು ಭಾರತ ಸಹಿಸುವುದಿಲ್ಲ" ಎಂದು ಕಿರುಚಿದ್ದ. ಮಧ್ಯಪ್ರದೇಶದಲ್ಲಿ ಹಾನಿಗೊಳಗಾದ ವಿಷ್ಣು ಮೂರ್ತಿಯ ಪುನಃಸ್ಥಾಪನೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಾಧೀಶರು ತಮ್ಮ ವಿವಾದಾತ್ಮಕ "ದೇವರನ್ನೇ ಕೇಳಿ" ಎಂಬ ಹೇಳಿಕೆಗೆ ವ್ಯಾಪಕವಾಗಿ ಟೀಕೆಗೊಳಗಾದ ನಂತರ ಈ ಘಟನೆ ನಡೆದಿದೆ.
71 ವರ್ಷದ ಹಿರಿಯ ವಕೀಲ ರಾಕೇಶ್ ಕಿಶೋರ್ ಕೋಪಗೊಂಡು, ಈ ಕೃತ್ಯ ಎಸಗಿದ್ದಾರೆ. ಬಿಸಿಐ ಅವರಿಗೆ ಶೋಕಾಸ್ ನೋಟಿಸ್ ನೀಡಿ, ಕ್ರಮ ಕೈಗೊಂಡಿದೆ. ಈಬಗ್ಗೆ ಮಾತನಾಡಿರುವ ವಕೀಲ ರಾಕೇಶ್ ಕಿಶೋರ್, ಮುಖ್ಯ ನ್ಯಾಯಮೂರ್ತಿಗೆ ಹಾನಿ ಮಾಡಲು ಪ್ರಯತ್ನಿಸಿದ ಬಗ್ಗೆ ನನಗೆ ಯಾವುದೇ ಪಶ್ಚಾತಾಪದ ಭಾವನೆ ಇಲ್ಲ. ಇಂತಹ ಅವಮಾನದ ನಂತರ ಹೇಗೆ ವಿಶ್ರಾಂತಿ ಪಡೆಯುತ್ತೀಯ ಎಂದು ಸರ್ವಶಕ್ತನು ಪ್ರತಿ ರಾತ್ರಿ ನನ್ನನ್ನು ಕೇಳುತ್ತಿದ್ದನು ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: ʼʼಮನುವಾದಿ ಮನಸ್ಥಿತಿʼʼ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಘಟನೆಯ ನಂತರ, ಬಿಸಿಐ ತಕ್ಷಣವೇ ಕಿಶೋರ್ ಅವರನ್ನು ಅಮಾನತುಗೊಳಿಸಿ, ಭಾರತದ ಯಾವುದೇ ನ್ಯಾಯಾಲಯ, ಟ್ರಿಬ್ಯೂನಲ್ ಅಥವಾ ಪ್ರಾಧಿಕಾರದಲ್ಲಿ ವಾದ ಮಂಡಿಸುವುದನ್ನು, ವಕಾಲತ್ತು ವಹಿಸುವುದನ್ನು ಅಥವಾ ಅಭ್ಯಾಸ ಮಾಡುವುದನ್ನು ನಿಷೇಧಿಸಿದೆ. ಅವರ ಅಮಾನತು ಮುಂದುವರಿಸಬಾರದು ಎಂಬುದಕ್ಕೆ ಕಾರಣ ಕೇಳಿ ಶೋ ಕಾಸ್ ನೋಟಿಸ್ ನೀಡಲಾಗಿದೆ. ಅಲ್ಲದೆ, ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಬಿಸಿಐ ಸ್ಪಷ್ಟಪಡಿಸಿದೆ.