ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LPG Subsidy: ತೈಲ ಕಂಪನಿಗಳ ನಷ್ಟ ಪರಿಹಾರಕ್ಕೆ ಮುಂದಾದ ಕೇಂದ್ರ; 30,000 ಕೋಟಿ ರೂ. ನೀಡಲು ಅನುಮೋದನೆ

ಕೇಂದ್ರ ಸಂಪುಟವು ಶುಕ್ರವಾರ ರಾಜ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಗಳಿಗೆ ಕಳೆದ 15 ತಿಂಗಳಿಂದ ಎಲ್‌ಪಿಜಿಯನ್ನು (LPG) ಕಡಿಮೆ ದರದಲ್ಲಿ ಮಾರಾಟ ಮಾಡಿದ್ದರಿಂದ ಉಂಟಾದ ನಷ್ಟಕ್ಕೆ 30,000 ಕೋಟಿ ರೂಪಾಯಿಗಳ ಪರಿಹಾರವನ್ನು ಅನುಮೋದಿಸಿದೆ.

ಎಲ್‌ಪಿಜಿ ಮಾರಾಟದಲ್ಲಿ ನಷ್ಟ; ತೈಲ ಮಾರಾಟ ಕಂಪನಿಗಳಿಗೆ ಕೇಂದ್ರದಿಂದ  ಪರಿಹಾರ

ಸಾಂಧರ್ಬಿಕ ಚಿತ್ರ

Profile Sushmitha Jain Aug 9, 2025 12:26 PM

ನವದೆಹಲಿ: ಕೇಂದ್ರ ಸಂಪುಟವು (Union Cabinet) ಶುಕ್ರವಾರ ರಾಜ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indian Oil Corporation), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (Bharat Petroleum Corporation) ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ (Hindustan Petroleum Corporation) ಗಳಿಗೆ ಕಳೆದ 15 ತಿಂಗಳಿಂದ ಎಲ್‌ಪಿಜಿಯನ್ನು (LPG) ಕಡಿಮೆ ದರದಲ್ಲಿ ಮಾರಾಟ ಮಾಡಿದ್ದರಿಂದ ಉಂಟಾದ ನಷ್ಟಕ್ಕೆ 30,000 ಕೋಟಿ ರೂಪಾಯಿಗಳ ಪರಿಹಾರವನ್ನು ಅನುಮೋದಿಸಿದೆ. ಈ ಪರಿಹಾರವನ್ನು 12 ಕಂತುಗಳಲ್ಲಿ ತೈಲ ಮಾರಾಟ ಕಂಪನಿಗಳಿಗೆ (ಒಎಂಸಿಗಳಿಗೆ) ವಿತರಿಸಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

2024-25ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಎಲ್‌ಪಿಜಿ ಬೆಲೆಗಳು ಗಗನಕ್ಕೇರಿದ್ದವು. ಆದರೆ, ಗ್ರಾಹಕರಿಗೆ ಯಾವುದೇ ಹೊರೆ ಆಗದಂತೆ ಕಡಿಮೆ ಬೆಲೆಯಲ್ಲೇ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರಾಟ ಮಾಡಿದ್ದವು. ಇದರಿಂದಾಗಿ ಮೂರು ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳಿಗೆ ಹೆಚ್ಚು ನಷ್ಟ ಉಂಟಾಯಿತು. ಈ ನಷ್ಟದ ಹೊರತಾಗಿಯೂ, ಕಂಪನಿಗಳು ದೇಶಾದ್ಯಂತ ಎಲ್‌ಪಿಜಿಯನ್ನು ಕೈಗೆಟುಕುವ ಬೆಲೆಯಲ್ಲಿ ನಿರಂತರವಾಗಿ ಪೂರೈಸಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ, “ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌ಗೆ ದೇಶೀಯ ಎಲ್‌ಪಿಜಿ ಮಾರಾಟದಿಂದ ಉಂಟಾದ ನಷ್ಟಕ್ಕೆ 30,000 ಕೋಟಿ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪರಿಹಾರವು ತೈಲ ಮಾರಾಟ ಕಂಪನಿಗಳಿಗೆ ಕಚ್ಚಾ ತೈಲ ಮತ್ತು ಎಲ್‌ಪಿಜಿ ಖರೀದಿ, ಸಾಲ ಮತ್ತು ಬಂಡವಾಳ ವೆಚ್ಚವನ್ನು ಭರಿಸಲು ಸಹಾಯ ಮಾಡುವುದರ ಜೊತೆಗೆ, ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗಳ ನಿರಂತರ ಪೂರೈಕೆಗೆ ಸಹಾಯ ಮಾಡುತ್ತದೆ.

ಈ ಸುದ್ದಿಯನ್ನು ಓದಿ: Viral Post: ಟೈರ್ ಪಂಕ್ಚರ್ ಸ್ಕ್ಯಾಮ್‌ನಿಂದ 8,000 ರೂ. ಕಳೆದುಕೊಂಡ ವ್ಯಕ್ತಿ; ಇಲ್ಲಿದೆ ವಂಚನೆಯ ಕಥೆ

ಈ ಪರಿಹಾರದ ವಿತರಣೆಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ನಿರ್ಧರಿಸಲಿದೆ. “ಈ ಕ್ರಮವು ಜಾಗತಿಕ ಇಂಧನ ಮಾರುಕಟ್ಟೆಯ ಏರಿಳಿತದಿಂದ ಗ್ರಾಹಕರನ್ನು ರಕ್ಷಿಸುವ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಜೊತೆಗೆ ಈ ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳಿಗೆ ಆರ್ಥಿಕ ಹೊರೆಯಾಗದಂತೆ ರಕ್ಷಣೆ ನಿಡಲಾಗುತ್ತದೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈ ನಿರ್ಧಾರದಿಂದ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಎಲ್‌ಪಿಜಿ ಲಭ್ಯವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ದೇಶದ ಕೋಟ್ಯಂತರ ಕುಟುಂಬಗಳಿಗೆ ಇಂಧನ ಸುರಕ್ಷತೆಯನ್ನು ಒದಗಿಸುತ್ತದೆ. ತೈಲ ಮಾರಾಟ ಕಂಪನಿಗಳಿಗೆ ಈ ಪರಿಹಾರವು ಆರ್ಥಿಕ ಸ್ಥಿರತೆಯನ್ನು ನೀಡಿ, ದೇಶದ ಇಂಧನ ವಿತರಣಾ ವ್ಯವಸ್ಥೆಯನ್ನು ಬಲಗೊಳಿಸುತ್ತದೆ.