ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಗಳ ಮೇಲೆ ಕಣ್ಣಿಡಲು ಆಕೆಯ ಪೋಷಕರು ಮಾಡಿದ್ದೇನು ಗೊತ್ತಾ? ಇಂಥವರೂ ಇರ್ತಾರೆ!

ದಂಪತಿ ಕಾಲೇಜು ವಿದ್ಯಾರ್ಥಿನಿಯಾಗಿರುವ ತಮ್ಮ ಮಗಳ ಬಗ್ಗೆ ಕಣ್ಣಿಡಲು ಪ್ರಯತ್ನಿಸಿದ ಬಗ್ಗೆ ವಿವರಿಸುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ದಂಪತಿ ತಮ್ಮ ಮಗಳು ಎಲ್ಲಿ ಹೋಗುತ್ತಾಳೆ, ಏನು ಮಾಡುತ್ತಾಳೆ ಎಂಬ ಬಗ್ಗೆ ಪತ್ತೆಹಚ್ಚಲು ಖಾಸಗಿ ಪತ್ತೆದಾರರೊಬ್ಬರನ್ನು ನೇಮಿಸಿಕೊಂಡ ಕುರಿತು ಮಾತನಾಡುತ್ತಿರುವುದು ವಿಡಿಯೊ ಕ್ಲಿಪ್‌ನಲ್ಲಿದೆ.

ಮಗಳ ಮೇಲೆ ಕಣ್ಣಿಡಲು ಆಕೆಯ ಪೋಷಕರು ಮಾಡಿದ್ದೇನು ಗೊತ್ತಾ?

Priyanka P Priyanka P Aug 9, 2025 8:34 PM

ದೆಹಲಿ: ದಂಪತಿ ಕಾಲೇಜು ವಿದ್ಯಾರ್ಥಿನಿಯಾಗಿರುವ ತಮ್ಮ ಮಗಳ ಬಗ್ಗೆ ಕಣ್ಣಿಡಲು ಪ್ರಯತ್ನಿಸಿದ ಬಗ್ಗೆ ವಿವರಿಸುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ದಂಪತಿ ತಮ್ಮ ಮಗಳು ರಹಸ್ಯ ಗೆಳೆಯನನ್ನು ಹೊಂದಿದ್ದಾಳೆಂದು ಹೇಗೆ ಅನುಮಾನಿಸಿದರು? ಮತ್ತು ಅವಳು ಎಲ್ಲಿ ಹೋಗುತ್ತಾಳೆ, ಏನು ಮಾಡುತ್ತಾಳೆ ಎಂಬುದನ್ನು ಬಗ್ಗೆ ಪತ್ತೆಹಚ್ಚಲು ಖಾಸಗಿ ಪತ್ತೆದಾರರೊಬ್ಬರನ್ನು ನೇಮಿಸಿಕೊಂಡ ಕುರಿತು ಮಾತನಾಡುವ ವಿಡಿಯೊ ಕ್ಲಿಪ್‌ನಲ್ಲಿದೆ.

ವಿಡಿಯೊದಲ್ಲೇನಿದೆ?

ಈ ವಿಡಿಯೊ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪಾಡ್‌ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಆಧ್ಯಾತ್ಮಿಕ ಭಾಷಣಕಾರ ಸ್ವಾಮಿ ಅನಿರುದ್ಧಾಚಾರ್ಯರು, ಪುರಿ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯಾಗಿರುವ ತಮ್ಮ ಮಗಳ ಮೇಲೆ ಕಣ್ಣಿಡಲು ಖಾಸಗಿ ಡಿಟೆಕ್ಟೆವ್ ಒಬ್ಬರನ್ನು ನೇಮಿಸಿಕೊಂಡಿದ್ದ ಪೋಷಕರ ಬಗ್ಗೆ ಮಾತನಾಡಿದರು. ಅವರು ಕೆಲವು ದಿನಗಳ ಕಾಲ ಯುವತಿಯನ್ನು ಹಿಂಬಾಲಿಸಿದಾಗ ಅಸಾಮಾನ್ಯವಾದದ್ದೇನೂ ಸಿಗಲಿಲ್ಲ. ಆದರೆ ಒಂದು ದಿನ, ಅವರು ಆ ಯುವತಿ ಜಿಟಿಬಿ ನಗರಕ್ಕೆ ಹೋಗುವುದನ್ನು ಗಮನಿಸಿದರು. ಅವಳು ವೇಶ್ಯಾಗೃಹಗಳು ಮತ್ತು ವೇಶ್ಯೆಯರಿರುವ ಪ್ರದೇಶಕ್ಕೆ ಹೋದಳು. ದುಬಾರಿ ಬಟ್ಟೆಗಳನ್ನು ಖರೀದಿಸಲು ಮತ್ತು ತನ್ನ ಸ್ನೇಹಿತರೊಂದಿಗೆ ಹೊರಗೆ ಹೋಗಲು ಹೆಚ್ಚುವರಿ ಹಣವನ್ನು ಪಡೆಯುವ ಸಲುವಾಗಿ ಯುವತಿ ಈ ಮಾರ್ಗವನ್ನು ಆರಿಸಿಕೊಂಡಿದ್ದಾಳೆ ಎಂದು ಪತ್ತೆದಾರರು ಅಂತಿಮವಾಗಿ ಅರಿತುಕೊಂಡರು.

ವಿಡಿಯೊ ವೀಕ್ಷಿಸಿ:

ಅವಿವಾಹಿತ ಯುವತಿಯರು ಕಡಿಮೆ ನೈತಿಕತೆಯನ್ನು ಹೊಂದಿದ್ದಾರೆ ಎಂದು ಅನಿರುದ್ಧಾಚಾರ್ಯರು ಈ ಹಿಂದೆ ನೀಡಿದ್ದ ಹೇಳಿಕೆಯು ಸರಿಯಾಗಿದೆ ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಈ ಹೇಳಿಕೆಯನ್ನು ಆಕ್ಷೇಪಾರ್ಹ ಎಂದು ಇತರ ಬಳಕೆದಾರರು ಟೀಕಿಸಿದರು. ಇನ್ನು ಪತ್ತೇದಾರಿಯನ್ನು ನೇಮಕ ಮಾಡಿಕೊಂಡಿದ್ದಕ್ಕಾಗಿ ಅನೇಕರು ಪೋಷಕರನ್ನು ಟೀಕಿಸಿದರು. ಪೋಷಕರು ಗೂಢಚಾರಿಕೆ ಮಾಡಲು ಶಕ್ತರಾಗಿರಬಹುದು. ಆದರೆ ಅವರ ಮಗಳಿಗೆ ಸಹಾಯ ಮಾಡಲು ಅವರ ಬಳಿ ಹಣವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕುಟುಂಬವು ಎಷ್ಟು ಸಂಪ್ರದಾಯವಾದಿಯಾಗಿದೆಯೆಂದರೆ ಬಾಯ್ ಫ್ರೆಂಡ್ ಮಾಡಿಕೊಳ್ಳಲು, ಶಾಪಿಂಗ್ ಮಾಡಲು ಮತ್ತು ಐಷಾರಾಮಿಯಾಗಿ ಬದುಕಲು ಸಾಕಷ್ಟು ಹಣ ನೀಡಲು ಅವರಿಗೆ ಸಾಧ್ಯವಾಗುವುದಿಲ್ಲ. ಆದರೆ ಖಾಸಗಿ ಪತ್ತೇದಾರಿಯನ್ನು ನೇಮಿಸಿ ತಮ್ಮ ಮಗಳ ಮೇಲೆ ಕಣ್ಣಿಡಲು ಅವರು ಶಕ್ತರಾಗಿದ್ದಾರೆ ಎಂದು ಬಳಕೆದಾರರೊಬ್ಬರು ಟೀಕಿಸಿದ್ದಾರೆ. ಪೋಷಕರು ತಮ್ಮ ಮಕ್ಕಳ ಮೇಲೆ ಕಣ್ಣಿಡಲು ಪತ್ತೇದಾರಿಗಳನ್ನು ನೇಮಿಸಿಕೊಳ್ಳುವ ಬದಲು ಅವರೊಂದಿಗೆ ಮುಕ್ತವಾಗಿ ಮಾತನಾಡಬೇಕು ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.