ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026: ಎಂಎಸ್‌ ಧೋನಿ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಕೆ ಶ್ರೀಕಾಂತ್‌!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಮಾಜಿ ನಾಯಕ ಎಂಎಸ್‌ ಧೋನಿ ಅವರ ಸ್ಥಾನಕ್ಕೆ ರಾಜಸ್ಥಾನ್‌ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌ ಸೂಕ್ತ ಆಟಗಾರ ಎಂದು ಭಾರತ ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರಂತೆ ಚೆನ್ನೈ ಫ್ರಾಂಚೈಸಿ ಕೂಡ ಸಂಜು ಸ್ಯಾಮ್ಸನ್‌ ಅವರನ್ನು ಕರೆಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಎಂಎಸ್‌ ಧೋನಿಗೆ ಸೂಕ್ತ ಆಟಗಾರನನ್ನು ಆರಿಸಿದ ಶ್ರೀಕಾಂತ್‌!

ಎಂಎಸ್‌ ಧೋನಿ ಸ್ಥಾನಕ್ಕೆ ಸಂಜು ಸ್ಯಾಮ್ಸನ್‌ ಸೂಕ್ತ ಆಟಗಾರ ಎಂದ ಕೆ ಶ್ರೀಕಾಂತ್‌.

Profile Ramesh Kote Aug 9, 2025 8:09 PM

ನವದೆಹಲಿ: ಭಾರತ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡದ ಮಾಜಿ ನಾಯಕ ಎಂಎಸ್‌ ಧೋನಿ (MS Dhoni) ಸದ್ಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ (IPL 2026) ವೃತ್ತಿ ಜೀವನದ ಅಂತಿಮ ಹಂತದಲ್ಲಿದ್ದಾರೆ. ಈ ವರ್ಷ ಅಥವಾ ಮುಂದಿನ ವರ್ಷ ಎಂಎಸ್‌ ಧೋನಿ ತಮ್ಮ ಐಪಿಎಲ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಬಹದು. ಅದಕ್ಕಾಗಿ ಚೆನ್ನೈ ಫ್ರಾಂಚೈಸಿ ತನ್ನ ತಂಡದಲ್ಲಿ ಎಂಎಸ್‌ ಧೋನಿಗೆ ಸೂಕ್ತ ಬದಲಿ ಆಟಗಾರನನ್ನು ಹುಡುಕುತ್ತಿದೆ. ಅದರಂತೆ ಭಾರತ ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್‌, ಚೆನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಎಂಎಸ್‌ ಧೋನಿಗೆ ಸಂಜು ಸ್ಯಾಮ್ಸನ್‌ (Sanju Samson) ಸೂಕ್ತ ಬದಲಿ ಆಟಗಾರರನ್ನು ಆರಿಸಿದ್ದಾರೆ.

ಎಂಎಸ್‌ ಧೋನಿ ಕಳೆದ ಎರಡು ವರ್ಷಗಳ ಹಿಂದೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವವನ್ನು ಋತುರಾಜ್‌ ಗಾಯಕ್ವಾಡ್‌ಗೆ ಬಿಟ್ಟು ಕೊಟ್ಟಿದ್ದರು. ಹಾಗಾಗಿ ಗಾಯಕ್ವಾಡ್‌ ಅವರೇ ನಾಯಕತ್ವದಲ್ಲಿ ಮುಂದುವರಿಯಲಿದ್ದಾರೆ. ಇದೀಗ ಚೆನ್ನೈ ಫ್ರಾಂಚೈಸಿ ರಾಜಸ್ಥಾನ್‌ ರಾಯಲ್ಸ್‌ನಿಂದ ಸಂಜು ಸ್ಯಾಮ್ಸನ್‌ ಅವರನ್ನು ಟ್ರೇಡ್‌ ಡೀಲ್‌ ಮೂಲಕ ಕರೆಸಿಕೊಳ್ಳಲು ಎದುರು ನೋಡುತ್ತಿದೆ ಎಂದು ವರದಿಯಾಗಿದೆ. ಒಂದು ವೇಳೆ ಸಂಜು ಬಂದರೂ ಅವರು ಸಿಎಸ್‌ಕೆ ತಂಡದಲ್ಲಿ ವಿಕೆಟ್‌ ಕೀಪರ್‌ ಆಗಿ ಆಡಲಿದ್ದಾರೆ.

Sanju Samson: ಸಂಜು ಸ್ಯಾಮ್ಸನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಸೇರುವುದು ಖಚಿತ

ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಕೆ ಶ್ರೀಕಾಂತ್‌, "ಸಂಜು ಸ್ಯಾಮ್ಸನ್‌ ಅದ್ಭುತ ಆಟಗಾರ ಎಂದು ನಾನು ನಿಮಗೆ ಹೇಳುತ್ತೇನೆ ಹಾಗೂ ಚೆನ್ನೈನಲ್ಲಿ ಅವರು ತುಂಬಾ ಖ್ಯಾತಿಯನ್ನು ಹೊಂದಿದ್ದಾರೆ. ಚೆನ್ನೈನಲ್ಲಿ ಅವರಿಗೆ ಒಳ್ಳೆಯ ಮನ್ನಣೆ ಇದೆ. ಸಂಜು ಸ್ಯಾಮ್ಸನ್‌ ತಮ್ಮ ತಂಡವನ್ನು ಬಿಟ್ಟು ಬರಲು ಸಿದ್ದರಾದರೆ, ನಾನು ಚೆನ್ನೈಗೆ ಆಯ್ಕೆ ಮಾಡುವ ಆಟಗಾರರ ಪೈಕಿ ಸಂಜು ಮೊದಲನೇಯವರು," ಎಂದು ಹೇಳಿದ್ದಾರೆ.

"ಎಂಎಸ್‌ ಧೋನಿ ಸ್ಥಾನಕ್ಕೆ ಸಂಜು ಸ್ಯಾಮ್ಸನ್‌ ಸೂಕ್ತ ಆಟಗಾರ. ಈ ಆವೃತ್ತಿಯನ್ನು ಎಂಎಸ್‌ ಧೋನಿ ಬಹುತೇಕ ಆಡಬಹುದು ಅಥವಾ ಆಡದೇ ಇರಬಹುದು. ಆದರೆ, ಒಂದು ವರ್ಷದ ಬಳಿಕ ಚೆನ್ನೈ ಫ್ರಾಂಚೈಸಿ ಅವರ ಸ್ಥಾನಕ್ಕೆ ಆರೋಗ್ಯಕರವಾಗಿ ಬದಲಿಸಲು ಬಯಸಬಹುದು. ಒಂದು ವೇಳೆ ಋತುರಾಜ್‌ ಗಾಯಕ್ವಾಡ್‌ಗೆ ನಾಯಕತ್ವ ನೀಡಿದರೆ, ಬಹುಶಃ ಅವರೇ ನಾಯಕನಾಗಿ ಮುಂದುವರಿಯಬಹುದು," ಎಂದು ಕೆ ಶ್ರೀಕಾಂತ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.‌

Sanju Samson: ರಾಜಸ್ಥಾನ್‌ ತೊರೆದು ಚೆನ್ನೈ ಸೇರಲು ಮುಂದಾದ ಸಂಜು ಸ್ಯಾಮ್ಸನ್‌

ಗುರುವಾರ ವರದಿಗಳ ಪ್ರಕಾರ ಸಂಜು ಸ್ಯಾಮ್ಸನ್ ಆರ್‌ಆರ್‌ಗೆ ಅಧಿಕೃತವಾಗಿ ತನ್ನನ್ನು ಹರಾಜಿನಲ್ಲಿ ವಿನಿಮಯ ಮಾಡಿಕೊಳ್ಳಲು ಅಥವಾ ಬಿಡುಗಡೆ ಮಾಡಲು ಕೇಳಿಕೊಂಡಿದ್ದಾರೆ. ಅವರು ಎರಡು ಅವಧಿಗಳಲ್ಲಿ ಫ್ರಾಂಚೈಸಿ ಪರ ಆಡಿದ್ದಾರೆ, ಮೊದಲು 2013 ರಿಂದ 2015 ರವರೆಗೆ ಮತ್ತು ನಂತರ 2018 ರಿಂದ 2025 ರವರೆಗೆ.

"ಪತ್ರಿಕೆ ವರದಿಗಳ ಪ್ರಕಾರ, ಅವರ ಮತ್ತು ರಾಹುಲ್ ದ್ರಾವಿಡ್ ನಡುವೆ ಬಿರುಕು ಇದ್ದಂತೆ ತೋರುತ್ತಿದೆ, ಆದರೆ ನನಗೆ ಸಂಪೂರ್ಣವಾಗಿ ತಿಳಿದಿಲ್ಲ. ಫ್ರಾಂಚೈಸಿ ದೃಷ್ಟಿಕೋನದಿಂದ ನೋಡಿ. ಅವರು (ಆರ್‌ಆರ್‌) ಸಂಜುಗಾಗಿ ಒಂದು ನಿರ್ದಿಷ್ಟ ಮೊತ್ತವನ್ನು ಪಾವತಿಸಿ ಅವರನ್ನು ಉಳಿಸಿಕೊಂಡಿದ್ದಾರೆ. ರಾಜಸ್ಥಾನ್‌ ಫ್ರಾಂಚೈಸಿ ಅವರ ಸುತ್ತ ತಂಡವನ್ನು ರಚಿಸಿದೆ. ಇದ್ದಕ್ಕಿದ್ದಂತೆ, ನೀವು ಅವರನ್ನು ಬಿಡುಗಡೆ ಮಾಡಿದರೆ, ತಂಡದ ಸಮತೋಲನಕ್ಕೆ ಏನಾಗುತ್ತದೆ? ಅವರು 2008 ರಿಂದ ಐಪಿಎಲ್ ಗೆದ್ದಿಲ್ಲ," ಎಂದು ಶ್ರೀಕಾಂತ್‌ ತಿಳಿಸಿದ್ದಾರೆ.