ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತ್ವಿಶಾ ಶರ್ಮಾ ಸಾವಿನ ತನಿಖೆ ಸಿಬಿಐಗೆ ಒಪ್ಪಿಸಲು ಸುಪ್ರೀಂ ಕೋರ್ಟ್‌ ಆದೇಶ

Twisha Sharma death case: ಮಧ್ಯ ಪ್ರದೇಶದ ಪತಿಯ ಮನೆಯಲ್ಲಿ ನಿಗೂಢವಾಗಿ ಮೃತಪಟ್ಟ 32 ವರ್ಷದ ನಟಿ-ಮಾಡೆಲ್ ತ್ವಿಶಾ ಶರ್ಮಾ ಅವರ ಸಾವಿನ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಒಂದು ದಿನದೊಳಗೆ ವಹಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಲಾಗಿದೆ. ತನಿಖೆಯು ಸಂಪೂರ್ಣ ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಪೀಠವು ಹೇಳಿದೆ.

ಕೊನೆಗೂ ತ್ವಿಶಾ ಶರ್ಮಾ ಪ್ರಕರಣ ಸಿಬಿಐ ಹೆಗಲಿಗೆ

ತ್ವಿಶಾ ಶರ್ಮಾ ಮತ್ತು ಅವರ ಅತ್ತೆ (ಸಂಗ್ರಹ ಚಿತ್ರ) -

Priyanka P
Priyanka P May 25, 2026 7:13 PM

ಭೋಪಾಲ್‌, ಮೇ 25: ಮಧ್ಯ ಪ್ರದೇಶದ ಪತಿಯ ಮನೆಯಲ್ಲಿ ನಡೆದ 32 ವರ್ಷದ ನಟಿ-ಮಾಡೆಲ್ ತ್ವಿಶಾ ಶರ್ಮಾ (Twisha Sharma) ಅವರ ಅಸಹಜ ಸಾವಿನ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಒಂದು ದಿನದೊಳಗೆ ವಹಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಸುಪ್ರೀಂ ಕೋರ್ಟ್‌ಗೆ (Supreme Court) ಮಾಹಿತಿ ನೀಡಲಾಯಿತು. ತನಿಖೆಯಲ್ಲಿನ ಪಕ್ಷಪಾತ ಧೋರಣೆ ಹಾಗೂ ತನಿಖೆಯಲ್ಲಿ ಸಂಭವಿಸಿದಿರಬಹುದಾದ ಲೋಪಗಳ ಆರೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ತನಿಖಾ ದಳ ಒಂದು ದಿನದೊಳಗೆ ತನಿಖೆ ಆರಂಭಿಸಲಿದೆ.

ಸೂರ್ಯಕಾಂತ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠವು, ಮಧ್ಯ ಪ್ರದೇಶ ಸರ್ಕಾರದ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಕೇಂದ್ರಕ್ಕೆ ಈಗಾಗಲೇ ಪತ್ರ ಬರೆದಿದೆ. ರಾಜ್ಯದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಿಬಿಐ ತನಿಖೆಯನ್ನು ಔಪಚಾರಿಕವಾಗಿ ವಹಿಸಿಕೊಳ್ಳಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆಯಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ತನಿಖೆಯು ಸಂಪೂರ್ಣ ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಪೀಠವು ಹೇಳಿದೆ. ಜತೆಗೆ ಪ್ರಕರಣದ ತನಿಖೆ ನಡೆಯುತ್ತಿರುವ ಅವಧಿಯಲ್ಲಿ ಎರಡೂ ಕಡೆಯವರು ಸಾರ್ವಜನಿಕ ಹೇಳಿಕೆಗಳನ್ನು ನೀಡಬಾರದು. ಮಾಧ್ಯಮಗಳು ಸಾಕ್ಷಿದಾರರ ಹೇಳಿಕೆಗಳನ್ನು ಪ್ರಸಾರ ಮಾಡುವುದು ಅಥವಾ ಪ್ರಕಟಿಸಬಾರದು ಎಂದು ಕೂಡ ನ್ಯಾಯಪೀಠ ಹೇಳಿತು.

ತ್ವಿಶಾ ಶರ್ಮಾ ಸಾವು ಪ್ರಕರಣ: 10 ದಿನಗಳ ನಂತರ ಜಬಲ್‌ಪುರ ನ್ಯಾಯಾಲಯದಲ್ಲಿ ಶರಣಾದ ಪತಿ ಸಮರ್ಥ್ ಸಿಂಗ್

ಮೃತರ ಪತಿ ವಕೀಲರು ಮತ್ತು ಅತ್ತೆ ಮಾಜಿ ನ್ಯಾಯಾಧೀಶೆಯಾಗಿರುವುದರಿಂದ ನ್ಯಾಯಾಂಗವು ತನಿಖೆಯ ಮೇಲೆ ಪ್ರಭಾವ ಬೀರುತ್ತಿದೆ ಎಂಬ ಆರೋಪಗಳು ಮತ್ತು ಪ್ರಕರಣದ ಸುತ್ತಲಿನ ಸಾರ್ವಜನಿಕ ಚರ್ಚೆಯ ಬಗ್ಗೆಯೂ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತು.

ಏಮ್ಸ್ ಭೋಪಾಲ್ ಶವಾಗಾರದಲ್ಲಿ ಸಂರಕ್ಷಿಸಲಾಗಿದ್ದ ತ್ವಿಶಾ ಶರ್ಮಾಳ ಮೃತದೇಹದ ಎರಡನೇ ಮರಣೋತ್ತರ ಪರೀಕ್ಷೆಯನ್ನು ದೆಹಲಿಯ ಏಮ್ಸ್‌ನ ವಿಧಿವಿಜ್ಞಾನ ವಿಭಾಗದ ನಾಲ್ವರು ಹಿರಿಯ ವೈದ್ಯರ ತಂಡ ನಡೆಸಿದೆ. ಆಧುನಿಕ ವಿಧಿವಿಜ್ಞಾನ ಉಪಕರಣಗಳನ್ನು ಹೊಂದಿರುವ ವೈದ್ಯಕೀಯ ಮಂಡಳಿಯು ವಿವರವಾದ ಪರೀಕ್ಷೆಯನ್ನು ನಡೆಸಿದ್ದು, ತನ್ನ ವರದಿಯನ್ನು ದೆಹಲಿಯ ಏಮ್ಸ್‌ನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ ಅವರಿಗೆ ಸಲ್ಲಿಸಲಿದೆ. ಅವರು ಅಂತಿಮ ವರದಿಯನ್ನು ಸಿದ್ಧಪಡಿಸಲಿದ್ದಾರೆ.

12 ದಿನಗಳ ಬಳಿಕ ಅಂತ್ಯ ಸಂಸ್ಕಾರ

ತ್ವಿಶಾ ಮೃತದೇಹ ಪತ್ತೆಯಾದ 12 ದಿನಗಳ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ಅವರ ತಾಯಿ ಕುಸಿದು ಬಿದ್ದು, ಕಣ್ಣೀರು ಸುರಿಸುತ್ತ ಮಗಳ ಸಾವಿಗೆ ಶೀಘ್ರದಲ್ಲೇ ನ್ಯಾಯ ಸಿಗಲಿ ಎಂದು ಆಗ್ರಹಿಸಿದರು. ದೆಹಲಿ ಏಮ್ಸ್‌ನ ವೈದ್ಯರು 2ನೇ ಮರಣೋತ್ತರ ಪರೀಕ್ಷೆ ಮುಗಿಸಿದ ಹಿನ್ನೆಲೆಯಲ್ಲಿ ತ್ವಿಶಾ ಶರ್ಮಾ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಭೋಪಾಲ್‌ನ ಭಾದ್ಭದ ವಿಶ್ರಮ ಘಾಟ್‌ನಲ್ಲಿ ಆಯೋಜಿಸಿದ ಅಂತಿಮ ವಿಧಿ ವಿಧಾನದಲ್ಲಿ ತ್ವಿಶಾ ಶರ್ಮಾ ಮನೆಯವರು ಪಾಲ್ಗೊಂಡರು. ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ನಡೆಸಲಾಯಿತು.