ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Extramarital Relationship: ಅತಿ ಹೆಚ್ಚು ಅಕ್ರಮ ಸಂಬಂಧ ಪ್ರಕರಣಗಳಿಗೆ ಕುಖ್ಯಾತಿ ಪಡೆದಿರುವ ರಾಜ್ಯ ಇದೇ ಅಂತೆ!

ದೇಶಾದ್ಯಂತ ವಿವಾಹ ವಂಚನೆ (Extramarital Relationship) ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ವಿವಾಹೇತರ ಸಂಬಂಧಗಳನ್ನು ಹೊಂದಲು ಬಯಸುವವರಿಗಾಗಿ ಅವಕಾಶ ಮಾಡಿಕೊಡುವ ಜಾಗತಿಕ ಡೇಟಿಂಗ್ ಆಪ್ (global dating app) ಆಶ್ಲೇ ಮ್ಯಾಡಿಸನ್ ( Ashley Madison ) 2025ರ ಜೂನ್ ತಿಂಗಳ ಹೊಸ ಬಳಕೆದಾರರ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಈ ಅಂಕಿ ಅಂಶಗಳಲ್ಲಿ ತಮಿಳುನಾಡು (tamilnadu) ಮೊದಲ ಸ್ಥಾನದಲ್ಲಿದೆ.

ಈ ರಾಜ್ಯದಲ್ಲಿ ವಿವಾಹೇತರ ಸಂಬಂಧ ಅತಿ ಹೆಚ್ಚಂತೆ!

ನವದೆಹಲಿ: ದೇಶಾದ್ಯಂತ ವಿವಾಹ ವಂಚನೆ (Extramarital Relationship) ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ವಿವಾಹೇತರ ಸಂಬಂಧಗಳನ್ನು ಹೊಂದಲು ಬಯಸುವವರಿಗಾಗಿ ಅವಕಾಶ ಮಾಡಿಕೊಡುವ ಜಾಗತಿಕ ಡೇಟಿಂಗ್ ಆಪ್ (global dating app) ಆಶ್ಲೇ ಮ್ಯಾಡಿಸನ್ ( Ashley Madison ) 2025ರ ಜೂನ್ ತಿಂಗಳ ಹೊಸ ಬಳಕೆದಾರರ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಈ ಅಂಕಿ ಅಂಶಗಳಲ್ಲಿ ತಮಿಳುನಾಡು (tamilnadu) ಮೊದಲ ಸ್ಥಾನದಲ್ಲಿದೆ. ತಮಿಳಿನಾಡಿನಲ್ಲಿಯೂ ಕಾಂಚೀಪುರಂ (Kanchipuram) ಮುಂಚೂಣಿಯಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿ (Delhi) ಕೂಡ ಟಾಪ್ 20ರ ಪಟ್ಟಿಯಲ್ಲಿ ಸ್ಥಾನಗಳಿಸಿದೆ ಎಂದು ಆಶ್ಲೇ ಮ್ಯಾಡಿಸನ್ ಅಂಕಿ ಅಂಶಗಳು ಬಹಿರಂಗಪಡಿಸಿದೆ.

ವಿವಾಹೇತರ ಸಂಬಂಧಗಳನ್ನು ಬಯಸುವವರಿಗೆ ವೇದಿಕೆ ಕಲ್ಪಿಸಿಕೊಡುವ ಜಾಗತಿಕ ಡೇಟಿಂಗ್ ಪ್ಲಾಟ್‌ಫಾರ್ಮ್ ಆಶ್ಲೇ ಮ್ಯಾಡಿಸನ್ ಜೂನ್ ತಿಂಗಳ ಹೊಸ ಬಳಕೆದಾರರ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸಣ್ಣ ನಗರಗಳ ಹೆಚ್ಚಿನ ಜನರು ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದು, ಇದರಿಂದ ಭಾರತದಲ್ಲಿ ತನ್ನ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ ಎಂದು ಆಪ್ ಹೇಳಿಕೊಂಡಿದೆ.

ಆಶ್ಲೇ ಮ್ಯಾಡಿಸನ್ ನ ಇತ್ತೀಚಿನ ಅಂಕಿಅಂಶಗಳ ಪ್ರಕಾರ ತಮಿಳುನಾಡಿನ ಕಾಂಚೀಪುರಂ ಭಾರತದಲ್ಲೇ ಗರಿಷ್ಠ ಮಂದಿ ಸೇರಿರುವುದನ್ನು ದಾಖಲಿಸಿದೆ. ಇದು ದೆಹಲಿ ಮತ್ತು ಮುಂಬೈ ನಗರಗಳನ್ನೂ ಮೀರಿಸಿದೆ. ಉಳಿದಂತೆ ಆಶ್ಲೇ ಮ್ಯಾಡಿಸನ್ ನಲ್ಲಿ ದಾಖಲಾಗಿರುವ ಟಾಪ್ 20 ಭಾರತೀಯ ಜಿಲ್ಲೆಗಳ ಪಟ್ಟಿಯಲ್ಲಿ ದೆಹಲಿ-ಎ ನ್‌ಸಿಆರ್ ಪ್ರದೇಶದ ಒಂಬತ್ತು ಸ್ಥಳಗಳು ಸೇರಿವೆ. ಇದರಲ್ಲಿ ಮಧ್ಯ ದೆಹಲಿ, ನೈಋತ್ಯ ದೆಹಲಿ, ಪೂರ್ವ ದೆಹಲಿ, ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ ಮತ್ತು ವಾಯುವ್ಯ ದೆಹಲಿಯೊಂದಿಗೆ ನೆರೆಯ ನಗರಗಳಾದ ಗುರ್‌ಗಾಂವ್, ಗಾಜಿಯಾಬಾದ್, ನೋಯ್ಡಾ ಕೂಡ ಸೇರಿವೆ.

ಇವುಗಳೊಂದಿಗೆ ಜೈಪುರ, ರಾಯ್‌ಗಢ, ಕಾಮರೂಪ್ ಮತ್ತು ಚಂಡೀಗಢ ನಗರಗಳೂ ಸೇರಿಕೊಂಡಿವೆ. ವಿಶೇಷವೆಂದರೆ ಈ ನಗರಗಳ ಪಟ್ಟಿಯಲ್ಲಿ ಮುಂಬೈ ಟಾಪ್ 20 ರಲ್ಲಿ ಸ್ಥಾನ ಪಡೆದಿಲ್ಲ.

ಇದನ್ನೂ ಓದಿ: Viral Video: ತನ್ನದೇ ನಾಪತ್ತೆ ಪೋಸ್ಟರ್ ಹಿಡಿದುಕೊಂಡು ಠಾಣೆಗೆ ಬಂದ ವ್ಯಕ್ತಿ; ದಿಗ್ಭ್ರಮೆಗೊಂಡ ಪೊಲೀಸರು!

ದಾಂಪತ್ಯ ದ್ರೋಹ ಹೆಚ್ಚುತ್ತಿದೆಯೇ?

ಈ ಕುರಿತು ಪ್ರತಿಕ್ರಿಯಿಸಿರುವ ಆಶ್ಲೇ ಮ್ಯಾಡಿಸನ್‌ನ ಮುಖ್ಯ ನಿರ್ವಹಣಾಧಿಕಾರಿ ಪಾಲ್ ಕೀಬಲ್, ಆಶ್ಲೇ ಮ್ಯಾಡಿಸನ್ ಅಂಕಿ ಅಂಶಗಳ ಪ್ರಕಾರ ಭಾರತ ಮತ್ತು ಬ್ರೆಜಿಲ್ ನಲ್ಲಿ ಇತ್ತೀಚೆಗೆ ದಾಂಪತ್ಯದಲ್ಲಿ ದ್ರೋಹ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಚ್ಚಾಗಿ ಐವತ್ತು ವರ್ಷ ಮೇಲ್ಪಟ್ಟವರು ವಿವಾಹೇತರ ಸಂಬಂಧ ಹೊಂದಿರುವುದನ್ನು ಈ ಅಂಕಿ ಅಂಶ ಬಹಿರಂಗ ಪಡಿಸಿದೆ. ವಿವಾಹೇತರ ಸಂಬಂಧ ಹೊಂದಿರುವ ನಮ್ಮ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ಈ ವರ್ಷಾಂತ್ಯದ ವೇಳೆಗೆ ಇದು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದಿದ್ದಾರೆ.