Vice President: ಬಿಜೆಪಿಯವರೇ ನೂತನ ಉಪರಾಷ್ಟ್ರಪತಿ: ನಿತೀಶ್ ಕುಮಾರ್ ಆಯ್ಕೆಯ ವದಂತಿ ತಳ್ಳಿ ಹಾಕಿದ ಪಕ್ಷ
ಮುಂದಿನ ಉಪರಾಷ್ಟ್ರಪತಿಯಾಗಿ ಬಿಜೆಪಿಯ ಹಿರಿಯ ನಾಯಕರೊಬ್ಬರು ಆಯ್ಕೆಯಾಗಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಜಗದೀಪ್ ಧನಕರ್ ಅವರ ಆಕಸ್ಮಿಕ ರಾಜೀನಾಮೆಯಿಂದ ಖಾಲಿಯಾದ ಈ ಹುದ್ದೆಗೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರಂತಹ ಮಿತ್ರಪಕ್ಷದ ನಾಯಕರನ್ನು ಪರಿಗಣಿಸುವ ಊಹಾಪೋಹಗಳನ್ನು ಬಿಜೆಪಿ ಅಲ್ಲೆಳೆದಿದೆ.

ನಿತೀಶ್ ಕುಮಾರ್

ನವದೆಹಲಿ: ಭಾರತದ ಮುಂದಿನ ಉಪರಾಷ್ಟ್ರಪತಿಯಾಗಿ (Vice President) ಬಿಜೆಪಿಯ ಹಿರಿಯ ನಾಯಕರೊಬ್ಬರು ಆಯ್ಕೆಯಾಗಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಜಗದೀಪ್ ಧನಕರ್ (Jagdeep Dhankhar) ಅವರ ಆಕಸ್ಮಿಕ ರಾಜೀನಾಮೆಯಿಂದ ಖಾಲಿಯಾದ ಈ ಹುದ್ದೆಗೆ ಜೆಡಿಯು (JDU) ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಅವರಂತಹ ಮಿತ್ರಪಕ್ಷದ ನಾಯಕರನ್ನು ಪರಿಗಣಿಸುವ ಊಹಾಪೋಹಗಳನ್ನು ಬಿಜೆಪಿ (BJP) ತಳ್ಳಿಹಾಕಿದೆ. “ಉಪರಾಷ್ಟ್ರಪತಿಯು ಪಕ್ಷದ ಸಿದ್ಧಾಂತಕ್ಕೆ ಸನಿಹವಾದವರಾಗಿರುತ್ತಾರೆ” ಎಂದು ಬಿಜೆಪಿಯ ಉನ್ನತ ನಾಯಕರೊಬ್ಬರು ಸ್ಪಷ್ಟಪಡಿಸಿದ್ದಾರೆ.
ಜೆಡಿಯು ನಾಯಕ ನಿತೀಶ್ ಕುಮಾರ್, ಕೇಂದ್ರ ಸಚಿವ ರಾಮ್‌ನಾಥ್ ಠಾಕೂರ್ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿಯಿಂದ ಊಹಾಪೋಹಗಳು ಹರಡಿದ್ದವು. ಆದರೆ ಇದು ದಿನನಿತ್ಯದ ಭೇಟಿಯಷ್ಟೇ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಉಪರಾಷ್ಟ್ರಪತಿ ಹುದ್ದೆಗೆ ಜೆಡಿಯುನೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಚುನಾವಣಾ ಆಯೋಗವು ಉಪರಾಷ್ಟ್ರಪತಿ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ರಾಜ್ಯಸಭೆ ಮತ್ತು ಲೋಕಸಭೆಯ ಚುನಾಯಿತ ಹಾಗೂ ನಾಮನಿರ್ದೇಶಿತ ಸದಸ್ಯರನ್ನೊಳಗೊಂಡ ಚುನಾವಣಾ ಕಾಲೇಜು ರಚನೆ, ರಿಟರ್ನಿಂಗ್ ಅಧಿಕಾರಿಗಳ ಆಯ್ಕೆ ಮತ್ತು ಹಿಂದಿನ ಚುನಾವಣೆಗಳ ಮಾಹಿತಿ ಸಿದ್ಧತೆಯಂತಹ ಪೂರ್ವ-ಘೋಷಣೆ ಕಾರ್ಯಗಳು ಆರಂಭವಾಗಿವೆ ಎಂದು ಆಯೋಗ ತಿಳಿಸಿದೆ. ವಿಪಕ್ಷವು ಇನ್ನೂ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. 16 ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಕೇವಲ 4 ಮಾತ್ರ ವಿರೋಧವಿಲ್ಲದೆ ನಡೆದಿವೆ. ಆದ್ದರಿಂದ ವಿಪಕ್ಷವು ಶೀಘ್ರದಲ್ಲೇ ಅಭ್ಯರ್ಥಿಯನ್ನು ಘೋಷಿಸಬಹುದು.
ಧನಕರ್ ಅವರ ಅವಧಿ 2027ರ ಆಗಸ್ಟ್‌ವರೆಗೂ ಇತ್ತು. ಆದರೆ ಆರೋಗ್ಯ ಕಾರಣದಿಂದ ರಾಜೀನಾಮೆ ನೀಡಿದ್ದಾರೆ. ಅವರು ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ವಿಪಕ್ಷ-ಬೆಂಬಲಿತ ದೋಷಾರೋಪಣೆಯನ್ನು ಒಪ್ಪಿಕೊಂಡಿದ್ದು, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಶ್ನಿಸಿದ್ದು ಮತ್ತು ವಿಪಕ್ಷಗಳಿಗೆ ಹೆಚ್ಚಿನ ಧ್ವನಿಯನ್ನು ನೀಡಿದ್ದು ಸರ್ಕಾರಕ್ಕೆ ಸಮಂಜಸವೆನಿಸಲಿಲ್ಲ. ಧನಕರ್ ರಾಜೀನಾಮೆ ನೀಡದಿದ್ದರೆ ಅವಿಶ್ವಾಸ ನಿರ್ಣಯ ತರಲು ಯೋಜನೆ ಇತ್ತು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಬಿಹಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಯುನಿಂದ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಬಹುದೆಂಬ ಊಹಾಪೋಹವನ್ನು ಬಿಜೆಪಿ ತಿರಸ್ಕರಿಸಿದೆ.