Bus Accident: ಡ್ರೈವಿಂಗ್‌ನಲ್ಲೇ ಹೃದಯಾಘಾತದಿಂದ ಚಾಲಕ ಸಾವು; ಪಾದಚಾರಿ ಮೇಲೆ ಹರಿದ ಬಸ್
ಚೆನ್ನೈನಲ್ಲಿ ಬಸ್ ಚಾಲಕನಿಗೆ ಹೃದಯಾಘಾತ ಸಂಭವಿಸಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಬಸ್ ಡಿಕ್ಕಿಯಾಗಿ 65 ವರ್ಷದ ವೃದ್ಧರೊಬ್ಬ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬಸ್ ಅನ್ನು ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತವಾಗಿತ್ತು. ವರದಿಯ ಪ್ರಕಾರ, ಘಟನೆಯ ಸಮಯದಲ್ಲಿ ಬಸ್‌ನಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ. ಆದರೆ, ಬಸ್ ರಸ್ತೆಯ ಬದಿಯ ಮೂರು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಪಾದಾಚಾರಿಯಾದ ವೃದ್ಧ ಮತ್ತು ಚಾಲಕ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
 
                                -
 Sushmitha Jain
                            
                                Jul 14, 2025 6:58 PM
                                
                                Sushmitha Jain
                            
                                Jul 14, 2025 6:58 PM
                            ಚೆನ್ನೈ: ಚೆನ್ನೈನಲ್ಲಿ (Chennai Bus Accident) ಬಸ್ ಚಾಲಕನಿಗೆ (Bus Driver) ಹೃದಯಾಘಾತ (Heart Attack) ಸಂಭವಿಸಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಬಸ್ ಡಿಕ್ಕಿಯಾಗಿ 65 ವರ್ಷದ ವೃದ್ಧರೊಬ್ಬ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬಸ್ ಅನ್ನು ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತವಾಗಿತ್ತು. ವರದಿಯ ಪ್ರಕಾರ, ಘಟನೆಯ ಸಮಯದಲ್ಲಿ ಬಸ್‌ನಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ. ಆದರೆ, ಬಸ್ ರಸ್ತೆಯ ಬದಿಯ ಮೂರು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಪಾದಾಚಾರಿಯಾದ ವೃದ್ಧ ಮತ್ತು ಚಾಲಕ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (MTC)ನ 70C ಮಾರ್ಗದ ಬಸ್, ಕೋಯಂಬೇಡು ಮತ್ತು ತಾಂಬರಂ ನಡುವೆ ಸಂಚರಿಸುತ್ತಿತ್ತು. ಭಾನುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ, ವೇದಪಾಲನಿ ಡಿಪೋದಿಂದ CMBT ಡಿಪೋಗೆ ತೆರಳುತ್ತಿದ್ದಾಗ, ಚಾಲಕನಿಗೆ ಹೃದಯಾಘಾತವಾಗಿ ಸ್ಟೀರಿಂಗ್ ಮೇಲೆ ಕುಸಿದುಬಿದ್ದಿದ್ದಾನೆ. ಇದರಿಂದ ಬಸ್ ನಿಯಂತ್ರಣ ತಪ್ಪಿ ಮೊದಲು ಪಾದಾಚಾರಿಗೆ ಡಿಕ್ಕಿ ಹೊಡೆದು, ನಂತರ ರಸ್ತೆಬದಿಯ ಕಾರುಗಳಿಗೆ ಗುದ್ದಿದೆ.
ಪ್ರತ್ಯಕ್ಷದರ್ಶಿಗಳು ತಕ್ಷಣ ಧಾವಿಸಿ, ಕಿಟಕಿಯನ್ನು ಒಡೆದು ಚಾಲಕನನ್ನು ಹೊರತೆಗೆದು ವೃದ್ಧನಿಗೆ ಸಹಾಯ ಮಾಡಿದರು. ಆದರೆ, ಆಸ್ಪತ್ರೆಗೆ ಸಾಗಿಸುವ ಮೊದಲೇ ಇಬ್ಬರೂ ಮೃತಪಟ್ಟಿದ್ದರು. ಚಾಲಕನಿಗೆ ಎದೆಯಲ್ಲಿ ತೊಂದರೆ ಕಾಣಿಸಿಕೊಂಡಿದ್ದರೂ, ಬಸ್ ಓಡಿಸಲು ನಿರ್ಧರಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: Viral News: ತಾಯಿ ಜೀವಂತವಾಗಿರುವಾಗಲೇ ಶವಪೆಟ್ಟಿಗೆ ಖರೀದಿ; ಚರ್ಚೆಗೆ ಕಾರಣವಾಯ್ತು ವಿಚಿತ್ರ ಸಂಪ್ರದಾಯ
ರಾಜಸ್ಥಾನದಲ್ಲಿ ಮತ್ತೊಂದು ದುರಂತ
ರಾಜಸ್ಥಾನದ ಕೋಟಾದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಮಿನಿಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿ 10 ಜನ ಗಾಯಗೊಂಡಿದ್ದಾರೆ. ಮೃತರನ್ನು ಗೀತಾ ಸೋನಿ (70) ಅವರ ಇಬ್ಬರು ಪುತ್ರರಾದ ಅನಿಲ್ ಸೋನಿ (48), ಬ್ರಿಜೇಶ್ ಸೋನಿ (55) ಮತ್ತು ಅಳಿಯ ಸುರೇಶ್ ಸೋನಿ (45) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ 3:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಒಂದೇ ಕುಟುಂಬದ 14-15 ಜನರು ಶನಿವಾರದ ನಿಶ್ಚಿತಾರ್ಥದ ಕಾರ್ಯಕ್ರಮದ ಬಳಿಕ ಕರೌಲಿಗೆ ವಾಪಸಾಗುತ್ತಿದ್ದಾಗ ಘಟನೆ ನಡೆದಿದೆ.
