ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian Post: ಸೆಪ್ಟೆಂಬರ್ 1ರಿಂದ ರಿಜಿಸ್ಟರ್‌ ಪೋಸ್ಟ್‌ ಯುಗಾಂತ್ಯ!

ಸುಮಾರು 50 ವರ್ಷಗಳಿಗೂ ಹೆಚ್ಚುಕಾಲದಿಂದ ಭಾರತೀಯರ ಭರವಸೆಯ ಸಂಕೇತವಾಗಿದ್ದ ರಿಜಿಸ್ಟರ್‌ ಪೋಸ್ಟ್‌ (Indian Post) ಸೇವೆಯು ಸೆಪ್ಟೆಂಬರ್ 1ರಿಂದ ಸ್ಥಗಿತಗೊಳ್ಳಲಿದೆ. ಅಂಚೆ ಇಲಾಖೆಯು ತನ್ನ ಕಾರ್ಯಾಚರಣೆಗಳನ್ನು ಆಧುನಿಕರಣಗೊಳಿಸುವ ಗುರಿಯನ್ನು ಹೊಂದಿದ್ದು, ರಿಜಿಸ್ಟರ್‌ ಪೋಸ್ಟ್‌ ಸೇವೆಯನ್ನು ಸ್ಪೀಡ್ ಪೋಸ್ಟ್‌ ಕಾರ್ಯದೊಂದಿಗೆ ವಿಲೀನಗೊಳಿಸಲಿದೆ.

ಸೆಪ್ಟೆಂಬರ್ 1ರಿಂದ ನೋಂದಾಯಿತ ಪೋಸ್ಟ್ ಯುಗಾಂತ್ಯ

ನವದೆಹಲಿ: ಸುಮಾರು 50 ವರ್ಷಗಳಿಗೂ ಹೆಚ್ಚುಕಾಲದಿಂದ ಇದ್ದ ನೋಂದಾಯಿತ ಅಂಚೆ(ರಿಜಿಸ್ಟರ್‌ ಪೋಸ್ಟ್‌) ಸೇವೆ ಸೆಪ್ಟೆಂಬರ್ 1 ರಿಂದ ಅಂತ್ಯವಾಗಲಿದೆ. ತನ್ನ ಕಾರ್ಯಾಚರಣೆಯನ್ನು ಆಧುನಿಕರಣಗೊಳಿಸುವ ಗುರಿಯನ್ನು ಹೊಂದಿರುವ ಭಾರತೀಯ ಅಂಚೆಯು (Indian Postal Department) ನೋಂದಾಯಿತ ಅಂಚೆ ಸೇವೆಯನ್ನು (Registered Post service) ಸ್ಪೀಡ್ ಪೋಸ್ಟ್‌ (Speed Post) ಕಾರ್ಯತಂತ್ರದೊಂದಿಗೆ ಏಕೀಕರಣ (integration) ಮಾಡಲಿದೆ. ಹೀಗಾಗಿ ಅದು ನೋಂದಾಯಿತ ಅಂಚೆ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ. ಈ ಮೂಲಕ ಭಾರತೀಯ ಅಂಚೆ ಸೇವೆಯು (Indian Postal service) ತನ್ನ ಒಂದು ಯುಗವನ್ನು ಅಂತ್ಯಗೊಳಿಸಲಿದೆ.

ನೋಂದಾಯಿತ ಅಂಚೆ ಸೇವೆಯು ಹಲವು ದಶಕಗಳಿಂದ ನಿಯಮಿತವಾಗಿ ಉದ್ಯೋಗ ನೇಮಕಾತಿ ಪತ್ರಗಳು, ಕಾನೂನು ಸೂಚನೆಗಳು ಮತ್ತು ಸರ್ಕಾರಿ ಪತ್ರ ವ್ಯವಹಾರಗಳನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿತ್ತು. ಇದೀಗ ಈ ಸೇವೆ ಸ್ಥಗಿತಗೊಳ್ಳಲಿದೆ. ಇದು 50 ವರ್ಷಗಳ ಯುಗದ ಅಂತ್ಯವನ್ನು ಸೂಚಿಸುತ್ತದೆ.

ಸೆಪ್ಟೆಂಬರ್ 1ರಿಂದ ಅಂಚೆ ಇಲಾಖೆಯು ತನ್ನ ಕಾರ್ಯಾಚರಣೆಗಳನ್ನು ಆಧುನಿಕರಣಗೊಳಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಸ್ಪೀಡ್ ಪೋಸ್ಟ್‌ಗೆ ಹೆಚ್ಚಿನ ಆದ್ಯತೆ ನೀಡಲಿದೆ. ಇದರಿಂದ ಹಂತಹಂತವಾಗಿ ನೋಂದಾಯಿತ ಅಂಚೆ ಸೇವೆಯನ್ನು ತೆಗೆದುಹಾಕಲಾಗುತ್ತದೆ. 50 ವರ್ಷಗಳಿಗೂ ಹೆಚ್ಚು ಕಾಲ ಜನರ ವಿಶ್ವಾಸಾರ್ಹ ಸೇವೆಯಾಗಿದ್ದ ನೋಂದಾಯಿತ ಅಂಚೆಯು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿತ್ತು. ಲಕ್ಷಾಂತರ ಭಾರತೀಯರ ಜೀವನದ ಪ್ರಮುಖ ಭಾಗವಾಗಿತ್ತು.

ಯಾಕಾಗಿ ಈ ನಿರ್ಧಾರ ?

ನೋಂದಾಯಿತ ಅಂಚೆ ಸೇವೆಯ ಬಳಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಹೀಗಾಗಿ ಇದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. 2011- 12ರಲ್ಲಿ 244.4 ಮಿಲಿಯನ್‌ನಿಂದ 2019-20ರಲ್ಲಿ 184.6 ಮಿಲಿಯನ್‌ಗೆ ನೋಂದಾಯಿತ ವಸ್ತುಗಳ ಸಂಖ್ಯೆಯಲ್ಲಿ ಶೇ. 25ರಷ್ಟು ಕುಸಿತವಾಗಿದೆ. ಅಲ್ಲದೇ ಡಿಜಿಟಲ್ ಅಳವಡಿಕೆ, ಖಾಸಗಿ ಕೊರಿಯರ್‌ಗಳು ಮತ್ತು ಇ-ಕಾಮರ್ಸ್ ಸ್ಪರ್ಧೆ ಹೆಚ್ಚಾಗಿರುವುದರಿಂದ ಭಾರತೀಯ ಅಂಚೆಯು ಇದರೊಂದಿಗೆ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಸ್ಪೀಡ್ ಪೋಸ್ಟ್‌ನೊಂದಿಗೆ ವಿಲೀನ

ನೋಂದಾಯಿತ ಅಂಚೆ ಸೇವೆಯು ಸೆಪ್ಟೆಂಬರ್ 1ರಿಂದ ಸ್ಥಗಿತಗೊಳ್ಳಲಿದ್ದು ಎಲ್ಲಾ ಇಲಾಖೆಗಳು, ನ್ಯಾಯಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಳಕೆದಾರರು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಅಂಚೆ ಇಲಾಖೆಯ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕರು ಸೂಚಿಸಿದ್ದಾರೆ. 1986 ರಿಂದ ಕಾರ್ಯನಿರ್ವಹಿಸುತ್ತಿರುವ ಸ್ಪೀಡ್ ಪೋಸ್ಟ್ ವ್ಯವಸ್ಥೆಯಡಿಯಲ್ಲಿ ಈ ಸೇವೆಯನ್ನು ವಿಲೀನಗೊಳಿಸುವುದಾಗಿ ಹೇಳಿರುವ ಅವರು ಈ ಮೂಲಕ ಟ್ರ್ಯಾಕಿಂಗ್ ನಿಖರತೆ, ವಿತರಣಾ ವೇಗ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಸ್ಪೀಡ್ ಪೋಸ್ಟ್ ದುಬಾರಿಯಾಗಿದೆ ಎಂದು ಹಲವಾರು ಕಳವಳ ವ್ಯಕ್ತಪಡಿಸಿದ್ದು, ನೋಂದಾಯಿತ ಪೋಸ್ಟ್‌ಗೆ ಆರಂಭಿಕ ಶುಲ್ಕ 25.96 ರೂ. ಮತ್ತು 20 ಗ್ರಾಂಗೆ 5 ರೂ.ಗಳಾಗಿದೆ. ಸ್ಪೀಡ್ ಪೋಸ್ಟ್ 50 ಗ್ರಾಂ ವರೆಗೆ 41 ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು ಶೇ. 20- 25ರಷ್ಟು ದುಬಾರಿಯಾಗಿದೆ. ಈ ಬೆಲೆ ವ್ಯತ್ಯಾಸವು ಗ್ರಾಮೀಣ ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಅಂಚೆ ಕಚೇರಿಗಳು ಸಂವಹನಕ್ಕೆ ನಿರ್ಣಾಯಕವಾಗಿವೆ. ಸಣ್ಣ ವ್ಯಾಪಾರಿಗಳು, ರೈತರು ಮತ್ತು ಕೈಗೆಟುಕುವ ಸೇವೆಗಳನ್ನು ಅವಲಂಬಿಸಿರುವ ಸಾಮಾನ್ಯ ನಾಗರಿಕರಿಗೆ ಇದು ಹೊರೆಯಾಗಬಹುದು. ಆದರೆ ಡಿಜಿಟಲ್ ಯುಗದಲ್ಲಿ ಬಳಕೆದಾರರ ನಿರೀಕ್ಷೆಗಳನ್ನು ಪೂರೈಸಲು ಈ ಬದಲಾವಣೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Trump's Renewed Tariff: ಮತ್ತೆ ಟ್ರಂಪ್ ಟಾರಿಫ್‌ ಬೆದರಿಕೆ; ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

ನೋಂದಾಯಿತ ಪೋಸ್ಟ್ ನಂತೆಯೇ ಸ್ಪೀಡ್ ಪೋಸ್ಟ್ ನಲ್ಲೂ ಟ್ರ್ಯಾಕಿಂಗ್ ಮತ್ತು ಸ್ವೀಕೃತಿಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಉಳಿಸಿಕೊಲ್ಲುವುದಾಗಿ ಅಂಚೆ ಇಲಾಖೆ ಭರವಸೆ ನೀಡಿದ್ದರೂ ಇದು ಹಳೆಯ ತಲೆಮಾರುಗಳು ಮತ್ತು ಗ್ರಾಮೀಣ ಜನರಲ್ಲಿ ಆತಂಕವನ್ನು ಉಂಟು ಮಾಡಿದೆ. ಯಾಕೆಂದರೆ ಅವರಿಗೆ ನೋಂದಾಯಿತ ಪೋಸ್ಟ್ ಭರವಸೆಯ ಸಂಕೇತವಾಗಿತ್ತು.