ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fire Accident: ಜೈಪುರ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ; ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಲಿಯಾದ್ರಾ 9 ಮಂದಿ?

ಆಸ್ಪತ್ರೆಯಲ್ಲಿ ಬೆಂಕಿ ಉಂಟಾಗಿ ಒಂಬತ್ತು ಮಂದಿ ಸಾವನ್ನಪ್ಪಿದ ಘಟನೆ ಜೈಪುರದ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಯಲ್ಲಿ ನಡೆದಿದೆ. ಬಳಿಕ ಅಗ್ನಿ ಅನಾಹುತದಲ್ಲಿ ಮೃತಪಟ್ಟವರ ಸಂಬಂಧಿಕರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದೆ.

ಜೈಪುರ ಆಸ್ಪತ್ರೆಯಲ್ಲಿ ಬೆಂಕಿ: ಒಂಬತ್ತು ಮಂದಿ ಸಾವು

-

ಜೈಪುರ: ರಾಜಸ್ಥಾನದ ಆಸ್ಪತ್ರೆಯೊಂದರಲ್ಲಿ ಭಾನುವಾರ ಸಂಜೆ ಬೆಂಕಿ (Fire Accident) ಕಾಣಿಸಿಕೊಂಡು 9 ಮಂದಿ ಮೃತಪಟ್ಟಿದ್ದು, ದುರಂತಕ್ಕೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಜೈಪುರದ ಸವಾಯಿ ಮಾನ್ ಸಿಂಗ್ (Jaipur Sawai Man Singh Hospital) ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ದುರಂತಕ್ಕೆ ಐಸಿಯುನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದೆಯಾದರೂ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಪ್ರತ್ಯಕ್ಷದರ್ಸಿಗಳು ದೂರಿದ್ದಾರೆ. ಘಟನೆಯ ತನಿಖೆಗೆ ರಾಜಸ್ಥಾನ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದೆ.

ಆಸ್ಪತ್ರೆಯಲ್ಲಿ ಸುರಕ್ಷತಾ ಕ್ರಮಗಳು ಇಲ್ಲದೇ ಇದ್ದುದರಿಂದ ಭಾರಿ ಅನಾಹುತ ಉಂಟಾಗಿದೆ. ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಅದನ್ನು ನಂದಿಸಲು ಸೂಕ್ತ ಉಪಕರಣವಿರಲಿಲ್ಲ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ಅಗ್ನಿ ದುರಂತದ ವಿಡಿಯೊ:



ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೃತರ ಸಂಬಂಧಿ ಪೂರಣ್ ಸಿಂಗ್, ಬೆಂಕಿಯ ಕಿಡಿ ಇದ್ದಾಗ ಅದರ ಪಕ್ಕದಲ್ಲೇ ಸಿಲಿಂಡರ್ ಇತ್ತು. ಐಸಿಯುನಾದ್ಯಂತ ಹೊಗೆ ಹರಡಿತು. ಎಲ್ಲರೂ ಭಯಭೀತರಾಗಿ ಓಡಿಹೋದರು. ಕೆಲವರು ತಮ್ಮವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ ನನ್ನ ಸಂಬಂಧಿ ಒಬ್ಬಂಟಿಯಾಗಿ ಉಳಿದಿದ್ದರು. ಅನಿಲ ಮತ್ತಷ್ಟು ಹರಡುತ್ತಿದ್ದಂತೆ ಗೇಟ್‌ಗಳನ್ನು ಮುಚ್ಚಲಾಯಿತು. ಬೆಂಕಿ ನಂದಿಸಲು ಉಪಕರಣಗಳ ಕೊರತೆ ಇತ್ತು ಎಂದು ತಿಳಿಸಿದರು.

ಆಸ್ಪತ್ರೆ ವಿರುದ್ಧ ಪ್ರತಿಭಟನೆ

ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರು ಆಸ್ಪತ್ರೆ ಆಡಳಿತ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಐಸಿಯುನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಬಗ್ಗೆ ಮಾಹಿತಿ ಗೊತ್ತಾದರೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತನಿಖಾ ಸಮಿತಿ ರಚನೆ

ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದೆಯಾದರೂ ಈ ಕುರಿತು ತನಿಖೆಗೆ ರಾಜಸ್ಥಾನ ಸರ್ಕಾರ ಸೋಮವಾರ ಆರು ಸದಸ್ಯರ ಸಮಿತಿಯನ್ನು ರಚಿಸಿದೆ.

ಇದನ್ನೂ ಓದಿ: Cuttack Violence: ಕಟಕ್ ನಗರದಲ್ಲಿ ಕರ್ಫ್ಯೂ: ಹಿಂಸಾಚಾರದ ಬಳಿಕ ಇಂಟರ್‌ನೆಟ್‌ ಕಡಿತ

ವೈದ್ಯಕೀಯ ಇಲಾಖೆಯ ಆಯುಕ್ತ ಇಕ್ಬಾಲ್ ಖಾನ್ ಅಧ್ಯಕ್ಷತೆಯಲ್ಲಿ ರಾಜಸ್ಥಾನ ವೈದ್ಯಕೀಯ ಶಿಕ್ಷಣ ಸೊಸೈಟಿ (ರಾಜ್‌ಎಂಇಎಸ್)ಯ ಆಸ್ಪತ್ರೆ ಆಡಳಿತದ ಹೆಚ್ಚುವರಿ ನಿರ್ದೇಶಕ ಮುಖೇಶ್ ಕುಮಾರ್ ಮೀನಾ, ರಾಜ್‌ಎಂಇಎಸ್‌ನ ಮುಖ್ಯ ಎಂಜಿನಿಯರ್ ಚಂದನ್ ಸಿಂಗ್ ಮೀನಾ, ಪಿಡಬ್ಲ್ಯುಡಿ ಎಲೆಕ್ಟ್ರಿಕಲ್ ಮುಖ್ಯ ಎಂಜಿನಿಯರ್ ಅಜಯ್ ಮಾಥುರ್, ಎಸ್‌ಎಂಎಸ್ ವೈದ್ಯಕೀಯ ಕಾಲೇಜಿನ ಹೆಚ್ಚುವರಿ ಪ್ರಾಂಶುಪಾಲರು ಮತ್ತು ಜೈಪುರ ಮುನ್ಸಿಪಲ್ ಕಾರ್ಪೊರೇಷನ್‌ನ ಮುಖ್ಯ ಅಗ್ನಿಶಾಮಕ ಅಧಿಕಾರಿ ಆರ್‌.ಕೆ. ಜೈನ್ ಸಮಿತಿ ಸದಸ್ಯರು.