ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆದೇಶ ನೀಡುವಾಗ ಕಣ್ಣೀರಿಟ್ಟ ನ್ಯಾಯಮೂರ್ತಿ; ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ

13 ವರ್ಷಗಳ ಹಿಂದೆ ಬಿದ್ದು ಮೆದುಳಿಗೆ ತೀವ್ರ ಗಾಯಗಳಾಗಿ ಕೋಮಾದಲ್ಲಿದ್ದ 32 ವರ್ಷದ ಹರೀಶ್ ರಾಣಾ ಅವರಿಗೆ ಸುಪ್ರೀಂ ಕೋರ್ಟ್‌ ದಯಾಮರಣವನ್ನು ಅನುಮತಿಸಿದೆ. ದೇಶದಲ್ಲಿ ನ್ಯಾಯಾಲಯ ಆದೇಶಿಸಿದ ನಿಷ್ಕ್ರಿಯ ದಯಾಮರಣ ಪ್ರಕರಣ ಇದಾಗಿದೆ. ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಕೆವಿ ವಿಶ್ವನಾಥನ್ ಪೀಠ ಅನುಮತಿ ನೀಡಿತು. ಐತಿಹಾಸಿಕ ತೀರ್ಪನ್ನು ನೀಡುವಾಗ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಅವರು ಭಾವುಕರಾಗಿ ಸ್ವಲ್ಪ ಹೊತ್ತು ಕಣ್ಣೀರು ಹಾಕಿದರು.

ಆದೇಶ ನೀಡುವಾಗ ಕಣ್ಣೀರಿಟ್ಟ ನ್ಯಾಯಮೂರ್ತಿ; ಹರೀಶ್ ರಾಣಾ ದಯಾಮರಣಕ್ಕೆ ಅನುಮತಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 11, 2026 2:08 PM

ನವದೆಹಲಿ: 13 ವರ್ಷಗಳ ಹಿಂದೆ ಬಿದ್ದು ಮೆದುಳಿಗೆ ತೀವ್ರ ಗಾಯಗಳಾಗಿ ಕೋಮಾದಲ್ಲಿದ್ದ 32 ವರ್ಷದ ಹರೀಶ್ ರಾಣಾ (Harish Rana) ಅವರಿಗೆ ಸುಪ್ರೀಂ ಕೋರ್ಟ್‌ (Supreme Court) ದಯಾಮರಣವನ್ನು (verdict Case) ಅನುಮತಿಸಿದೆ. ದೇಶದಲ್ಲಿ ನ್ಯಾಯಾಲಯ ಆದೇಶಿಸಿದ ನಿಷ್ಕ್ರಿಯ ದಯಾಮರಣ ಪ್ರಕರಣ ಇದಾಗಿದೆ. ನಿಷ್ಕ್ರಿಯ ದಯಾಮರಣ ಕಾನೂನುಬದ್ಧತೆಯನ್ನು ಗುರುತಿಸಿದ 2018 ರ ಸುಪ್ರೀಂ ಕೋರ್ಟ್ ತೀರ್ಪಿನ ಹಲವಾರು ಅಂಶಗಳನ್ನು ಸ್ಪಷ್ಟಪಡಿಸಿದ ತೀರ್ಪು, ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಕೆವಿ ವಿಶ್ವನಾಥನ್ ಪೀಠ ಅನುಮತಿ ನೀಡಿತು. ಐತಿಹಾಸಿಕ ತೀರ್ಪನ್ನು ನೀಡುವಾಗ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಅವರು ಭಾವುಕರಾಗಿ ಸ್ವಲ್ಪ ಹೊತ್ತು ಕಣ್ಣೀರು ಹಾಕಿದರು.

ಪೀಠ ಇಂತಹ ಸಂದರ್ಭಗಳಲ್ಲಿ ಕೇಂದ್ರ ಪ್ರಶ್ನೆ ಸಾವು ರೋಗಿಯ ಹಿತಾಸಕ್ತಿಯಲ್ಲಿದೆಯೇ ಎಂಬುದು ಅಲ್ಲ, ಆದರೆ ಜೀವ ಉಳಿಸುವ ಚಿಕಿತ್ಸೆಯನ್ನು ಮುಂದುವರಿಸುವುದು ರೋಗಿಯ ಹಿತಾಸಕ್ತಿಯನ್ನು ಪೂರೈಸುತ್ತದೆಯೇ ಎಂಬುದು ಎಂದು ಅಭಿಪ್ರಾಯಪಟ್ಟಿತು. ವೈದ್ಯಕೀಯವಾಗಿ ನೀಡಲಾಗುವ ಪೌಷ್ಠಿಕಾಂಶವು ವೈದ್ಯಕೀಯ ಚಿಕಿತ್ಸೆಯ ಒಂದು ರೂಪವಾಗಿ ಅರ್ಹತೆ ಪಡೆಯುತ್ತದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ರೋಗಿಯನ್ನು ಪರೀಕ್ಷಿಸುವ ವೈದ್ಯಕೀಯ ಮಂಡಳಿಗಳು ಚೇತರಿಕೆಯ ನಿರೀಕ್ಷೆ ಅರ್ಥಪೂರ್ಣವಲ್ಲ ಎಂದು ತೀರ್ಮಾನಿಸಿದರೆ ಹಾಗೂ ಶಿಫಾರಸು ಮಾಡಿದರೆ ಮಾತ್ರ ಅಂತಹ ಮೆಡಿಕಲ್ ಸಪೋರ್ಟ್ ಹಿಂಪಡೆಯಬಹುದು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಪೀಠ ಹೇಳಿದ್ದೇನು?

ಹರೀಶ್‌ ರಾಣಾ ಅವರು ಉಜ್ವಲ ಯುವಕನಾಗಿದ್ದರು. ಮಹಡಿ ಮೇಲಿನಿಂದ ಬಿದ್ದು ಉಂಟಾದ ಮಿದುಳಿನ ಗಾಯಗಳು ಅವನನ್ನು ನಿಷ್ಕ್ರಿಯ ಸ್ಥಿತಿಯಲ್ಲಿ ಉಳಿಸಿ ಬಿಟ್ಟವು ಎಂದು ಗಮನಿಸಿತು. ನ್ಯಾಯಾಲಯದ ಮುಂದೆ ಸಲ್ಲಿಸಲಾದ ವೈದ್ಯಕೀಯ ವರದಿಗಳು ಕಳೆದ 13 ವರ್ಷಗಳಿಂದ ಅವನ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯನ್ನು ತೋರಿಸಲಿಲ್ಲ. ಇದೀಗ ಅವರು ಸಂಪೂರ್ಣವಾಗಿ ಬೇರೆಯವರ ಮೇಲೆ ಅವಂಬಿತರಾಗಿದ್ದಾರೆ ಹೀಗಾಗಿ ದಯಾಮರಣಕ್ಕೆ ಒಪ್ಪಿಗೆ ನೀಡಬಹುದು ಎಂದು ಕೋರ್ಟ್‌ ಹೇಳಿದೆ. ರಾಣಾ ಅವರ ಕುಟುಂಬವು ವರ್ಷಗಳಿಂದ ಅವರನ್ನು ನೋಡಿಕೊಳ್ಳುವಲ್ಲಿ ನಡೆಸಿದ ದೀರ್ಘ ಹೋರಾಟವನ್ನು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದ ಉದ್ದಕ್ಕೂ ಪೋಷಕರು ಮತ್ತು ಒಡಹುಟ್ಟಿದವರು ಅವರನ್ನು ನೋಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಒದಗಿಸಲು ನೀತಿ ರೂಪಿಸಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದ ರಾಣಾ, ಆಗಸ್ಟ್ 20, 2013 ರಂದು ತಮ್ಮ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ತೀವ್ರ ಗಾಯಗಳಾಗಿ ಸಂಪೂರ್ಣ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಅಂದಿನಿಂದ, ಅವರು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಪೋಷಣೆಗಾಗಿ ಗ್ಯಾಸ್ಟ್ರೋಸ್ಟೊಮಿ ಟ್ಯೂಬ್ ಅನ್ನು ಅವಲಂಬಿಸಿದ್ದಾರೆ.