ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಪುನರಾಗಮನ; ಮನೆಗಳ ಪುನರ್ ನಿರ್ಮಾಣ ಆರಂಭ

ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಪುನರಾಗಮನ; ಮನೆಗಳ ಪುನರ್ ನಿರ್ಮಾಣ ಆರಂಭ

ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಪುನರಾಗಮನ; ಮನೆಗಳ ಪುನರ್ ನಿರ್ಮಾಣ ಆರಂಭ

-

Profile
Vishwavani News Mar 31, 2022 6:01 PM
image-64a4dc4e-9145-48f4-bb71-5f4bbb21ba5d.jpg
image-60c2769a-cff2-44f3-aea1-6aafec0d82dd.jpg
image-cb64bbf3-8dd0-4070-b59c-e10d2ce48df8.jpg
ಅನಂತನಾಗ್: ದಶಕಗಳ ಬಳಿಕ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಪುನರಾಗಮನ ಆರಂಭವಾಗು ತ್ತಿದೆ. ಕಾಶ್ಮೀರಿ ಪಂಡಿತರು ತಾವು ತೊರೆದು ಹೋಗಿದ್ದ ಮನೆಗಳ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಎಂಭತ್ತರ ದಶಕದ ಉತ್ತರಾರ್ಧದಲ್ಲಿ ಉಗ್ರಗಾಮಿಗಳ ಸ್ಫೋಟ, ಮತ್ತು ಕೋಮು ಸಂಘರ್ಷದ ನಂತರ ಕಾಶ್ಮೀರದಿಂದ ಹಿಂದೂಗಳ ವಲಸೆಯ ಕುರಿತು ದೇಶಾ ದ್ಯಂತ ಚರ್ಚೆ ನಡೆಯುತ್ತಿದ್ದರೂ, ಅರ್ಧ ಡಜನ್ ಕಾಶ್ಮೀರಿ ಪಂಡಿತರ ಕುಟುಂಬ ಗಳು ಅನಂತನಾಗ್ ಜಿಲ್ಲೆಗೆ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದು, ದಕ್ಷಿಣ ಕಾಶ್ಮೀರದ ಮಟ್ಟಾನ್‌ನ ಹಳ್ಳಿಯಲ್ಲಿ ಮನೆಗಳನ್ನು ನಿರ್ಮಿಸುತ್ತಿವೆ. ಕಾಶ್ಮೀರದ ಹಾಲಿ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆಯ ನಂತರ, ಈ ಕುಟುಂಬಗಳು ಕಣಿವೆಯಲ್ಲಿ ತಮ್ಮ ತವರುಗಳಿಗೆ ಮರಳಲು ಉತ್ಸುಕರಾಗಿದ್ದಾರೆ. ಎರಡು ಅಂತಸ್ತಿನ ಮನೆ ನಿರ್ಮಿಸುತ್ತಿರುವ ಪಂಡಿತ್ ಕಾಕಾಜಿ ಅಭಿಪ್ರಾಯ ಹಂಚಿ ಕೊಂಡಿದ್ದು, ನಿರ್ಮಾಣ ಕಾರ್ಯವು 2016 ರಲ್ಲಿ ಪ್ರಾರಂಭವಾಯಿತು. ಪ್ರಸ್ತುತ ಕೆಲಸದ ಮೇಲ್ವಿಚಾರಣೆಗಾಗಿ ಹತ್ತಿರದ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿ ದ್ದಾರೆ. ಮನೆ ನಿರ್ಮಾಣ ಈ ವರ್ಷ ಪೂರ್ಣಗೊಳ್ಳಲಿದೆ ಎಂದು ಅಂದುಕೊಂಡಿದ್ದೇನೆ, 2022 ರಲ್ಲಿ ಗೃಹ ಪ್ರವೇಶಿಸಲು ಉದ್ದೇಶಿಸಿದ್ದೇವೆ ಎಂದು ಹೇಳಿದರು. 'ನನಗೆ ಯಾವುದೇ ಬೆದರಿಕೆ ಇಲ್ಲ. ನಾವು ಗ್ರಾಮದಲ್ಲಿ ಸಂಪೂರ್ಣ ಕೋಮು ಸೌಹಾರ್ದತೆಯನ್ನು ಹೊಂದಿ ದ್ದೇವೆ ಎಂದು ಹೇಳಿದರು.  ಅನೇಕ ಪಂಡಿತ್ ಕುಟುಂಬಗಳು ಗ್ರಾಮದಲ್ಲಿ ತಮ್ಮ ಮನೆಗಳನ್ನು ನಿರ್ಮಿಸಿ ಕೊಂಡು ವಾಸಿಸುತ್ತಿದ್ದಾರೆ ಎಂದು ಕಾಕಾಜಿ ಹೇಳಿ ದರು. ಅವರ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ಅವರ ಕಾಶ್ಮೀರಿ ಮುಸ್ಲಿಂ ನೆರೆಹೊರೆಯವರು, ಪಂಡಿತರಿಗೆ ಎಲ್ಲಾ ವ್ಯವಸ್ಥೆ ಗಳನ್ನು ಮಾಡುವ ಮೂಲಕ ತಮ್ಮ ಮನೆಗಳನ್ನು ಪುನರ್ನಿ ರ್ಮಿಸಲು ಸಹಾಯ ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಯ ವನ್ನೂ ಮುಸ್ಲಿಮರೇ ಮಾಡುತ್ತಿದ್ದಾರೆ ಎಂದು ಕಾಕಾಜಿ ಹೇಳಿದರು. ಸ್ಥಳೀಯ ಮುಸ್ಲಿಮರು ಕೂಡ ಪಂಡಿತರ ಮರಳುವಿಕೆಯನ್ನು ಪೂರ್ಣ ಹೃದಯದಿಂದ ಸ್ವಾಗತಿಸುತ್ತಿದ್ದಾರೆ. ಕಾಶ್ಮೀರದ ಪರಿಸ್ಥಿತಿ ಯು 1990 ರ ದಶಕದಿಂದ ಬಹಳ ಬದಲಾಗಿದೆ ಮತ್ತು ವಲಸಿಗ ಪಂಡಿತರ ಮರಳುವಿಕೆಗೆ ಅನುಕೂಲಕರವಾಗಿದೆ ಎಂದು ಕುಮಾರ್ ಹೇಳಿದರು.