Viral Video: ಶಿವಾಜಿ ಮಹಾರಾಜರ ಗೆಟ್‌ಅಪ್‌ನಲ್ಲಿ ಬಂದು ಸೆಕ್ಯೂರಿಟಿ ಗಾರ್ಡ್ ಜೊತೆ ವಾಗ್ಯುದ್ಧ! ಈತನ ಹುಚ್ಚಾಟವನ್ನೊಮ್ಮೆ ನೋಡಿ
Man Dressed as Shivaji Maharaj: ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರಂತೆ ವೇಷ ಧರಿಸಿದ ವ್ಯಕ್ತಿಯೊಬ್ಬರು ಮಹಾರಾಷ್ಟ್ರದ ವಸೈ ಕೋಟೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದ ನಡೆಸಿದರು. ಮರಾಠಿ ಭಾಷೆ ಯಾಕೆ ಮಾತನಾಡುತ್ತಿಲ್ಲ, ಯಾಕೆ ಕಲಿಯಲಿಲ್ಲ ಎಂದು ಪ್ರಶ್ನಿಸಿದರು. ಇದರ ವಿಡಿಯೊ ವೈರಲ್ ಆಗಿದೆ.

-

ಮುಂಬೈ: ದಕ್ಷಿಣ ಭಾರತದಲ್ಲಿದ್ದ ಭಾಷಾ ಸಂಘರ್ಷ ಇದೀಗ ಮಹಾರಾಷ್ಟ್ರಕ್ಕೂ ವ್ಯಾಪಿಸಿದೆ. ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರಂತೆ (Chhatrapati Shivaji Maharaj) ವೇಷ ಧರಿಸಿದ ವ್ಯಕ್ತಿಯೊಬ್ಬರು ವಸೈ ಕೋಟೆಯಲ್ಲಿ (Vasai Fort) ಭದ್ರತಾ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದ ನಡೆಸಿದರು. ಫೋಟೋಶೂಟ್ ಮಾಡಲು ಭದ್ರತಾ ಸಿಬ್ಬಂದಿ ಅನುಮತಿ ನೀಡಲಿಲ್ಲ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ ಆವರಣದಿಂದ ಹೊರಹೋಗುವಂತೆ ಹೇಳಿದರು. ಇದು ಶಿವಾಜಿ ಮಹಾರಾಜರಂತೆ ವೇಷ ಧರಿಸಿದ ವ್ಯಕ್ತಿಗೆ ಕೋಪ ತರಿಸಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ವರದಿಗಳ ಪ್ರಕಾರ, ಆ ವ್ಯಕ್ತಿ ಛತ್ರಪತಿ ಶಿವಾಜಿ ಮಹಾರಾಜರನ್ನು ಹೋಲುವ ಸಾಂಪ್ರದಾಯಿಕ ಉಡುಪನ್ನು ಧರಿಸಿ ವಿಡಿಯೊ ಚಿತ್ರೀಕರಿಸಲು ವಸಾಯಿ ಕೋಟೆಗೆ ಬಂದರು. ಆದರೆ, ಭದ್ರತಾ ಸಿಬ್ಬಂದಿ ಅನುಮತಿಯಿಲ್ಲದೆ ಚಿತ್ರೀಕರಣ ಮಾಡದಂತೆ ಅವನನ್ನು ತಡೆದರು. ನಂತರ ವಾಗ್ವಾದ ಪ್ರಾರಂಭವಾಗಿದೆ. ಭದ್ರತಾ ಸಿಬ್ಬಂದಿ ಹಿಂದಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಮರಾಠಿ ಗೊತ್ತಿಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಕ್ಕೆ, ಛತ್ರಪತಿ ಶಿವಾಜಿ ವೇಷಭೂಷಣ ಧರಿಸಿದ್ದ ವ್ಯಕ್ತಿ ಕೋಪಗೊಂಡಿದ್ದಾರೆ.
ನಾನು ನಿಮ್ಮೊಂದಿಗೆ ಗೌರವದಿಂದ ಹಿಂದಿಯಲ್ಲಿ ಮಾತನಾಡಿದೆ. ನೀವು ಮರಾಠಿ ಮಾತನಾಡುವ ಮೂಲಕ ಮಹಾರಾಷ್ಟ್ರವನ್ನು ಗೌರವಿಸಬೇಕು. ನೀವು ಇಲ್ಲಿ ಎಷ್ಟು ದಿನದಿಂದ ಕೆಲಸ ಮಾಡುತ್ತಿದ್ದೀರಿ? ಎಂದು ಆ ವ್ಯಕ್ತಿಯು ವಿಚಾರಿಸಿದ್ದಾರೆ. ಇದಕ್ಕೆ ಸೆಕ್ಯೂರಿಟಿ ಗಾರ್ಡ್, ತಾನು ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಶೀಘ್ರದಲ್ಲೇ ಮರಾಠಿ ಕಲಿಯುತ್ತೇನೆ ಎಂದು ಉತ್ತರಿಸಿದನು. ಆದರೆ, ವೇಷಭೂಷಣ ಧರಿಸಿದ್ದ ಆ ವ್ಯಕ್ತಿಯು ಭದ್ರತಾ ಸಿಬ್ಬಂದಿಯನ್ನು ಆಕ್ರಮಣಕಾರಿಯಾಗಿ ಪ್ರಶ್ನಿಸುತ್ತಲೇ ಇದ್ದನು. ನೀವು ಮರಾಠಿ ಏಕೆ ಕಲಿಯಲಿಲ್ಲ? ಎಂದು ಪ್ರಶ್ನಿಸಿದ್ದಾನೆ.
ವಿಡಿಯೊ ವೀಕ್ಷಿಸಿ:
This person dressed as Chhatrapati Shivaji Maharaj, is harassing a security guard for not speaking Marathi. regardless of the poor, uneducated guard’s shortcomings, he should have at least upheld the respect of Shivaji Maharaj. pic.twitter.com/sjN1sq8INr
— Berlin 🚩 (@Toxicity_______) October 22, 2025
ಮರಾಠಿ ತಿಳಿಯದೆ ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯನ್ನು ಅಗೌರವಿಸಿದ್ದಾರೆ ಎಂದು ಅವರು ಆರೋಪಿಸಿದರು. ನಿಮಗೆ ಮರಾಠಿ ಗೊತ್ತಿಲ್ಲ. ಆದರೆ, ನೀವು ಇಲ್ಲಿ ಬುದ್ಧಿವಂತರಾಗಿ ವರ್ತಿಸುತ್ತಿದ್ದೀರಿ ನಿಮ್ಮ ಕೆಲಸವನ್ನು ಕಳೆದುಕೊಳ್ಳಬಹುದು ಎಂದು ಅವರು ಎಚ್ಚರಿಸಿದರು. ಈ ವಿಡಿಯೊ ಶೀಘ್ರದಲ್ಲೇ ವೈರಲ್ ಆಗಿದ್ದು, ಕೆಲವರು ಆ ವ್ಯಕ್ತಿ ಶಿವಾಜಿ ಮಹಾರಾಜರ ತತ್ವಗಳಿಗೆ ವಿರುದ್ಧವಾಗಿ ಸೆಕ್ಯೂರಿಟಿ ಗಾರ್ಡ್‌ಗೆ ಕಿರುಕುಳ ನೀಡಿದ್ದಾನೆ ಎಂದು ಟೀಕಿಸಿದರೆ, ಇನ್ನು ಕೆಲವರು ಭದ್ರತಾ ಸಿಬ್ಬಂದಿಗೆ ಪಾಠ ಕಲಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: Viral News: ಇಲ್ಲಿ ಆಫೀಸ್ ಮೀಟಿಂಗ್ ಬೆತ್ತಲೆಯಾಗಿ ನಡೆಯುತ್ತದೆ; ವಿಶ್ವದಲ್ಲೇ ಸಂತೋಷದ ಜನರಿರುವ ದೇಶವಂತೆ ಇದು!
ಆತನ ರೀಲ್ ಚಿತ್ರೀಕರಣ ಮಾಡುವುದನ್ನು ತಡೆದಿದ್ದಕ್ಕಾಗಿ ಆ ಗಾರ್ಡ್ ತಪ್ಪು ಮಾಡಿದ್ದಾನೆ. ಆದರೆ ಏಜೆನ್ಸಿಯಿಂದ ಅಲ್ಲಿಗೆ ನೇಮಕಗೊಂಡಿರುವ ಬಡ ವ್ಯಕ್ತಿಯಿಂದ ಮರಾಠಿ ಭಾಷೆ ಕಲಿಯುವಂತೆ ಒತ್ತಾಯಿಸಿ ಮತ್ತು ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದು ಸರಿಯಲ್ಲ. ಮಹಾರಾಷ್ಟ್ರದಲ್ಲಿ ಮರಾಠಿ ಹುಡುಗರನ್ನು ಮಾತ್ರ ಹುದ್ದೆಗೆ ನೇಮಿಸಿ ನೋಡೋಣ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದರು.
ಛತ್ರಪತಿ ಶಿವಾಜಿ ಮಹಾರಾಜರಂತೆ ಉಡುಗೆ ತೊಡುವುದು ಎಂದರೆ ನೀವು ಅವರ ಮೌಲ್ಯಗಳನ್ನು ಅನುಸರಿಸಬೇಕು. ಶಿವಾಜಿ ಮಹಾರಾಜರು ಬಡವರನ್ನು ಅಥವಾ ಶಕ್ತಿಹೀನರನ್ನು ಎಂದಿಗೂ ಅಗೌರವಿಸಲಿಲ್ಲ. ಶಿವಾಜಿ ಮಹಾರಾಜರು ಅವರನ್ನು ರಕ್ಷಿಸುವಲ್ಲಿ ಹೆಸರುವಾಸಿಯಾಗಿದ್ದರು. ಈ ಮಧ್ಯೆ, ಐತಿಹಾಸಿಕ ಸ್ಥಳದಲ್ಲಿ ಆ ವ್ಯಕ್ತಿಗೆ ಪ್ರವೇಶ ನಿರಾಕರಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭಾರತೀಯ ಪುರಾತತ್ವ ಸಂಘ (ASI) ಬುಧವಾರ ಭರವಸೆ ನೀಡಿದೆ.