Wedding Jewel Fashion 2025: ವೆಡ್ಡಿಂಗ್ ಸೀಸನ್ನಲ್ಲಿ ಟ್ರೆಡಿಷನಲ್ ಜ್ಯುವೆಲರಿಗಳಿಗೆ ಹೆಚ್ಚಾದ ಆದ್ಯತೆ
Traditional Jewellery: ವೆಡ್ಡಿಂಗ್ ಸೀಸನ್ನಲ್ಲಿ ಟ್ರೆಡಿಷನಲ್ ಜ್ಯುವೆಲರಿಗಳಿಗೆ ಆದ್ಯತೆ ಹೆಚ್ಚಾಗಿದೆ. ಮದುಮಗಳು ಧರಿಸುವ ಜ್ಯುವೆಲರಿ ಹೊರತುಪಡಿಸಿ, ಇತರೆ ಮಹಿಳೆಯರು ಧರಿಸಬಹುದಾದ ನಾನಾ ಬಗೆಯ ಸೆಟ್ ಜ್ಯುವೆಲರಿಗಳು ಇಂದು ಪ್ರಚಲಿತದಲ್ಲಿವೆ. ಈ ಕುರಿತಂತೆ ಮಾಹಿತಿ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್ -


ವೆಡ್ಡಿಂಗ್ ಸೀಸನ್ಗೆ ಹೊಂದುವಂತಹ ಟ್ರೆಡಿಷನಲ್ ಆಭರಣಗಳಿಗೆ ಆದ್ಯತೆ ನೀಡುವುದು ಇಂದು ಹೆಚ್ಚಾಗಿದೆ. ಹೌದು. ಮದುಮಗಳು ಧರಿಸುವ ಜ್ಯುವೆಲರಿ ಹೊರತುಪಡಿಸಿ, ಇತರೆ ಮಹಿಳೆಯರು ಧರಿಸಬಹುದಾದ ನಾನಾ ಬಗೆಯ ಸೆಟ್ ಜ್ಯುವೆಲರಿಗಳು ಇಂದು ಪ್ರಚಲಿತದಲ್ಲಿವೆ. ಅದು ಬಂಗಾರದ್ದಾಗಿರಬಹುದು, ಇಲ್ಲವೇ ಅದು ಇಮಿಟೇಷನ್ನದ್ದಾಗಬಹುದು ಎನ್ನುತ್ತಾರೆ ಡಿಸೈನರ್ಸ್.

ಮದುವೆ ಮನೆಯಲ್ಲಿ ಹೆಣ್ಣುಮಕ್ಕಳ ಜ್ಯುವೆಲರಿ ಪ್ರೇಮ
ಮದುವೆಗಳಲ್ಲಿ ಮದುಮಗಳ ಗ್ರ್ಯಾಂಡ್ ಬ್ರೈಡಲ್ ಸೆಟ್ನಲ್ಲಿ ಕಾಣಿಸಿಕೊಂಡರೆ, ಇತರೇ ಹೆಣ್ಣುಮಕ್ಕಳು ಕೂಡ ನಾನಾ ಬಗೆಯ ಟ್ರೆಡಿಷನಲ್ ಸೆಟ್ ಜ್ಯುವೆಲರಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವನ್ನು ಧರಿಸಿದಾಗ ಉಡುಪಿಗೆ ಮತ್ತಷ್ಟು ಮೆರುಗು ದೊರೆಯುತ್ತದೆ. ಇನ್ನು, ಟ್ರೆಡಿಷನಲ್ ಸೀರೆಗಳಿಗೆ ಗೋಲ್ಡ್ ಮಣಿ ಸರಗಳು, ಎರಡೆಳೆ ಮೂರೆಳೆ ಚೈನ್, ನೆಕ್ಲೇಸ್ಗಳನ್ನು ಧರಿಸುವುದು ಸಾಮಾನ್ಯವಾಗಿದೆ. ಬಾರ್ಡರ್ ಹೊಂದಿದ ಪ್ಲೇನ್ ಸೀರೆಗಳಿಗೆ ಪರ್ಲ್, ಜೇಡ್, ಕೋರಲ್ ಚೈನ್ ಮ್ಯಾಚ್ ಮಾಡಲಾಗುತ್ತಿದೆ. ಗಾಗ್ರಾ, ಲೆಹೆಂಗಾ, ಸೆಲ್ವಾರ್, ಅನಾರ್ಕಲಿಯಂತಹ ಡ್ರೆಸ್ಗಳಿಗೆ ಸ್ವಲ್ಪ ಗ್ರಾಂಡ್ ಲುಕ್ ನೀಡುವ ಕ್ರಿಸ್ಟಲ್, ಗೋಲ್ಡ್ ಬೀಡ್ಸ್ ಧರಿಸುವುದು ಕಂಡು ಬರುತ್ತಿದೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ಗಳು.

ಟ್ರೆಡಿಷನಲ್ ಅಲಂಕಾರ
ಕಿವಿಗೆ ಎಥ್ನಿಕ್ ಲುಕ್ ನೀಡುವ ದೊಡ್ಡ ಸ್ಟೋನ್ ಸ್ಟಡ್ಸ್, ಗೋಲ್ಡ್ ಜುಮಕಿ, ಸ್ಟೋನ್ ಕ್ರಿಸ್ಟಲ್, ಕೋರ್, ಪರ್ಲ್, ಜೇಡ್ ಬಳಸಿ ವಿನ್ಯಾಸಗೊಳಿಸಿದ ಜುಮುಕಿ, ಹ್ಯಾಂಗಿಂಗ್ಸ್, ಬಗೆಬಗೆಯ ಮಾಟಿ ಗಳು, ಬಿಗ್ ನೋಸ್ ಪಿನ್ ಹಾಗೂ ನೋಸ್ ರಿಂಗ್ ಚೈನ್ಗಳು ಚಾಲ್ತಿಯಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.

ಭಾಗವಹಿಸುವ ಹೆಣ್ಣುಮಕ್ಕಳಿಗೂ ಬ್ರೈಡಲ್ ಸೆಟ್
ಕೈಗಳಿಗೆ ನಾಲ್ಕೈದು ಗೋಲ್ಡ್ ಬ್ಯಾಂಗಲ್ಸ್ ಅಥವಾ ಬೀಡ್ಸ್ ಬಳಸಿದ ಡಿಸೈನ್ಡ್ ಬ್ಯಾಂಗಲ್ಸ್, ಟ್ರೆಂಡಿಯಾಗಿರುವ ಡಿಸೈನ್ಡ್ ಗ್ಲಾಸ್ ಬ್ಯಾಂಗಲ್ಸ್, ಬೆರಳಿಗೆ ಫಿಂಗರ್ ರಿಂಗ್ಸ್ ಸೇರಿದಂತೆ, ಸೊಂಟಕ್ಕೆ ಕಮರ್ಬಾಂದ್, ಕತ್ತಿಗೆ ಬ್ರೈಡಲ್ ಸೆಟ್ ನೆಕ್ಲೇಸ್-ಹಾರಗಳು, ಕ್ರಿಸ್ಟಲ್, ಕುಂದನ್ ಡಿಸೈನ್ ಇರುವ ಆ್ಯಂಕ್ಲೆಟ್ಗಳು ಲೆಕ್ಕವಿಲ್ಲದಷ್ಟು ಡಿಸೈನ್ನಲ್ಲಿ ಆಗಮಿಸಿದ್ದು, ಈ ಸೀಸನ್ನಲ್ಲಿ ಟ್ರೆಂಡಿಯಾಗಿವೆ. ಪರಿಣಾಮ ವೆಡ್ಡಿಂಗ್ ಸೀಸನ್ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ಜ್ಯುವೆಲ್ ಸ್ಟೈಲಿಸ್ಟ್ ಸಲಹೆ
- ಟ್ರೆಡಿಷನಲ್ ಡಿಸೈನ್ ಜ್ಯುವೆಲರಿಗಳು ಎಲ್ಲಾ ಸೀಸನ್ಗೂ ಹೊಂದಿಕೆಯಾಗುತ್ತವೆ.
- ಲೇಯರ್ ಹಾರಗಳು ಟ್ರೆಂಡಿಯಾಗಿವೆ.
- ಲಕ್ಷ್ಮಿ ಡಿಸೈನ್ ಜ್ಯುವೆಲರಿಗಳು ಇತ್ತೀಚೆಗೆ ಪಾಪುಲರ್ ಆಗಿವೆ.
- ಮದುವೆ ಮಾತ್ರವಲ್ಲ ಇತರೇ ಸಮಾರಂಭಗಳಿಗೂ ಧರಿಸಬಹುದಾದ ಜ್ಯುವೆಲರಿ ಆಯ್ಕೆ ಮಾಡಿ. ಖರೀದಿಸಿ.