ನಾಳೆಯೇ ಬಿಡುಗಡೆಯಾಗಲಿದೆ ಪಿಎಂ ಕಿಸಾನ್ 23ನೇ ಕಂತಿನ ಹಣ; ಡಿಟೇಲ್ಸ್ ಇಲ್ಲಿದೆ ನೋಡಿ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 23ನೇ ಕಂತಿನ ಹಣ ನಾಳೆ (ಶನಿವಾರ) ಬಿಡುಗಡೆಯಾಗಲಿದೆ. ಜೂನ್ 20 ರಂದು ಪಶ್ಚಿಮ ಬಂಗಾಳ ರಾಜ್ಯದ ತಾರಕೇಶ್ವರ್, ಹೂಗ್ಲಿಯಲ್ಲಿ ಸಂಜೆ 4:00 ಗಂಟೆಗೆ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ದೇಶದ ರೈತರ ಖಾತೆಗಳಿಗೆ ಅಧಿಕೃತವಾಗಿ ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ 23ನೇ ಕಂತಿನ ಹಣ ನಾಳೆ (ಶನಿವಾರ) ಬಿಡುಗಡೆಯಾಗಲಿದೆ. ಜೂನ್ 20 ರಂದು ಪಶ್ಚಿಮ ಬಂಗಾಳ ರಾಜ್ಯದ ತಾರಕೇಶ್ವರ್, ಹೂಗ್ಲಿಯಲ್ಲಿ ಸಂಜೆ 4:00 ಗಂಟೆಗೆ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ದೇಶದ ರೈತರ ಖಾತೆಗಳಿಗೆ ಅಧಿಕೃತವಾಗಿ ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ. ಪಿಎಂ ಕಿಸಾನ್ ಯೋಜನೆಯ ನಿಯಮಗಳ ಪ್ರಕಾರ, ಪ್ರತಿ 4 ತಿಂಗಳಿಗೊಮ್ಮೆ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
ಪ್ರತಿ ಕಂತಿನಲ್ಲಿ 6,000 ರೂ. ನೀಡಲಾಗುತ್ತದೆ. ಈ ಹಣವನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ನೀಡಲಾಗುತ್ತದೆ - ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್. ನಿಧಿಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 13 ರಂದು ಅಸ್ಸಾಂನ ಗುವಾಹಟಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22 ನೇ ಕಂತನ್ನು ಬಿಡುಗಡೆ ಮಾಡಿದ್ದರು. 9.32 ಕೋಟಿ ರೈತರಿಗೆ 18,640 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು?
ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ 23ನೇ ಕಂತಿಗೆ ಅರ್ಹರಾಗಲು ನೀವು ಈ ಕೆಳಗಿನ ಅಂಶಗಳಿರಬೇಕು
ಭಾರತೀಯ ನಾಗರಿಕ ಸಾಗುವಳಿ ಭೂಮಿಯ ಮಾಲೀಕತ್ವ ಹೊಂದಿದ್ದಾರೆ ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು
ತಿಂಗಳಿಗೆ ಕನಿಷ್ಠ 10,000 ರೂಪಾಯಿ ಪಿಂಚಣಿ ಪಡೆಯುವ ನಿವೃತ್ತರಾಗಿರಬಾರದು. ಆದಾಯ ತೆರಿಗೆಗೆ ಅರ್ಜಿ ಸಲ್ಲಿಸರಬಾರದು.
ಸಾಂಸ್ಥಿಕ ಭೂಮಾಲೀಕರಾಗಿರಬಾರದು.
ಪರಿಶೀಲಿಸುವುದು ಹೇಗೆ?
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – https://pmkisan.gov.in/
ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ, ಮತ್ತು 'ಡೇಟಾ ಪಡೆಯಿರಿ' ಆಯ್ಕೆಯನ್ನು ಆರಿಸಿ.
ನಿಮ್ಮ ಫಲಾನುಭವಿ ಸ್ಥಿತಿ ಪರದೆಯ ಮೇಲೆ ಬರುತ್ತದೆ.
ನೀವು ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು — 155261 ಮತ್ತು 011-24300606.
e-KYC ಪೂರ್ಣಗೊಳಿಸುವುದು: ರೈತರು ತಮ್ಮ ಆಧಾರ್ ಆಧಾರಿತ ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಿರಬೇಕು.
ಭೂ ದಾಖಲೆಗಳ ಪರಿಶೀಲನೆ : ನಿಮ್ಮ ಹೆಸರಿನಲ್ಲಿರುವ ಕೃಷಿ ಭೂಮಿಯ ವಿವರಗಳು ಪೋರ್ಟಲ್‌ನಲ್ಲಿ ಸರಿಯಾಗಿ ಲಿಂಕ್ ಆಗಿರಬೇಕು.
ಆಧಾರ್ ಮತ್ತು ಬ್ಯಾಂಕ್ ಖಾತೆ ಜೋಡಣೆ: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಮತ್ತು ಅದು ಸಕ್ರಿಯವಾಗಿರಬೇಕು (NPCI ಮ್ಯಾಪಿಂಗ್ ಆಗಿರಬೇಕು).