ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಳಪೆ ಆಹಾರ: ಕೇಟರಿಂಗ್ ವ್ಯವಸ್ಥಾಪಕರಿಗೆ ಶಾಸಕರ ಕಪಾಳಮೋಕ್ಷ

ಕಳಪೆ ಆಹಾರ: ಕೇಟರಿಂಗ್ ವ್ಯವಸ್ಥಾಪಕರಿಗೆ ಶಾಸಕರ ಕಪಾಳಮೋಕ್ಷ

ಕಳಪೆ ಆಹಾರ: ಕೇಟರಿಂಗ್ ವ್ಯವಸ್ಥಾಪಕರಿಗೆ ಶಾಸಕರ ಕಪಾಳಮೋಕ್ಷ

-

Profile
Vishwavani News Aug 16, 2022 12:36 PM
image-d36d271d-efa4-4770-9b16-81b5197d4001.jpg
image-8220756a-cae2-4718-8647-ca072185aed0.jpg
ಮುಂಬೈ: ಕಳಪೆ ಗುಣಮಟ್ಟದ ಆಹಾರ ನೀಡಿದ್ದಕ್ಕಾಗಿ ಏಕನಾಥ್ ಶಿಂಧೆ ಪಾಳೆಯದ ಶಿವಸೇನೆ ಶಾಸಕರೊಬ್ಬರು ಕೇಟರಿಂಗ್ ಸೇವೆಯ ವ್ಯವಸ್ಥಾಪಕ ರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಮಧ್ಯಾಹ್ನದ ಊಟದ ಕಾರ್ಯ ಕ್ರಮದ ಅಂಗವಾಗಿ ಕಾರ್ಮಿಕರಿಗೆ ಬಡಿಸಲಾಗುತ್ತಿರುವ ಕಳಪೆ ಗುಣಮಟ್ಟದ ಆಹಾರಕ್ಕಾಗಿ ಮ್ಯಾನೇಜರ್‌ಗೆ ಶಾಸಕ ಸಂತೋಷ್ ಬಂಗಾರ್ ನಿಂದಿಸಿ ಕಪಾಳಮೋಕ್ಷ ಮಾಡಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಬಂಗಾರ್ ಅವರು ಆಹಾರದ ಗುಣಮಟ್ಟದ ಬಗ್ಗೆ ದೂರು ಸ್ವೀಕರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ದೂರು ಬಂದ ನಂತರ ಅದನ್ನು ಸ್ವತಃ ಪರಿಶೀಲಿಸಲು ಅವರು ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ.