"ಅವರ ಹಾಡುಗಳು ಜನರ ಮನಸಲ್ಲಿ ಶಾಶ್ವತ"; ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
Asha Bhosle's Death: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ಇಂದು ಭಾನುವಾರ ನಿಧನರಾದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಆಶಾ ಭೋಸ್ಲೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ, ಅವರು ಭಾರತ ಕಂಡ ಅತ್ಯಂತ ಪ್ರತಿಮಾರೂಪದ ಮತ್ತು ಬಹುಮುಖ ಧ್ವನಿಗಳಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ.
ಸಂಗ್ರಹ ಚಿತ್ರ -
ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (Asha Bhosle) ಅವರು ಇಂದು (ಭಾನುವಾರ) ನಿಧನರಾದರು. ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಆಶಾ ಭೋಸ್ಲೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ, ಅವರು ಭಾರತ ಕಂಡ ಅತ್ಯಂತ ಪ್ರತಿಮಾರೂಪದ ಮತ್ತು ಬಹುಮುಖ ಧ್ವನಿಗಳಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ. ಎದೆ ಸೋಂಕಿನಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಆಶಾ ಭೋಂಸ್ಲೆ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದರು.
ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಮೋದಿ, ಭೋಸ್ಲೆ ನಿಧನದಿಂದಾಗಿ ಅವರ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. "ಭಾರತ ಕಂಡ ಅತ್ಯಂತ ಪ್ರತಿಮಾರೂಪದ ಮತ್ತು ಬಹುಮುಖ ಪ್ರತಿಭೆಯ ಧ್ವನಿಗಳಲ್ಲಿ ಒಬ್ಬರಾದ ಆಶಾ ಭೋಸ್ಲೆ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ದಶಕಗಳ ಕಾಲದ ಅವರ ಅಸಾಧಾರಣ ಸಂಗೀತ ಪ್ರಯಾಣವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿತು ಮತ್ತು ಪ್ರಪಂಚದಾದ್ಯಂತ ಅಸಂಖ್ಯಾತ ಹೃದಯಗಳನ್ನು ಮುಟ್ಟಿತು. ಅವರ ಭಾವಪೂರ್ಣ ಮಧುರ ಅಥವಾ ರೋಮಾಂಚಕ ಸಂಯೋಜನೆಗಳಾಗಿರಬಹುದು, ಅವರ ಧ್ವನಿಯು ಕಾಲಾತೀತ ತೇಜಸ್ಸನ್ನು ಹೊಂದಿತ್ತು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಅವರೊಂದಿಗಿನ ನನ್ನ ಸಂವಹನವನ್ನು ನಾನು ಯಾವಾಗಲೂ ಸ್ಮರಿಸುತ್ತೇನೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ಸಂಗೀತ ಪ್ರಿಯರಿಗೆ ನನ್ನ ಸಂತಾಪಗಳು. ಅವರು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ ಮತ್ತು ಅವರ ಹಾಡುಗಳು ಜನರ ಜೀವನದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತವೆ" ಎಂದು ಪ್ರಧಾನಿ ಹೇಳಿದ್ದಾರೆ.
ಆಶಾ ಭೋಸ್ಲೆ ಅವರ ಪಾರ್ಥಿವ ಶರೀರವನ್ನು ನಾಳೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಅವರ ನಿವಾಸದಲ್ಲಿ ಇರಿಸಲಾಗುವುದು. ಸಂಜೆ 4 ಗಂಟೆಗೆ ಶಿವಾಜಿ ಪಾರ್ಕ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಹೃದಯಾಘಾತದ ಹಿನ್ನೆಲೆ ಶನಿವಾರ (ಏಪ್ರಿಲ್ 11) ಆಶಾ ಭೋಸ್ಲೆ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರವಿವಾರ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ.
ಸ್ಯಾಂಡಲ್‌ವುಡ್‌ನೊಂದಿಗೆ ಆಶಾ ಭೋಸ್ಲೆ ನಂಟು; ಕನ್ನಡದ 3 ಹಾಡುಗಳಿಗೆ ಧ್ವನಿಯಾಗಿದ್ದ ʻಸ್ವರ ಸಾಮ್ರಾಜ್ಞಿʼ
ಆಶಾ ಭೋಸ್ಲೆ, ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ದಾಖಲೆ ನಿರ್ಮಿಸಿದ್ದಾರೆ. ಪದ್ಮ ವಿಭೂಷಣ (2008), ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2000) ಮಹಾರಾಷ್ಟ್ರ ಭೂಷಣ (1997), ನೈಟಿಂಗೇಲ್ ಆಫ್ ಏಷ್ಯಾ, ಸಿಂಗರ್ ಆಫ್ ದಿ ಮಿಲೇನಿಯಂ, ಹೀಗೆ ಹತ್ತು ಹಲವು ಪ್ರಶಸ್ತಿ ಮತ್ತು ಗೌರವಕ್ಕೆ ಭಾಜನರಾಗಿದ್ದ ಆಶಾ ಭೋಸ್ಲೆ ''ಉಮ್ರಾವ್ ಜಾನ್'' ಮತ್ತು ''ಇಜಾಝತ್'' ಚಿತ್ರಕ್ಕೆ ಎರಡು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು. 2001ರಲ್ಲಿ ಜೀವನಶ್ರೇಷ್ಠ ಸಾಧನೆಗಾಗಿ ಫಿಲ್ಮ್‌ಫೇರ್ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್ ಕೂಡ ಆಶಾ ಭೋಸ್ಲೆ ಅವರಿಗೆ ಲಭಿಸಿತ್ತು.