ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಮ್‌ ಆದ್ಮಿ ತ್ಯಜಿಸಿದ್ದು ಇದಕ್ಕೇ ; ಪಕ್ಷ ತೊರೆಯಲು ನಿಜವಾದ ಕಾರಣ ಬಿಚ್ಚಿಟ್ಟ ರಾಘವ್‌ ಚಡ್ಡಾ

ಆಮ್‌ ಆದ್ಮಿ ಪಕ್ಷದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮೂವರು ಸಂಸದರು ಅಧಿಕೃತವಾಗಿ ಪಕ್ಷ ತೊರೆದಿದ್ದು, ಇನ್ನೂ ಹಲವರು ಆಮ್‌ ಆದ್ಮಿಯಿಂದ ಹೊರ ಬರುವ ಸಾಧ್ಯತೆ ಹೆಚ್ಚಿದೆ. ಪ್ರಮುಖರಾದ ರಾಘವ್‌ ಚಡ್ಡಾ ಹಾಗೂ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅಧಿಕೃತವಾಗಿ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.

ಪಕ್ಷ ತೊರೆಯಲು ನಿಜವಾದ ಕಾರಣ ಬಿಚ್ಚಿಟ್ಟ ರಾಘವ್‌ ಚಡ್ಡಾ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Apr 24, 2026 7:39 PM

ನವದೆಹಲಿ: ಆಮ್‌ ಆದ್ಮಿ ಪಕ್ಷದಲ್ಲಿ (Aam Admi Party) ಮಹತ್ವದ ಬೆಳವಣಿಗೆ ನಡೆದಿದ್ದು, ಮೂವರು ಸಂಸದರು ಅಧಿಕೃತವಾಗಿ ಪಕ್ಷ ತೊರೆದಿದ್ದು, ಇನ್ನೂ ಹಲವರು ಆಮ್‌ ಆದ್ಮಿಯಿಂದ ಹೊರ ಬರುವ ಸಾಧ್ಯತೆ ಹೆಚ್ಚಿದೆ. ಪ್ರಮುಖರಾದ ರಾಘವ್‌ ಚಡ್ಡಾ (Raghav Chadha) ಹಾಗೂ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅಧಿಕೃತವಾಗಿ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಪಕ್ಷವನ್ನು ತೊರೆಯುವ ಹಿಂದಿರುವ ನಿಜವಾದ ಕಾರಣದ ಕುರಿತು ಮಾತನಾಡಿರುವ ರಾಘವ್‌, 2012 ರಲ್ಲಿ ಸ್ಥಾಪನೆಯಾದಾಗಿನಿಂದ ತಾವು ಪಕ್ಷದಲ್ಲಿದ್ದು ನಿಷ್ಠೆಯಿಂದ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮತನಾಡಿದ ಅವರು, ನಾನು ಆಮ್‌ ಆದ್ಮಿ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ ಮತ್ತು ಅದರಿಂದ ದೂರವಿದ್ದೇನೆ ಎಂದು ನೀವು ವರ್ಷಗಳಿಂದ ನನ್ನನ್ನು ಕೇಳುತ್ತಿದ್ದೀರಿ. ಆ ಸಮಯದಲ್ಲಿ ನಾನು ಏನನ್ನೂ ಹೇಳುತ್ತಿರಲಿಲ್ಲ ಮತ್ತು ವಿಷಯಗಳನ್ನು ಉತ್ತಮಗೊಳಿಸಲು ಕೆಲಸ ಮಾಡುತ್ತಲೇ ಇದ್ದೆ. ಆದರೆ ಇಂದು ನಾನು ನಿಮಗೆ ನಿಜವಾದ ಕಾರಣವನ್ನು ಹೇಳುತ್ತೇನೆ: ನಾನು ಅವರ ಅಪರಾಧಗಳ ಭಾಗವಾಗಲು ಬಯಸಲಿಲ್ಲ. ಇದರಿಂದ ಅವರಿಂದ ನಾನು ದೂರವಾದೆ ಎಂದು ಅವರು ಹೇಳಿದ್ದಾರೆ.



ಮುಂದುವರಿದು, ತಮ್ಮ ಮತ್ತು ಇತರ ಸಂಸದರ ಮುಂದೆ ಎರಡು ಆಯ್ಕೆಗಳಿತ್ತು. ಒಂದೋ ರಾಜಕೀಯವನ್ನು ತ್ಯಜಿಸಿ ಹಿಂದಿನ "15-16 ವರ್ಷಗಳಲ್ಲಿ" ಮಾಡಿದ ಕೆಲಸವನ್ನು ತ್ಯಜಿಸಿ ಅಥವಾ ತಮ್ಮ ಅನುಭವ ಮತ್ತು ಕೌಶಲ್ಯಗಳನ್ನು ಬಳಸಿಕೊಂಡು ಜೀವನ ನಡೆಸುವುದು. ಇನ್ನೊಂದು ಭಾರತದ ಸಂವಿಧಾನದ ನಿಬಂಧನೆಗಳನ್ನು ಚಲಾಯಿಸಲು ಮತ್ತು ಪಕ್ಷವನ್ನು ತ್ಯಜಿಸುವುದು. ಆಮ್ ಆದ್ಮಿ ಪಕ್ಷವು ತನ್ನ ತತ್ವಗಳು, ನೈತಿಕತೆ ಮತ್ತು ಮೌಲ್ಯಗಳಿಂದ ದೂರ ಸರಿದಿದೆ ಮತ್ತು ರಾಷ್ಟ್ರ ಅಥವಾ ರಾಷ್ಟ್ರ ನಿರ್ಮಾಣಕ್ಕಾಗಿ ಅಲ್ಲ, ಬದಲಾಗಿ ತನ್ನದೇ ಆದ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

ಆಮ್‌ ಆದ್ಮಿ ಪಕ್ಷಕ್ಕೆ ರಾಘವ್‌ ಚಡ್ಡಾ ರಾಜೀನಾಮೆ: ಬಿಜೆಪಿ ಸೇರುವುದಾಗಿ ಅಧಿಕೃತ ಘೋಷಣೆ

ರಾಘವ್‌ ಚಡ್ಡಾ ಆಮ್‌ ಆದ್ಮಿ ಪರ ಮಾತನಾಡುವುದಿಲ್ಲ ಎಂದು ಆಪ್‌ ನಾಯಕರು ಆರೋಪ ಮಾಡಿದ್ದರು. ಅರವಿಂದ್ ಕೇಜ್ರಿವಾಲ್ ಜೈಲು ವಾಸ, ಮನೀಶ್ ಸಿಸೋಡಿಯಾ ಜೈಲು ವಾಸ, ಜಾಮೀನಿನ ಮೇಲೆ ಬಿಡುಗಡೆ ಸಂದರ್ಭಗಳಲ್ಲಿ ಆಪ್ ನಾಯಕರ ಪರ ರಾಘವ್ ಚಡ್ಡಾ ಬಹಿರಂಗವಾಗಿ ಎಲ್ಲೂ ಹೇಳಿಕೆ ನೀಡಿಲ್ಲ ಎನ್ನುವ ಅಸಮಾಧಾನವಿತ್ತು. ಇದಾದ ಬಳಿಕ ಇತ್ತೀಗೆಷ್ಟೆ ರಾಜ್ಯಸಭಾ ಡೆಪ್ಯೂಟಿ ಸ್ಥಾನದಿಂದ ವಜಾ ಮಾಡಿತ್ತು.