ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶದ ಪಡಿತರ ವ್ಯವಸ್ಥೆಗೆ 'ಸಾರ್ಥಕ್ ಪಿಡಿಎಸ್' ಯೋಜನೆ: ಕೇಂದ್ರದಿಂದ 25,530 ಕೋಟಿ ರುಪಾಯಿ ಅನುದಾನ

Pralhad Joshi: 16ನೇ ಹಣಕಾಸು ಆಯೋಗದ ಅವಧಿಯಲ್ಲಿ ‘ಸಾರ್ಥಕ್ ಪಿಡಿಎಸ್’ಗಾಗಿ ಕೇಂದ್ರ ಸರ್ಕಾರ ತನ್ನ ಪಾಲಿನ ₹ 25,530 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ. ದೇಶದ ಪಡಿತರ ವ್ಯವಸ್ಥೆಯಲ್ಲಿ ಇದೊಂದು ಸುಧಾರಿತ ತಂತ್ರಜ್ಞಾನದ ಯೋಜನೆಯಾಗಿ 2031ರವರೆಗೆ ಮುಂದುವರಿಯಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ದೇಶದ ಪಡಿತರ ವ್ಯವಸ್ಥೆಗೆ 'ಸಾರ್ಥಕ್ ಪಿಡಿಎಸ್' ಯೋಜನೆ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ) -

Profile
Siddalinga Swamy May 28, 2026 9:48 PM

ನವದೆಹಲಿ, ಮೇ 28: ಕೇಂದ್ರ ಸರ್ಕಾರ ದೇಶದ ಪ್ರತಿ ನಾಗರಿಕರಿಗೂ ಆಹಾರ ಭದ್ರತೆ ಮತ್ತು ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಅತ್ಯಂತ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಮತ್ತೊಂದು ಹೊಸ ಹೆಜ್ಜೆ ಇರಿಸಿದ್ದು, ಇದೀಗ ʼಸಾರ್ಥಕ್ ಪಿಡಿಎಸ್ʼ ಯೋಜನೆಗೆ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಈ ಹೊಸ ಯೋಜನೆ ಜಾರಿಗೆ ಸಮ್ಮತಿ ಸೂಚಿಸಿತು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮಾಹಿತಿ ಹಂಚಿಕೊಂಡಿದ್ದಾರೆ.

ಕೇಂದ್ರ ಸರ್ಕಾರ, ದೇಶದ ಜನರಿಗೆ ಸಾಮಾಜಿಕ ಮತ್ತು ಕಾನೂನು ಬದ್ಧತೆ ಜತೆಗೆ ಅಗತ್ಯ, ಗುಣಮಟ್ಟದ ಆಹಾರ ಧಾನ್ಯಗಳ ಲಭ್ಯತೆಯನ್ನೂ ಖಚಿತಪಡಿಸಿದೆ. ಅದರಂತೆ NFSA ಅಡಿಯಲ್ಲಿ 81.35 ಕೋಟಿ ಜನರಿಗೆ ಆಹಾರ ಧಾನ್ಯ ಪೂರೈಸುವ ನಿಟ್ಟಿನಲ್ಲಿ "ಸಾರ್ಥಕ್ ಪಿಡಿಎಸ್" ಯೋಜನೆ ಪರಿಣಾಮಕಾರಿಯಾಗಲಿದೆ ಎಂದಿದ್ದಾರೆ.

₹ 25,530 ಕೋಟಿ ಅನುದಾನ‌

16ನೇ ಹಣಕಾಸು ಆಯೋಗದ ಅವಧಿಯಲ್ಲಿ ‘ಸಾರ್ಥಕ್ ಪಿಡಿಎಸ್’ಗಾಗಿ ಕೇಂದ್ರ ಸರ್ಕಾರ ತನ್ನ ಪಾಲಿನ 25,530 ಕೋಟಿ ರುಪಾಯಿ ಅನುದಾನ ಒದಗಿಸಿ ಅನುಮೋದನೆ ನೀಡಿದೆ. ದೇಶದ ಪಡಿತರ ವ್ಯವಸ್ಥೆಯಲ್ಲಿ ಇದೊಂದು ಸುಧಾರಿತ ತಂತ್ರಜ್ಞಾನದ ಯೋಜನೆಯಾಗಿ 2031ರವರೆಗೆ ಅಂದರೆ 5 ವರ್ಷಗಳ ಕಾಲ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಪಡಿತರ ಸಾಗಣೆ, ಆಹಾರ ಧಾನ್ಯಗಳ ನಿರ್ವಹಣೆ, FPS ವಿತರಕರ ಮಾರ್ಜಿನ್‌ಗಾಗಿ ಮಾಡುವ ವೆಚ್ಚವನ್ನು ಪೂರೈಸಲು 'ಸಾರ್ಥಕ್ ಪಿಡಿಎಸ್ ' ಒಂದು ಸಾರ್ಥಕ್ಯದ ಯೋಜನೆಯಾಗಿದ್ದು, ಇದರ ಮೂಲಕ ಕೇಂದ್ರ ನೆರವಿನ ಮಾನದಂಡಗಳನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.‌

ಸಿಎಂ ರಾಜಿನಾಮೆ ಒಬಿಸಿಗೆ ರಾಹುಲ್ ಗಾಂಧಿ ಕೊಟ್ಟ ಬಳುವಳಿ: ಪ್ರಲ್ಹಾದ್‌ ಜೋಶಿ ವ್ಯಂಗ್ಯ

'ಸಾರ್ಥಕ್ ಪಿಡಿಎಸ್' ಅನ್ನು ಎರಡು ಯೋಜನೆಗಳನ್ನು ಸಂಯೋಜಿಸಿ ಒಂದು ಛತ್ರಿ ಯೋಜನೆಯಾಗಿ ರೂಪಿಸಿದ್ದು, ಇದು ಆಯಾ ರಾಜ್ಯದೊಳಗೆ ಆಹಾರ ಧಾನ್ಯ ಸಾಗಣೆ, ರಾಜ್ಯ ಸಂಸ್ಥೆಗಳಿಗೆ ಸಹಾಯ ಮತ್ತು NFSA ಅಡಿಯಲ್ಲಿ FPS ವಿತರಕರ ಲಾಭಾಂಶ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಮೂಲಕ ಆಧುನೀಕರಣ, SMART PDS, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 (NFSA) ಅನುಷ್ಠಾನವನ್ನು ಬಲಪಡಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.