ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿ ಹೈಕೋರ್ಟ್‌ನಲ್ಲಿ ಹಿನ್ನಡೆ: ನ್ಯಾಯಾಂಗ ಕಸ್ಟಡಿ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಸಿಜೆಪಿಯ ಸೌರವ್ ದಾಸ್, ಆಶುತೋಷ್ ರಾಂಕಾ

Das and Ranka Withdraw Plea: ತಮ್ಮ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಹಿಂಪಡೆದಿದ್ದಾರೆ. ಈ ಪ್ರಕರಣ ಮತ್ತೆ ವಿಚಾರಣೆಗೆ ಬರಲಿರುವಾಗ ನೀವು ಇಲ್ಲಿಗೆ ಏಕೆ ಬಂದಿದ್ದೀರಿ? ಎಂದು ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ.

ಕಸ್ಟಡಿ ವಿಸ್ತರಣೆ ಪ್ರಶ್ನಿಸಿದ್ದ ಅರ್ಜಿ ಹಿಂಪಡೆದ ಸಿಜೆಪಿಯ ದಾಸ್, ರಾಂಕಾ

ದೆಹಲಿಯ ನ್ಯಾಯಾಲಯದಲ್ಲಿ ಸಿಜೆಪಿ ನಾಯಕರು -

Priyanka P
Priyanka P Oct 21, 2026 6:02 PM

ನವದೆಹಲಿ, ಅ. 21: ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತಮ್ಮ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ (Delhi High Court) ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಸುಬ್ರಮೊನಿಯಂ ಪ್ರಸಾದ್ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿದರು.

ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ತಮ್ಮ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬುಧವಾರ (ಅ. 21) ಮಧ್ಯಾಹ್ನ 2 ಗಂಟೆಗೆ ಕೆಳಹಂತದ ಎಸ್ಇಎಂ ನ್ಯಾಯಾಲಯವು ಅವರು ಜಾಮೀನಿಗಾಗಿ ಸಲ್ಲಿಸಿದ್ದ ಖಾತರಿದಾರರ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಲು ನಿರ್ಧರಿಸಿತ್ತು. ಹೀಗಾಗಿ ದೆಹಲಿ ಹೈಕೋರ್ಟ್‌ ನ್ಯಾ. ಸುಬ್ರಮೊನಿಯಂ ಪ್ರಸಾದ್ ಸದ್ಯಕ್ಕೆ ಅರ್ಜಿಯನ್ನು ಹಿಂಪಡೆಯುವಂತೆ ಸೂಚಿಸಿದರು.

ಈ ಪ್ರಕರಣ ಮತ್ತೆ ವಿಚಾರಣೆಗೆ ಬರಲಿರುವಾಗ ನೀವು ಇಲ್ಲಿಗೆ ಏಕೆ ಬಂದಿದ್ದೀರಿ? ಇದೇ ವಿಚಾರವನ್ನು ವಿಚಾರಣಾ ನ್ಯಾಯಾಲಯದಲ್ಲಿ ಏಕೆ ಪ್ರಶ್ನಿಸಬಾರದು? ನೀವು ಈ ಅರ್ಜಿಯನ್ನು ಹಿಂಪಡೆದು, ಅಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಿ. ಕಾನೂನಿನಲ್ಲಿ ಅನುಮತಿಸಿರುವ ವಿಧಾನವನ್ನು ಅನುಸರಿಸಿ ಮತ್ತೆ ಅರ್ಜಿ ಸಲ್ಲಿಸಿ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಸಿಜೆಪಿ ಬೆಂಬಲಕ್ಕೆ ನಿಂತ ಅಣ್ಣಾಮಲೈ; ದೆಹಲಿ ಪೊಲೀಸರ ಕ್ರಮದ ವಿರುದ್ಧ ವಾಗ್ದಾಳಿ

ಸಿಜೆಪಿ ನಾಯಕರು ಈಗಲೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ವಾದ ಮಾಡುವ ಬದಲು, ಮೊದಲು ಕೆಳಹಂತದ ನ್ಯಾಯಾಲಯದಲ್ಲಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ನಂತರ ಅಗತ್ಯವಿದ್ದರೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದಲ್ಲವೇ? ಕಾನೂನಿನ ಪ್ರಕಾರ ಅಗತ್ಯವೇ ಇಲ್ಲದಿರಬಹುದಾದ ಸಂದರ್ಭದಲ್ಲಿ, ಇಂದೇ ನಿಮ್ಮ ಅಸ್ತ್ರವನ್ನು ಪ್ರಯೋಗಿಸುವುದು ಏಕೆ? ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು.

ದೆಹಲಿ ನಗರದ ಮಂದಿರ್ ಮಾರ್ಗ ಪೊಲೀಸ್ ಠಾಣೆಯಲ್ಲಿರುವ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಕ್ಟೋಬರ್ 19ರಂದು ದಾಸ್ ಮತ್ತು ರಾಂಕಾ ಅವರ ಬಂಧನವನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಅವರು ಅರ್ಜಿ ಸಲ್ಲಿಸಿದ್ದರು. ಜಂತರ್ ಮಂತರ್‌ನ ಬೀಗ ಹಾಕಲಾಗಿದ್ದ ಗೇಟ್‌ಗಳನ್ನು ಹತ್ತಿ ಒಳನುಗ್ಗಿದ ಆರೋಪದ ಮೇಲೆ ದಾಸ್ ಮತ್ತು ರಾಂಕಾ ಅವರನ್ನು ಅಕ್ಟೋಬರ್ 14ರಿಂದ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಅರ್ಜಿಯನ್ನು ಹಿಂಪಡೆಯಬೇಕೇ, ನ್ಯಾಯಾಲಯವೇ ತೀರ್ಪು ನೀಡಬೇಕೇ ಅಥವಾ ಬೇರೆ ನ್ಯಾಯಪೀಠದ ಮುಂದೆ ವಿಚಾರಣೆ ನಡೆಸುವಂತೆ ಕೇಳಬೇಕೇ ಎಂಬ ಬಗ್ಗೆ ತಮ್ಮ ಕಕ್ಷಿದಾರರ ಸಲಹೆ ಪಡೆಯಲು ವಕೀಲ ಅಭಿಕ್ ಚಿಮ್ನಿ ಅವರಿಗೆ ನ್ಯಾಯಾಲಯ ಅವಕಾಶ ನೀಡಿತು. ಕೆಲವೇ ನಿಮಿಷಗಳಲ್ಲಿ ರಾಂಕಾ ಮತ್ತು ದಾಸ್ ತಮ್ಮ ಅರ್ಜಿ ಹಿಂಪಡೆದರು.

ವಿಚಾರಣೆಯ ಆರಂಭದಲ್ಲಿ, ನ್ಯಾಯಾಲಯವು ದಾಸ್ ಮತ್ತು ರಾಂಕಾ ಅವರ ನಡವಳಿಕೆಯನ್ನು ಪ್ರಶ್ನಿಸಿತು. ಪ್ರತಿಭಟನೆ ನಡೆಸಲು ಅನುಮತಿ ಇಲ್ಲದಿದ್ದರೂ ಜಂತರ್ ಮಂತರ್‌ನಲ್ಲಿ ಬ್ಯಾರಿಕೇಡ್‌ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬ್ಯಾರಿಕೇಡ್ ಮುರಿದಾಗ 10-20 ಜನರು ನುಗ್ಗುವ ಸಾಧ್ಯತೆ ಇದೆ. ಇತರ ದೇಶಗಳಲ್ಲಿ ಬೆಂಕಿ ಹಚ್ಚಿರುವುದು ಮತ್ತು ಅಶಾಂತಿ ಘಟನೆಗಳನ್ನು ಉಲ್ಲೇಖಿಸಿದೆ.