Subramanyam: ಮಾಡದ ತಪ್ಪಿಗೆ ಶಿಕ್ಷೆ- 43 ವರ್ಷಗಳ ಬಳಿಕ ಅಮೆರಿಕ ಜೈಲಿನಿಂದ ರಿಲೀಸ್ ಆದ ಭಾರತೀಯ!
Indian-Origin Man Freed from US Prison: ತಾನು ಮಾಡದ ತಪ್ಪಿಗೆ ನಲವತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಭಾರತದ ಪ್ರಜೆ ಸುಬ್ರಮಣ್ಯಂ ಅಲಿಯಾಸ್ "ಸುಬು" ವೇದಂರನ್ನು ಅಮೆರಿಕದ ಇಮಿಗ್ರೇಶನ್ ಅಧಿಕಾರಿಗಳು ಮತ್ತೆ ವಶಕ್ಕೆ ಪಡೆದಿದ್ದಾರೆ. ಈ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಗೊಂಡ 64 ವರ್ಷದ ಭಾರತೀಯ ಮೂಲದ ಸುಬು ಅವರನ್ನು, 1980ರ ದಶಕದಲ್ಲಿ ಹೊರಡಿಸಲಾದ ಗಡಿಪಾರು ಆದೇಶದ ಆಧಾರದ ಮೇಲೆ ಅಮೆರಿಕದ ಇಮಿಗ್ರೇಶನ್ ಮತ್ತು ಕಸ್ಟಮ್ಸ್ ಎನ್‌ಫೋರ್ಸ್ಮೆಂಟ್ ಅಧಿಕಾರಿಗಳು ಬಂಧಿಸಿದ್ದಾರೆ.

ಸುಬ್ರಮಣ್ಯಂ -

ನವದೆಹಲಿ: ತಾನು ಮಾಡದ ಅಪರಾಧಕ್ಕಾಗಿ ಪೆನ್ಸಿಲ್ವೇನಿಯಾದ (Pennsylvania) ಜೈಲಿನಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಸುಬ್ರಮಣ್ಯಂ (Subramanyam) ಅಲಿಯಾಸ್ "ಸುಬು" ವೇದಂ(Subu Vedam)ರನ್ನು ಅಮೆರಿಕದ ಇಮಿಗ್ರೇಶನ್ (Immigration) ಅಧಿಕಾರಿಗಳು ಮತ್ತೆ ವಶಕ್ಕೆ ಪಡೆದಿದ್ದಾರೆ. ಈ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಗೊಂಡ 64 ವರ್ಷದ ಭಾರತೀಯ ಮೂಲದ ಸುಬು ಅವರನ್ನು, 1980ರ ದಶಕದಲ್ಲಿ ಹೊರಡಿಸಲಾದ ಗಡಿಪಾರು ಆದೇಶದ ಆಧಾರದ ಮೇಲೆ ಅಮೆರಿಕದ ಇಮಿಗ್ರೇಶನ್ ಮತ್ತು ಕಸ್ಟಮ್ಸ್ ಎನ್‌ಫೋರ್ಸ್ಮೆಂಟ್ (Immigration and Customs Enforcement) ಅಧಿಕಾರಿಗಳು ಬಂಧಿಸಿದ್ದಾರೆ. ಬಾಲ್ಯದಿಂದಲೂ ಅಮೆರಿಕದಲ್ಲೇ ಜೀವನ ನಡೆಸಿರುವ ಸುಬುರನ್ನು ಗಡಿಪಾರು ಮಾಡದಂತೆ ಅವರ ಕುಟುಂಬ ಹೋರಾಟ ನಡೆಸುತ್ತಿದೆ.
ಮಾಡದ ತಪ್ಪಿಗಾಗಿ 43 ವರ್ಷ ಶಿಕ್ಷೆ
ವೇದಂ ಅವರನ್ನು 1983ರಲ್ಲಿ ತಮ್ಮ ಸ್ನೇಹಿತ ಥಾಮಸ್ ಕಿನ್ಸರ್‌ನ (Thomas Kinser) ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿ ಬಂಧಿಸಲಾಗಿತ್ತು. ತಾವು ನಿರಪರಾಧಿ ಎಂದು ದಶಕಗಳವರೆಗೂ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರೂ, ಅವೆಲ್ಲವೂ ತಿರಸ್ಕಾರಗೊಂಡಿದ್ದವು. 2022ರಲ್ಲಿ ಹೊರಬಂದ ಹೊಸ ವೈಜ್ಞಾನಿಕ ಸಾಕ್ಷ್ಯಗಳಿಂದಾಗಿ (Forensic Evidence), ಗುಂಡಿನ ಗಾಯ, ನ್ಯಾಯಾಲಯದಲ್ಲಿ ಸಲ್ಲಿಸಲಾದ ಶಸ್ತ್ರಾಸ್ತ್ರದೊಂದಿಗೆ ಹೊಂದಿಕೆಯಾಗದಿರುವುದು ಬೆಳಕಿಗೆ ಬಂತು. ನಂತರದ ತನಿಖೆಯಲ್ಲಿ ಎಫ್‌ಬಿಐ (FBI) ವರದಿಯನ್ನು ತಡೆಯಲಾಗಿತ್ತು ಎಂಬುದು ಬಹಿರಂಗವಾಯಿತು ಎಂದು ಮನ್ನಿಕಂಟ್ರೋಲ್ (Moneycontrol) ವರದಿ ನೀಡಿದೆ.
ಈ ಸುದ್ದಿಯನ್ನು ಓದಿ: Viral News: ಮಗುವಿನಂತೆ ಸಾಕಿ ಬೆಳೆಸಿದ್ದ 'ಅಶ್ವತ್ಥ' ಮರಕ್ಕೆ ಕಿಡಿಗೇಡಿಗಳಿಂದ ಕೊಡಲಿ ಪೆಟ್ಟು! ಬಿಕ್ಕಿ ಬಿಕ್ಕಿ ಅತ್ತ ವೃಕ್ಷಮಾತೆ
ಈ ಕಾರಣದಿಂದಾಗಿ, ಸೆಂಟರ್ ಕೌಂಟಿಯ (Centre County) ನ್ಯಾಯಾಧೀಶರು ವೇದಂ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಈ ವರ್ಷ ಪ್ರಾರಂಭದಲ್ಲಿ ರದ್ದುಗೊಳಿಸಿದ್ದರು. ಜಿಲ್ಲಾ ಅಟಾರ್ನಿ ಬರ್ನಿ ಕಂಟೋರ್ನಾ (Bernie Cantorna), ಹಳೆಯ ಪ್ರಕರಣ ಮತ್ತು ಸಾಕ್ಷಗಳ ಕೊರತೆಯನ್ನು ಉಲ್ಲೇಖಿಸಿ ವೇದಂ ವಿರುದ್ಧದ ಎಲ್ಲಾ ಆರೋಪಗಳನ್ನು ವಜಾಗೊಳಸಿದ್ದಾರೆ. ಈ ಮೂಲಕ ಸುಬು ವೇದಂ, ತಾವು ಮಾಡದ ತಪ್ಪಿಗಾಗಿ ಪೆನ್ಸಿಲ್ವೇನಿಯಾದಲ್ಲಿ ದೀರ್ಘಾವಧಿಯವರೆಗೆ ಶಿಕ್ಷೆ ಅನುಭವಿಸಿ ಕೈದಿ ಎಂದೆನಿಸಿಕೊಂಡಿದ್ದಾರೆ.
ಸುಬು ವೇದಂ ಯಾರು?
ಭಾರತದ(India)ಲ್ಲಿ ಜನಿಸಿದ ಸುಬು ವೇದಂ, ಕೇವಲ 9 ತಿಂಗಳದವರಾಗಿದ್ದಾಗಲೇ ಅವರನ್ನು ಅಮೆರಿಕಕ್ಕೆ ಕರೆತರಲಾಗಿತ್ತು. ಪೆನ್ಸಿಲ್ವೇನಿಯಾದಲ್ಲಿ ಬೆಳೆದ ಅವರು, ತಾವು ಮಾಡದ ತಪ್ಪಿಗಾಗಿ ತಮ್ಮ ಸಂಪೂರ್ಣ ವಯಸ್ಕ ಜೀವನವನ್ನು ಜೈಲಿನಲ್ಲೇ ಕಳೆದರು. "ಭಾರತವು ಸುಬು ಅವರಿಗೆ ಸಂಪೂರ್ಣ ಬೇರೆ ಜಗತ್ತಿನಂತಿದೆ. ಕೇವಲ 9 ತಿಂಗಳಿದ್ದಾಗ ಅವರು ಭಾರತವನ್ನು ಬಿಟ್ಟಿದ್ದರು. ಅವರ ಎಲ್ಲಾ ಕುಟುಂಬಸ್ಥರು ಪೆನ್ಸಿಲ್ವೇನಿಯಾ(Pennsylvania) ಮತ್ತು ಕೆನಡಾ(Canada)ದಲ್ಲಿ ಇದ್ದಾರೆ," ಎಂದು ಸುಬು ಅವರ ಸಂಬಂಧಿ ಜೊಯಿ ಮಿಲ್ಲರ್ ವೇದಮ್ ಹೇಳಿದ್ದಾರೆ.
ಈ ನಡುವೆ, ಯುವಕರಾಗಿದ್ದಾಗ ಡ್ರಗ್ಸ್ ಪ್ರಕರಣವೊಂದರಲ್ಲಿವಿಧಿಸಲಾಗಿದ್ದ ಗಡಿಪಾರು ಶಿಕ್ಷೆಯ ಆಧಾರದ ಮೇಲೆ ಸುಬು ಅವರನ್ನು ICE ಮತ್ತೆ ವಶಕ್ಕೆ ಪಡೆದಿದೆ. "ಸುಬು ತಾವು ಮಾಡದ ತಪ್ಪಿಗಾಗಿ ಶಿಕ್ಷೆಗೊಳಗಾಗದಿದ್ದಿದ್ದೆ, ಅವರ ಇಮಿಗ್ರೇಶನ್ ಪ್ರಕರಣ ವರ್ಷಗಳ ಹಿಂದೆ ಇತ್ಯರ್ಥವಾಗುತ್ತಿತ್ತುಮ" ಎಂದು ಅವರ ವಕೀಲ ಅವಾ ಬೆನಾಕ್ ಹೇಳಿದ್ದಾರೆ. ಇನ್ನು ಸುಬು ಗಡಿಪಾರಿನಿಂದ ಪಾರು ಮಾಡಲು ಅವರ ಕುಟುಂಬಸ್ಥರು ಸಾರ್ವಜನಿಕ ಅಭಿಯಾನದೊಂದಿಗೆ ಕಾನೂನು ಹೋರಾಟ ಆರಂಭಿಸಿದ್ದಾರೆ.